ಕುಮಾರಸ್ವಾಮಿಗೆ ಟಾಂಗ್‍ ನೀಡಿದ ಕಾಂಗ್ರೆಸ್

ಕುಮಾರಸ್ವಾಮಿಗೆ ಟಾಂಗ್‍ ನೀಡಿದ ಕಾಂಗ್ರೆಸ್

ಬೆಂಗಳೂರು: ಕಾಂಗ್ರೆಸ್ ನ ಉಚಿತ ಗ್ಯಾರಂಟಿ ಯೋಜನೆಗಳ ವಿಚಾರವಾಗಿ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿಗೆ ರಾಜ್ಯ ಕಾಂಗ್ರೆಸ್ ತಿರುಗೇಟು ನೀಡಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ನಾವು ಅರ್ಹ ಫಲಾನುಭವಿಗಳಿಗೆ ನಮ್ಮ ಗ್ಯಾರಂಟಿಗಳನ್ನು ಜಾರಿಗೊಳಿಸುವುದು ನಿಶ್ಚಿತ. ಕುಮಾರಸ್ವಾಮಿಯವರೇ, ಆ ಚಿಂತೆ ಬಿಡಿ. ಜೆಡಿಎಸ್ ಪಕ್ಷದ ವಿಸರ್ಜನಾ ಕಾರ್ಯಕ್ರಮದ ಮುಹೂರ್ತ ಯಾವಾಗ ಹೇಳಿ ಎಂದು ಹಂಗಿಸಿದೆ.

ಚುನಾವಣೆಯಲ್ಲಿ ಹೀನಾಯ ಸೋಲಿನ ಹೊಣೆ ಹೊರುವವರು, ಹೊಣೆ ಹೊತ್ತು ರಾಜೀನಾಮೆ ಕೊಡುವವರು ಯಾರೂ ಇಲ್ಲವೇ ಬಿಜೆಪಿಯಲ್ಲಿ!? ಸೋಲಿನ ಹೊಣೆ ಯಾರದ್ದು ಬಿಜೆಪಿ ಕರ್ನಾಟಕದ್ದೋ ? ಅಮಿತ್ ಷಾಅವರದ್ದೋ? ಬೊಮ್ಮಾಯಿಯವರದ್ದೋ? ಮೋದಿಯವರದ್ದೋ ? ನಳಿನ್ ಕಟೀಲರದ್ದೋ ನಾಯಕರನ್ನು ಪ್ರಶ್ನಿಸಿದೆ.

ನಾವು ಘೋಷಿಸಿದ 5 ಗ್ಯಾರಂಟಿಗಳನ್ನು ಜಾರಿಗೊಳಿಸುವುದು ಗ್ಯಾರಂಟಿ. ನಾವು ನಮ್ಮ ಜನರ ಹಿತ ಕಾಪಾಡುವ ಬದ್ಧತೆ ಹೊಂದಿದ್ದೇವೆ. ನಾಯಕರು ಕನ್ನಡಿಗರು ನೀಡಿದ ತಪರಾಕಿಗೆ ಚಿಕಿತ್ಸೆ ಪಡೆದು ವಿಶ್ರಾಂತಿ ಪಡೆಯಲಿ. ಹಾಗೆಯೇ ‘ವಿರೋಧಪಕ್ಷದ ನಾಯಕ’ ಸ್ಥಾನಕ್ಕೆ ಸೂಕ್ತ ವ್ಯಕ್ತಿಯನ್ನು ಈಗಲಾದರೂ ಹುಡುಕಲಿ ಎಂದಿದೆ.

Leave a Comment

Your email address will not be published. Required fields are marked *

Translate »
Scroll to Top