ಗುಂಪುಗಳ ಮಧ್ಯೆ ಮಾರಾ ಮಾರಿ ನಾಲ್ವರಿಗೆ ಗಂಭೀರ ಗಾಯ

ರಾಯಚೂರು : ನ್ಯಾಯ ಪಂಚಾಯತಿ ವಿಚಾರಕ್ಕೆ ಎರಡು ಗುಂಪುಗಳ ಮಧ್ಯ ಘರ್ಷಣೆ ಉಂಟಾಗಿ ಕಬ್ಬಿಣದ ರಾಡ್ ಹಾಗೂ ಕಟ್ಟಿಗೆಗಳಿಂದ ಹೊಡೆದಾಡಿಕೊಂಡಿದ್ದು, ಮಾರಣಾಂತಿಕ ಹಲ್ಲೆಯಿಂದಾಗಿ ನಾಲ್ಕು ಜನರಿಗೆ ಗಂಭೀರ ಗಾಯಗಳಾಗಿರುವ ಘಟನೆ ನಗರದ ಹೊರ ವಲಯದ ಅಸ್ಕಿಹಾಳ ಗ್ರಾಮದಲ್ಲಿ ನಡೆದಿದೆ.

ಘಟನೆಯಲ್ಲಿ ರೇಷ್ಮಾ, ನರಸಪ್ಪ, ಮನೋಹರ್, ಗಿರಿಜಾ ಸೇರಿ ನಾಲ್ಕು ಜನರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ನಗರದ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಕಳೆದ ಮೂರು ವರ್ಷಗಳಿಂದ ಎರಡು ಯುವಕರ ಗುಂಪುಗಳ ಮಧ್ಯ ಕಿರಿಕ್ ಉಂಟಾಗಿತ್ತು. ಈ ವಿಚಾರಕ್ಕೆ ನಿನ್ನೆ ರಾತ್ರಿ, ನರಸಪ್ಪ ಎನ್ನುವವರು ನ್ಯಾಯ ಪಂಚಾಯತ್ ಮಾಡಲು ಮುಂದಾಗಿದ್ದರು, ನೀವು ನ್ಯಾಯ ಪಂಚಾಯತಿ ಮಾಡೋಷ್ಟು ದೊಡ್ಡವರಾ ಎಂದು ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಕಬ್ಬಿಣ ರಾಡ್ ಮತ್ತು ಕಟ್ಟಿಗೆಗಳಿಂದ ಹೊಡೆದಾಡಿದ್ದಾರೆ. ಈ ವೇಳೆ ಬಿಡಿಸಲು ಬಂದವರಿಗೂ ಮಹಿಳೆಯರೆನ್ನದೇ ಎಲ್ಲರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಘಟನಾ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪಶ್ಚಿಮ ಪೋಲಿಸ್ ಠಾಣೆಯ ಪೋಲಿಸರು ಪರಿಶೀಲನೆ ನಡೆಸಿದರು.

 

ಘರ್ಷಣೆಯಲ್ಲಿ ಭಾಗಿಯಾಗಿ ಹಲ್ಲೆ ಮಾಡಿದ್ದ ಆರೋಪದ ಮೇಲೆ ರಂಗಪ್ಪ, ಅನಿಲ್, ಪವನ, ಶೀನು, ತಿಮ್ಮಾ ಸೇರಿದಂತೆ ಒಟ್ಟು ೧೫ ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ತಿಳಿದುಬಂದಿದೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top