ಕೆಬಿಜೆಎನ್‌ಎಲ್ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ : ನಗದುಹಣ, ಚಿನ್ನಾಭರಣ ವಶ ಕಸದ ಬುಟ್ಟಿಯಲ್ಲಿ ಹಣ, ಚಿನ್ನ ಪತ್ತೆ!

ರಾಯಚೂರು:  ರಾಯಚೂರಿನಲ್ಲಿ ಬೆಳ್ಳಂಬೆಳಗ್ಗೆ  ಕೆಬಿಜೆಎನ್ ಎಲ್ ಎಇಇ‌ ಅಶೋಕರೆಡ್ಡಿ ಮನೆ ಮೇಲೆ  ಎಸಿಬಿ ದಾಳಿಮಾಡಿ ಶಾಕ್ ನೀಡಿದ್ದಾರೆ.  ರಾಯಚೂರು ನಗರದ ಬಸವೇಶ್ವರ ಕಾಲೋನಿಯ ಮನೆ ಮೇಲೆ ದಾಳಿಮಾಡಲಾಗಿದೆ. ಅಲ್ಲದೇ  ಅಶೋಕ ರೆಡ್ಡಿ  ಅವರ ಸ್ವಗ್ರಾಮವಾದ  ಯಾದಗಿರಿಯ ಕದ್ರಾಪುರದಲ್ಲೂ  ಏಕಕಾಲಕ್ಕೆ ದಾಳಿ ಮಾಡಿಮಾಡಿ ದಾಖಲೆಗಳನ್ನು ಪರೀಶೀಲನೆ ಮಾಡುತ್ತಿದ್ದಾರೆ.

ಎಬಿಸಿ ಡಿವೈಎಸ್ ಪಿ ವಿಜಯಕುಮಾರ್ ನೇತೃತ್ವದ ತಂಡ  ಬೆಳ್ಳಂ ಬೆಳ್ಳಗ್ಗೆ ಮನೆಯಲ್ಲಿ ಮಲಗಿದ್ದವರು ಎದ್ದೇಳುವಷ್ಟರಲ್ಲಿ ಅಧಿಕಾರಿಗಳು ಮನೆಮೇಲೆ  ದಾಳಿಮಾಡಿದ್ದಾರೆ. ಮನೆಗೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎಂದು ಗೋತ್ತಾಗುತ್ತಿದ್ದಂತೆ ಮನೆ ಪಕ್ಕದಲ್ಲಿಯೇ ಇರುವ ಖಾಲಿ ಸೈಟ್ ನಲ್ಲಿ ಬೀಸಾಡಿದ್ದ ಹಣ ಪತ್ತೆಯಾಗಿದ್ವವು., ಒಂದು 100 ಹಾಗೂ 500 ನೋಟು ಪತ್ತೆಯಾಗಿವೆ. ಮನೆ ಮೇಲೆ ದಾಳಿಮಾಡಿದ ನಂತರ ಮನೆ ಪಕ್ಕದಲ್ಲೇ ಅಶೋಕ ರೆಡ್ಡಿ ಖಾಲಿ ಸೈಟ್ ಹೊಂದಿದ್ದು ‌ ಸೈಟ್ ನಲ್ಲಿ 100 ಹಾಗೂ 500 ನೋಟುಗಳನ್ನು ಕುಟುಂಬಸ್ಥರು ಬೀಸಾಡಿದ್ದಾರೆ.  ನೋಟುಗಳನ್ನು ನೋಡಿದ ಎಸಿಬಿ ಅಧಿಕಾರಿಗಳ ತಂಡ ಪರಿಶೀಲನೆ ಮಾಡಿದ್ದು, ಈ ವೇಳೆ 100 ಹಾಗೂ 500ರ ಎರಡು ನೋಟುಗಳು ಪತ್ತೆಯಾಗಿವೆ.              

ಅಕ್ರಮ ಹಣ ಹಾಗೂ ಆಸ್ತಿಗಳಿಕೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಇಂದು ಎಸಿಬಿ ಅಧಿಕಾರಿಗಳು ಅಶೋಕ ರೆಡ್ಡಿಯವರ ಎರಡು ಕಡೆ ಮನೆ ಮತ್ತು ಕಚೇರಿ ಮೇಲೆ ದಾಳಿ ಮಾಡಲಾಗಿದ್ದು, ಬೆಳಿಗ್ಗೆಯಿಂದಲೇ ಅಧಿಕಾರಿಗಳ ತಂಡ ಮನೆಯಲ್ಲಿ ಬಿಡು ಬಿಟ್ಟು ದಾಖಲೆ ಪತ್ರಗಳನ್ನು ಪರೀಶೀಲನೆಯಲ್ಲಿ ತೊಡಗಿದ್ದಾರೆ.

ಎಸಿಬಿ ಅಧಿಕಾರಿಗಳಿ ಬೆಳಿಗ್ಗೆಯಿಂದ ದಾಖಲೆಗಳನ್ನು ಪರೀಶೀಲನೆ ಮಾಡುತ್ತಿರುವ ವೇಳೆ ಅಧಿಕಾರಿಗಳಿ ಶಾಕ್ ಕಾದಿತ್ತು. ಅಧಿಕಾರಿಗಳಿಗಳಿಗೆ ಗೋತ್ತಾಗುವುದಿಲ್ಲ ಎಂದು ಕಸದ ಬುಟ್ಟಿಯಲ್ಲಿ ಚಿನ್ನಾಭರಣಗಳನ್ನು ಮುಚ್ಚಿಡಲಾಗಿತ್ತು. ದಾಳಿ ಸಮಯದಲ್ಲಿ ಮನೆಯಲ್ಲಿದ  ಅಶೋಕ ರೆಡ್ಡಿ  ಶೌಚಾಲಯಕ್ಕೆ ತೆರಳುವ ನೆಪದಲ್ಲಿ ಕಸದ ಬುಟ್ಟಿಯಲ್ಲಿ ಚಿನ್ನಾಭರಣ ಮತ್ತು ನಗದು ಹಣವನ್ನು ಕಸದ ಬುಟ್ಟಿಯಲ್ಲಿ ಎಸೆದಿರುವುದು  ಗಮನಕ್ಕೆ ಬಂದಿತ್ತು.

ಪ್ರಾಥಮಿಕ ವರದಿ ಅನ್ವಯ ಅಶೋಕ ರೆಡ್ಡಿ ನಿವಾಸದಲ್ಲಿ ೭ ಲಕ್ಷ ನಗದು ೪೦೦ ಗ್ರಾಂ. ಚಿನ್ನ ಹಾಗೂ ೬೦೦ ಗ್ರಾಂ.ಬೆಳ್ಳಿ ಪಾತ್ರೆಗಳು ದೊರೆತಿವೆ. ವಿವಿಧ ಆಸ್ತಿಗೆ ಸಂಬಂಧಿಸಿ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ.

ಎಸಿಬಿ ತಂಡವೂ ಏಕಕಾಲದಲ್ಲಿ ಅಭಿಯಂತರ ಅಶೋಕ ರೆಡ್ಡಿಗೆ ಸಂಬಂಧಿಸಿದ ಮೂರು ಕಡೆ ದಾಳಿ ನಡೆಸಿದೆ. ರಾಯಚೂರು ನಿವಾಸ, ಶಹಾಪೂರು ಕದ್ರಾಪೂರು ಸ್ವಗ್ರಾಮ ನಿವಾಸ ಹಾಗೂ ಕೆಬಿಜೆಎನ್‌ಎಲ್ ಕಛೇರಿಗೆ ದಾಳಿ ಮಾಡಲಾಗಿದೆ. ಅಶೋಕ ರೆಡ್ಡಿ ಅವರಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. 

ಎಸಿಬಿ ದಾಳಿಯ ನಂತರ ಮನೆಯವರು ಸಂಶಯಾಸ್ಪದವಾಗಿ ಓಡಾಡುತ್ತಿರುವುದನ್ನು ಎಸಿಬಿ ಗಮನಿಸಿತು. ಅಶೋಕ ರೆಡ್ಡಿ ಅವರ ಪತ್ನಿ ಎರಡು ಮೂರು ಬಾರೀ ಶೌಚಾಲಯಕ್ಕೆ ಹೋಗಿರುವುದನ್ನು ಆಧಾರಿಸಿ ಮನೆ ಹಿಂಭಾಗದಲ್ಲಿ ಪರಿಶೀಲಿಸಿದಾಗ ಡಸ್ಟ್ ಬಿನ್‌ನಲ್ಲಿ ಪ್ಲಾಸ್ಟಿಕ್ ಕವರವೊಂದರಲ್ಲಿ ಚಿನ್ನ ಪತ್ತೆಯಾಗಿದೆ. ಹಣ ಎಣಿಸಲು ಕೌಂಟಿಂಗ್ ಮಷಿನ್ ಹಾಗೂ ಚಿನ್ನ ಪರಿಶೀಲನೆಗೆ  ಅಕ್ಕಸಾಲಿಗರನ್ನು ಕರೆಸಲಾಗಿತ್ತು. ಭಾರೀ ಪ್ರಮಾಣದ ಹಣ ದೊರೆತಿದ್ದರಿಂದ ಎಸಿಬಿ ಅಧಿಕಾರಿಗಳು ತೀವ್ರ ಲೆಕ್ಕಚಾರದಲ್ಲಿ ತೊಡಗಿದ್ದರು. ಸುಧೀರ್ಘ ಕಾಲದವರೆಗೂ ಈ ತಪಾಸಣೆ ಕೈಗೊಳ್ಳಲಾಯಿತು. ಮೂರು ಕಡೆ ದಾಳಿಯ ಬಗ್ಗೆ ಮಾಹಿತಿಯನ್ನು ಪಡೆಯಲಾಗಿದೆ.  ಅಶೋಕ ರೆಡ್ಡಿ ಅವರ ನಿವಾಸದಲ್ಲಿ ಭಾರೀ ಪ್ರಮಾಣದ ಅಕ್ರಮ ಸಂಪತ್ತು ಪತ್ತೆಯಾಗಿದೆಂದು ಹೇಳಲಾಗುತ್ತಿದೆ. ಈ ಬಗ್ಗೆ ನಿಖರವಾದ ಮಾಹಿತಿಯನ್ನು ಎಸಿಬಿ ಇನ್ನೂ ಅಧಿಕೃತವಾಗಿ ಬಿಡುಗಡೆಗೊಳಿಸಿಲ್ಲ. ಸಂಪೂರ್ಣ ಮಾಹಿತಿ ತನಿಖೆಯ ನಂತರ ದಾಳಿಯ ಮಾಹಿತಿಯನ್ನು ನೀಡಲಾಗುತ್ತದೆ.

Leave a Comment

Your email address will not be published. Required fields are marked *

Translate »
Scroll to Top