ಹಿಜಾಬ್ ಪರ ಗೋಡೆ ಬರಹ:ಪ್ರಕರಣ ದಾಖಲು

ಹೊಸಪೇಟೆ:
ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲಿ ಹಿಜಾಬ್ ಧರಿಸುವುದನ್ನು ಸಮರ್ಥಿಸಿಕೊಂಡು ಎರಡು ಕಾಲೇಜ್ ಮತ್ತು ಎರಡು ಹೈಸ್ಕೂಲ್‌ಗಳ ಗೋಡೆಗಳ ಮೇಲೆ ಯಾರೋ ಕಿಡಿಗೇಡಿಗಳು ಗೋಡೆ ಬರಹ ಬರೆದಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ನಗರದ ವಿಜಯನಗರ ಕಾಲೇಜು, ಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕ್ರೀಡಾಂಗಣದಲ್ಲಿನ ಯುವಜನ ಸೇವೆ ಕ್ರೀಡಾ ಇಲಾಖೆಯ ಕಚೇರಿ, ಪಟೇಲ್ ಹೈಸ್ಕೂಲ್, ಬಾಲಕಿಯರ ಪ್ರೌಢಶಾಲೆಯ ಗೋಡೆಗಳ ಮೇಲೂ ಬರಹ ಬರೆಯಲಾಗಿದೆ. ‘ಹಿಜಾಬ್ ಇಸ್ ಅವರ್ ಡಿಗ್ನಿಟಿ’, ‘ಹಿಜಾಬ್ ಇಸ್ ಅವರ್ ರೈಟ್’ ಎಂದು ಇಂಗ್ಲಿ?ನಲ್ಲಿ ದೊಡ್ಡ ಅಕ್ಷರಗಳಲ್ಲಿ ಗೋಡೆಗಳ ಮೇಲೆ ಬರಹ ಬರೆಯಲಾಗಿದೆ. ಈ ಗೋಡೆಗಳ ಮೇಲೆ ಬರೆದ ಬರಹಕ್ಕೆ ಸಂಬಂಧಿಸಿ ಆ ಕಾಲೇಜಿನ ಪ್ರಾಂಶುಪಾಲರು ನೀಡಿರುವ ದೂರಿನ ಮೇರೆಗೆ ಕ್ರಮವಾಗಿ ಗ್ರಾಮೀಣ ಮತ್ತು ಚಿತ್ತವಾಡ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ಸರ್ದಾರ್ ವಲ್ಲಭಭಾಯಿ ಪಟೇಲ್ ಶಾಲೆಯ ಗೋಡೆಗಳ ಮೇಲೆ ಬರೆದ ಬರಹದ ಸಂಬಂಧ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ಜಿಲ್ಲಾ ಕ್ರೀಡಾಂಗಣದ ಗೋಡೆಗಳು, ಹರಿಹರ ರಸ್ತೆಯ ಗುರು ಪದವಿಪೂರ್ವ ಕಾಲೇಜಿನ ಗೋಡೆಗಳ ಮೇಲೂ ಹಿಜಾಬ್ ಬೆಂಬಲಿಸಿ ಬರಹ ಬರೆಯಲಾಗಿದೆ. ಈ ವಿ?ಯ ಗೊತ್ತಾಗುತ್ತಿದ್ದಂತೆ ನಗರಸಭೆ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿ ಗೋಡೆ ಬರಹಗಳ ಮೇಲೆ ಪೊಲೀಸರು ಸುಣ್ಣ, ಬಣ್ಣ ಬಳಸಿದರು. ಹೊರ ನಡೆದ ವಿದ್ಯಾರ್ಥಿನಿಯರು:


ನಗರದ ಥಿಯೋಸಾಫಿಕಲ್ ಮಹಿಳಾ ಕಾಲೇಜ್‌ನ ಏಳು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಒಳ ಬಂದಿದ್ದು, ಕಾಲೇಜ್‌ನ ಆಡಳಿತ ಮಂಡಳಿ ತಡೆದಿದೆ. ಬಳಿಕ ಏಳು ವಿದ್ಯಾರ್ಥಿನಿಯರು ಕಾಲೇಜ್‌ನಿಂದ ಹೊರ ನಡೆದರು. ಈ ವೇಳೆ ಪೊಲೀಸರು ಆಗಮಿಸಿ, ಮಾಹಿತಿ ಪಡೆದರು.
ಎಸ್ಪಿ ಹೇಳಿಕೆ:


“ಹಿಜಾಬ್ ಕುರಿತು ಮಂಗಳವಾರ ಹೈಕೋರ್ಟ್ ತೀರ್ಪು ನೀಡಿದೆ. ತಡರಾತ್ರಿ ಯಾರೋ ಶಾಲಾ, ಕಾಲೇಜಿನ ಗೋಡೆಗಳ ಮೇಲೆ ಹಿಜಾಬ್ ಬೆಂಬಲಿಸಿ, ಸ್ಪ್ರೇಯಲ್ಲಿ ಹಿಜಾಬ್ ಪರ ಬರೆದಿದ್ದಾರೆ. ಇದರಿಂದ ಬೇಗ ಬರೆದು ತೆರಳಿದ್ದಾರೆ. ಬಣ್ಣದಿಂದ ಬರೆದಿದ್ದರೆ ಸಾಕ? ಸಮಯ ಹಿಡಿಯುತ್ತಿತ್ತು. ಗಸ್ತಿನಲ್ಲಿದ್ದ ಪೊಲೀಸರ ಕೈಗೆ ಸಿಕ್ಕಿ ಬೀಳುತ್ತಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಇದರ ಹಿಂದೆ ಯಾರ ಕೈವಾಡವಿದೆ ಎನ್ನುವುದನ್ನೂ ಪತ್ತೆ ಹಚ್ಚಲಾಗುತ್ತಿದೆ” ಎಂದು ವಿಜಯನಗರ ಜಿಲ್ಲಾ ಪೊಲೀಸ್ ವರಿ?ಧಿಕಾರಿ ಡಾ. ಕೆ. ಅರುಣ್ ತಿಳಿಸಿದ್ದಾರೆ.

ಹಿಜಾಬ್ ತೀರ್ಪಿನ ವಿರುದ್ಧ ಸಂವಿಧಾನದತ್ತವಾಗಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬಹುದು. ಜತೆಗೆ ಸೂಕ್ತ ವೇದಿಕೆಯಲ್ಲಿ ವಿಶ್ಲೇಷಣೆ ಮಾಡಬಹುದು. ಆದರೆ, ಈ ರೀತಿ ಗೋಡೆ ಬರಹ ಬರೆಯುವುದು ಸರಿಯಲ್ಲ. ವಿದ್ಯಾರ್ಥಿಗಳು ಶಿಕ್ಷಣದ ಕಡೆಗೆ ಒತ್ತು ನೀಡಬೇಕು. ಗೊಂದಲಕ್ಕೀಡಾಗಿ ಶಿಕ್ಷಣ ವಂಚಿತರಾಗಬಾರದು. ಈ ದಿಸೆಯಲ್ಲಿ ಶಿಕ್ಷಣವೇ ಮುಖ್ಯ ಎಂಬುದನ್ನು ಅರಿಯಬೇಕು.

Leave a Comment

Your email address will not be published. Required fields are marked *

Translate »
Scroll to Top