ಶೃಂಗೇರಿ, 25 : ಗುರುಗಳ ದರ್ಶನ ಪಡೆದು ತಾಯಿ ಜಗನ್ಮಾತೆ ಶಾರದಾಂಬೆಯಾ ದರ್ಶನ ಪಡೆಯಲು ಬಂದಿದ್ದೀನಿ ನಂತರ ಈಶ್ವರ ದೇವಾಲಯಕ್ಕೆ ಪೂಜೆ ಸಲ್ಲಿಸಿ ನಾಳೆ ವಾಪಸ್ ಹೋಗುತ್ತೇನೆ ಪ್ರತಿದಿನ ಪಕ್ಷ ಸಂಘಟನೆ ಕೆಲಸ ಮಾಡುತ್ತಿದ್ದೇನೆ ಶಾರದಾಂಬೆ ಯಾ ಆಶಿರ್ವಾದ ಪಡೆಯಲು ಬಂದಿದ್ದೇನೆ ರಷ್ಯಾ ಹಾಗು ಉಕ್ರೇನ್ ಯುದ್ಧದ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಪ್ರಧಾನಿ ಸಡನ್ನಾಗಿ 4 ದಿನದ ಹಿಂದೆ ಯುದ್ದ ಮಾಡೋದಾಗಿ ರಷ್ಯಾದ ಅಧ್ಯಕ್ಷರು ಹೇಳಿದ್ರು ಆಗಲೇ ಉಕ್ರೇನ್ ಮೇಲೆ ಯುದ್ದ ಶುರುಮಾಡಿದ್ದಾರೆ ಪ್ರಪಂಚದ ಅನೇಕ ರಾಷ್ಟ್ರಗಳು ಯುದ್ಧ ಬೇಡವೆಂದು ಹೇಳುತ್ತಿದೆ ಆದರೆ ರಷ್ಯಾ ಮಾತ್ರ ನಾನು ನಿಲ್ಲಿಸುವುದಿಲ್ಲ ಅಂತ ಹೇಳುತ್ತಿದೆ ಯುದ್ಧ ಶಮನ ವಾಗಬೇಕೆಂದು ನಮ್ಮ ಪ್ರಧಾನಮಂತ್ರಿಗಳು ಪ್ರಯತ್ನ ಮಾಡುತ್ತಿದ್ದಾರೆ ರಷ್ಯಾದ ಅಧ್ಯಕ್ಷ ಪುಟಿನ್ ಅವರೊಂದಿಗೆ ಮೋದಿಯವರು ಉತ್ತಮ ಬಾಂಧವ್ಯ ಹೊಂದಿದ್ದಾರೆ ಮುಂದೇನಾಗುತ್ತದೆ ನೋಡೋಣ ಎಂದರು.
