ಭ್ರಷ್ಟಾಚಾರ ನಿರ್ಮೂಲನ ಸಾಧ್ಯವೇ ?

ಸುನೀಲಸಿಂಗ ಲದ್ದಿಗೇರಿ

ಗದಗ : ಸಾರ್ವಜನಿಕ ಆಡಳಿತ ವ್ಯವಸ್ಥ್ಯೆ ಮತ್ತು ಖಾಸಗಿ ಆಡಳಿತ ವ್ಯವಸ್ಥ್ಯೆಗಳ ಮಧ್ಯೆದಲ್ಲಿ ಮಧ್ಯವರ್ತಿಗಳ ಹಾವಳಿಯಿಂದಾಗಿ ಭ್ರಷ್ಟಾಚಾರ ದೇಶಾದ್ಯಂತ ಮಿತಿಮೀರಿ ತಾಂಡವಾಡುತ್ತಿದೆ, ಮಧ್ಯವರ್ತಿಗಳ ಮುಕ್ತ ಆಡಳಿತ ವ್ಯವಸ್ಥ್ಯೆ ನಿರ್ಮಾಣವಾದರೇ ದೆಹಲಿ ಆಡಳಿತದಿಂದ ಗ್ರಾಮ ಆಡಳಿತದವರೆಗೂ ಭ್ರಷ್ಟಾಚಾರವನ್ನು ಮುಕ್ತಗೊಳಿಸಬಹುದು,
ಭ್ರಷ್ಟಾಚಾರವನ್ನು ವಿದೇಶದಿಂದ ಆಮದು ಮಾಡಿಕೊಂಡಿದ್ದಲ್ಲಾ, ಬದಲಾಗಿ ಇದೊಂದು ಐತಿಹಾಸಿಕ ಸ್ಥಳೀಯ ಪ್ರಕ್ರೀಯೆ ಆಗಿದೆ ಎನ್ನುತ್ತಿದೆ ಅಮೇರಿಕಾದ ವಿಕಲೀಕ್ಸ್ ವರದಿ,
ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಹೊರತಾಗಿಯೂ ಭಾರತ ದೇಶದಲ್ಲಿ ನಾಗರಿಕರು ಮೂಲಭೂತ ಸೌಲಭ್ಯ ಪಡೆಯಲು ಲಂಚ ನೀಡಲೇಬೇಕಾದ ಒತ್ತಡದಲ್ಲಿ ಸಿಲುಕಿದ್ದಾರೆ ಎನ್ನುತ್ತಿದೆ ಟ್ರಾನ್ಸಪರೆನ್ಸಿ ಇಂಟರ ನ್ಯಾಷನಲ್ ವರದಿ, ಈ ವರದಿಯ ಪ್ರಕಾರ ಸರಕಾರಿ ಸಾರ್ವಜನಿಕ ಸೇವೆಗಳಾದ ಶಾಲೆ, ಆಸ್ಪತ್ರೆಗಳಂತಹ ಮೂಲಭೂತ ಸೌಕರ್ಯಗಳನ್ನು ಪಡೆಯಲು ೧೦ ಜನರಲ್ಲಿ ೭ ಜನರು ಲಂಚ ನೀಡುವ ಪರಿಸ್ಥಿತಿಯಲ್ಲಿದ್ದಾರೆ, ಶೇಕಡಾ ೬೯ ರಷ್ಟು ಜನರು ಲಂಚ ನೀಡುತ್ತಿದ್ದಾರೆಂದು ಟ್ರಾನ್ಸಪರೆನ್ಸಿ ಇಂಟರ ನ್ಯಾಷನಲ್ ವರದಿ ಒತ್ತಿ ಒತ್ತಿ ಹೇಳುತ್ತಿದೆ,


ಸಾರ್ವಜನಿಕ ಆಡಳಿತ ವ್ಯವಸ್ಥ್ಯೆ ಮತ್ತು ಖಾಸಗಿ ಆಡಳಿತದ ರ್ನಿಹಿಸುತ್ತಿರುವ ಬೆರಳಣಿಕೆ ಅಧಿಕಾರಿಗಳನ್ನು ಹೊರತುಪಡಿಸಿದರೇ ನೂರಕ್ಕೂ ೯೯ ರಷ್ಟು ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿರುವುದಕ್ಕೆ ಬುಧವಾರ ಬೆಳ್ಳಂ ಬೆಳಿಗ್ಗೆ ರಾಜ್ಯಾದ್ಯಂತ ಏಕ ಕಾಲಕ್ಕೆ ಎಸಿಬಿ ಹಲವು ಇಲಾಖೆಗಳ ೧೮ ಅಧಿಕಾರಿಗಳ ಮನೆ ಹಾಗೂ ಅವರ ಕಚೇರಿಯ ಮೇಲೆ ನಡೆಸಿದ ದಾಳಿಯೇ ಸಾಕ್ಷಿಯಾಗಿದೆ,
ಎಸಿಬಿ ದಾಳಿಗಳು ದೇಶಾದ್ಯಂತ ನಿರಂತರವಾಗಿ ನಡೆಯುತ್ತಿವೆ, ಆದರೂ ಅದೇ ವೇಗದಲ್ಲಿ ಭ್ರಷ್ಟಾಚಾರದ ತಿವೃತೆ ಹೆಚ್ಚಾಗುತ್ತಿದೆ, ಆಡಳಿತ ವ್ಯವಸ್ಥ್ಯೆ ಮತ್ತು ಸಾರ್ವಜನಿಕ ನಡುವಿನ ಸಂಪರ್ಕ ಹೊಂದಿರುವ ಮಧ್ಯವರ್ತಿಗಳ ಹಾವಳಿಯಿಂದಾಗಿಯೇ ಭ್ರಷ್ಟಾಚಾರ ತೀವೃ ಸ್ವರೂಪವನ್ನು ಪಡೆಯುತ್ತಿದೆ, ಸಾರ್ವಜನಿಕರು ಸರಕಾರಿ ಸೇವೆ ಇತರೆ ದಾಖಲೆಗಳಿಗಾಗಿ ನೇರವಾಗಿ ಸಾರ್ವಜನಿಕ ಆಡಳಿತ ವ್ಯವಸ್ಥ್ಯೆಯೊಂದಿಗೆ ಸಂಪರ್ಕ ಹೊಂದಲ್ಲ ಅಲ್ಲಿಯವರೆಗೂ ಭ್ರಷ್ಟಾಚಾರ ನಡೆಯುವದು ಸಹಜ ಪ್ರತಿಕ್ರೀಯೆಯಾಗಿದೆ,
ರಾಜ್ಯದ ಎಸಿಬಿ ಇಲಾಖೆಯ ೧೦೦ ಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ ೩೦೦ ಕ್ಕೂ ಹೆಚ್ಚಿನ ಸಿಬ್ಬಂದಿಗಳು ಬುಧವಾರ ಏಕಕಾಲಕ್ಕೆ ರಾಜ್ಯದ ೧೮ ಅಧಿಕಾರಿಗಳ ಮನೆ ಮತ್ತು ಅವರ ಕಚೇರಿಗಳ ಮೇಲೆ ದಾಳಿ ನಡಿಸಿದ್ದಾರೆ. ಆ ಪೈಕಿ ಗದುಗಿನ ಶಿರಸ್ತೇದಾರ ಬಸವಕುಮಾರ ಅಣ್ಣಿಗೇರಿ, ದಕ್ಷಿಣ ಕನ್ನಡದ ಸಹಾಯಕ ಇಂಜನಿಯರ್ ದಯಾ ಸುಂದರ ರಾಜು, ರಾಯಚೂರಿನ ಸಹಾಯಕ ಕಾರ್ಯನಿರ್ವಹಕ ಅಭಿಯಂತರ ಅಶೋಕ ರೆಡ್ಡಿ, ಬಾಲಕೃಷ್ಣ, ಲೋಕೋಪಯೋಗಿ ಸಹಾಯಕ ಇಂಜನಿಯರ್ ಗವಿ ರಂಗಪ್ಪ, ಗಜೇಂದ್ರಕುಮಾರ, ಶಿವಾನಂದ ಪಿ. ಶರಣಪ್ಪ, ರಮೇಶ ಕನಕಟ್ಟೆ, ಗೋಪಿನಾಥ ಮಾಳಗಿ, ಶ್ರೀನಿವಾಸ ಕೃಷ್ಣನ್, ಮಹೇಶ್ವರಪ್ಪ, ಗಿರೀಶ, ರಾಕೇಶ ಕುಮಾರ, ಬಸವರಾಜ ಶೇಖರ ರೆಡ್ಡಿ, ಕೆ.ಬಿ. ಶಿವಕುಮಾರ, ಮಂಜುನಾಥ, ಚಲುವರಾಜ ಅಧಿಕಾರಿಗಳ ಮೇಲೆ ದಳಿ ನಡೆಸಿ ಮಹತ್ವದ ದಾಖಲೆ, ಚಿನ್ನ, ಬೆಳ್ಳಿಯನ್ನು ವಶಪಡಿಸಿಕೊಂಡು ಶೋದವನ್ನು ಮುಂದುವರೆಸಿದ್ದಾರೆ.

ದೇಶದೆಲ್ಲೆಡೆ ಎಸಿಬಿಯಿಂದ ದಿನೇ ದಿನೇ ದಾಳಿ ನಡೆಯುತ್ತಿದೆ, ಆದರೂ ಭ್ರಷ್ಟಚಾರವನ್ನೂ ತಡೆಯಲಾಗುತ್ತಿಲ್ಲಾ, ಎಸಿಬಿಯ ದಾಳಿಯ ವೇಗದಲ್ಲೇ ಭ್ರಷ್ಟ ಅಧಿಕಾರಿಗಳ ಸಂಖ್ಯೆಯೂ ಹೆಚ್ಚುತ್ತಿರುವದು ದೇಶ ಮತ್ತು ರಾಜ್ಯಕ್ಕೆ ಬಹಳ ಆತಂಕದ ಸಂಗತಿಯಾಗಿದೆ, ಸಾರ್ವಜನಿಕ ಸೇವೆಗೆ ಸರಕಾರಿ ಅಧಿಕಾರಿಗಳಿಗೆ ವೇತನ ಮತ್ತು ಇತರೆ ಸೌಕರ್ಯಗಳಿದ್ದರೂ ಮತ್ತೇಕೆ ಲಂಚಕ್ಕೆ ಕೈ ಚಾಚುತ್ತಾರೆನ್ನುವುದೇ ಯಕ್ಷ ಪ್ರಶ್ನೆಯಾಗಿದೆ,

ಭ್ರಷ್ಟಾಚಾರದ ಕೂಪದಲ್ಲಿ ಜನಪ್ರತಿನಿಧಿಗಳು ಮತ್ತು ಆಡಳಿತ ವರ್ಗ,

ಬಾಕ್ಸ್ :
ಜನಪ್ರತಿನಿಧಿಗಳು ಅನುದಾನ ನೀಡುವಲ್ಲಿ ಪರ್ಸೆಂಟಿಸ್ ಕೇಳುತ್ತಾರೆ, ಪರ್ಸೆಂಟಿಸ್ ಯಾರು ಕೊಡ್ತಾರೆ, ಎಷ್ಟು ಕೊಡ್ತಾರೆ ಅದರ ಮೇಲೆ ಬಿಡುಗಡೆ ಆಗುತ್ತೆ ಎಂದಾಡಿಕೊಳ್ಳುತ್ತಿದ್ದಾರೆ ಸಾರ್ವಜನಿಕರು, ಜನಪ್ರತಿನಿಧಿಗಳು ಮತ್ತು ಆಡಳಿತ ವರ್ಗ ಭ್ರಷ್ಟಾಚಾರದಲ್ಲಿ ನಿರತರಾದರೇ ಯಾರಿಂದ ಹೇಯ ಕೃತ್ಯವನ್ನೂ ತೆಡಯಲೂ ಸಾದ್ಯ, ಭ್ರಷ್ಟ ಜನಪ್ರತಿನಿಧಿಗಳ ಹಾಗೂ ಭ್ರಷ್ಟ ಅದಿಕಾರಿಗಳ ಮೇಲೆ ಕಠಿಣ ಕಾನೂನು ಜಾರಿ ಆದರೇ ಮಾತ್ರ ಬೇರು ಮಟ್ಟದಲ್ಲಿ ತಳವೂರಿರುವ ಭ್ರಷ್ಟಾಚಾರ ಮುಕ್ತ ದೇಶ, ರಾಜ್ಯ ಮತ್ತು ಜಿಲ್ಲೆಯನ್ನು ನಿರ್ಮಾಣ ಮಾಡಲೂ ಸಾದ್ಯ, ಇಲ್ಲದಿದ್ದರೇ ಕೇವಲ ಭಾಷಣದಲ್ಲಿಯೇ ಭ್ರಷ್ಟಾಚಾರ ನಿರ್ಮೂಲನ ಮಾಡಬಹುದು.

ಬಾಕ್ಸ್ : ಗದಗ ಜಿಲ್ಲೆಯ ಆಡಳಿತ ವ್ಯವಸ್ಥ್ಯೆ ಮತ್ತು ಸ್ಥಳೀಯ ಸಂಸ್ಥೆಗಳ ಆಡಳಿತ ವ್ಯವಸ್ಥ್ಯೆಯಲ್ಲೂ ಭ್ರಷ್ಟಾಚಾರ ಮಿತಿ ಮೀರಿ ನಡೆಯುತ್ತಿದೆ, ಸರಕಾರಿ ಸೇವೆ, ಸರಕಾರಿ ಅನುದಾನ, ಕಾಮಗಾರಿ ಬಿಲ್‌ಗಾಗಿ, ಮತ್ತು ಸರಕಾರಿ ದಾಖಲೆಗಳಿಗೆ ಲಂಚ ನೀಡುವ ಪರಂಪರೆ ಹುಟ್ಟಿಕೊಂಡಿದೆ, ಲಂಚ ಕೊಟ್ಟರೇ ಮಾತ್ರ ಕೆಲಸ, ಕೊಡದಿದ್ದರೇ ಸೇವೆ ಮತ್ತು ದಾಖಲೆಗಳು ನೀಡಲು ವಿಳಂಬ ಮಾಡುತ್ತಾರೆ, ತರ್ತು ಸೇವೆಗಾಗಿ ಲಂಚ ನೀಡುತ್ತವೆ, ಸೇವೆ ಮತ್ತು ದಾಖಲೆಗಳನ್ನು ಪಡೆಯುತ್ತೇವೆ ಬೆರಳಣಿಕೆ ಅಧಿಕಾರಿಗಳನ್ನು ಹೊರತು ಪಡಿಸಿದರೇ ಹಿರಿಯ ಅಧಿಕಾರಿಗಳಿಂದ ಡಿ ದರ್ಜೆಯ ಗುಮಾಸ್ತರಿಂದ ಅವ್ಯಾಹತವಾಗಿ ನಡೆಯುತ್ತಿದೆ ಭ್ರಷ್ಟಾಚಾರ ಎನ್ನುತ್ತಿವೆ ಸಾರ್ವಜನಿಕ ಮೂಲಗಳು,

ರಾಷ್ಟ್ರೀಯ ಭ್ರಷ್ಟಾಚಾರ ಅಪರಾಧಗಳು ಅಂಕಿ ಅಂಶಗಳು

ವಿವರ ಸಂಖ್ಯೆ

ದಾಖಲಾದ ಪ್ರಕರಣಗಳು ೫೪.೧೩೯
ವಿಚಾರಣೆ ಮುಗಿದವು ೨೯.೯೨೦
ವಿಚಾರಣೆ ಎದುರಿಸಿದವರು ೪೭.೪೬೦
ಶಿಕ್ಷೆಗೆ ಗುರಿಯಾದವರು ೧೦.೫೭೧
ಖುಲಾಸೆಗೊಂಡವರು ೩೦.೭೨೦

ಕರ್ನಾಟಕ
ಬಾಕ್ಸ್ : ಮಹಾರಾಷ್ಟ್ರದಲ್ಲಿ ೮೮೭೫ ಪ್ರಕರಣಗಳು, ೬೩೯೯ ಪ್ರಕರಣಗಳ ವಿಚಾರಣೆ ಮುಗಿದಿದೆ, ೧೫೯೨ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದಾರೆ, ೮೦೫೫ ಪ್ರಕರಣ ವಿಚಾರಣೆ ಎದುರಿಸಿದ್ದಾರೆ, ೭೧೧೭ ಪ್ರಕರಣಗಳು ಖುಲಾಸೆಗೊಂಡಿವೆ, ಕರ್ನಾಟಕ ೪೭೩೨ ಪ್ರಕರಣಗಳು ಅವುಗಳಲ್ಲಿ ೨೯೫೮ ಪ್ರಕರಣಗಳ ವಿಚಾರಣೆ ಮುಗಿದಿದೆ, ೬೧೪ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿದ್ದಾರೆ, ೩೩೯೪ ಪ್ರಕರಣಗಳು ವಿಚಾರಣೆ ಎದುರಿಸುತ್ತಿವೆ, ೩೬೬೦ ಪ್ರಕರಣಗಳು ಖುಲಾಸೆಗೊಂಡಿವೆ.

Leave a Comment

Your email address will not be published. Required fields are marked *

Translate »
Scroll to Top