ಬಳ್ಳಾರಿ,ಫೆ,25 : ಹೊವಣ್ಣಿನ ಮೇಲೆ ಮುಂದಿನ ಮಂತ್ರಿ ಬಿ.ನಾಗೇಂದ್ರ ಎಂದು ಬರೆದ ಅಭಿಮಾನಿಗಳು ದೇವರಿಗೆ ಹರೆಕೆ ಹೊತ್ತ ಪ್ರಸಂಗ ಬಳ್ಳಾರಿ ಗ್ರಾಮಾಂತರದ ಮೋಕ ಮಲ್ಲೇಶ್ವರ ಸ್ವಾಮಿ ರಥೋತ್ಸವದಲ್ಲಿ ನಡೆದಿದೆ. ಹೌದು ತಾಲೂಕಿನ ಮೋಕ ಮಲ್ಲೇಶ್ವರ ರಥೋತ್ಸವದಲ್ಲಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹೂವು ಹಣ್ಣು ಎಸೆಯುವುದು ವಾಡಿಕೆ. ಹೀಗಾಗಿ ಗ್ರಾಮೀಣ ಶಾಸಕರ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕ ಮುಂದೆ ಮುಂತ್ರಿಯಾಗಲಿ ಎಂದು ಹಣ್ಣಿನ ಮೇಲೆ ಬರೆದ ತೇರಿಗೆ ಎಸೆಯುವ ಮೂಲಕ ಹರಕೆ ಹೊತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಲಿದ್ದು, ಸರ್ಕಾರದಲ್ಲಿ ನಾಗೇಂದ್ರ ಅವರು ಮಂತ್ರಿಯಾಗಿ ಜನಪರ ಕೆಲ ಮಾಡಲಿದ್ದಾರೆ ಎಂಬ ವಿಶ್ವಾಸ ಇದೆ. ಹೀಗಾಗಿ ಈ ಎಲ್ಲ ಆಸೆಗಳು ಈಡೇರಲಿ ಎಂದು ಹರಕೆ ಹೊತ್ತಿದ್ದೇವೆ ಎಂದು ಯುವ ಮುಖಂಡ ಎಂ.ಜಿ ಕನಕ ತಿಳಿಸಿದರು.
