ಭವಿಷ್ಯ ಬರೆಯುವ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ

ಹಾವೇರಿ, ಫೆಬ್ರವರಿ 13: ಭವಿಷ್ಯ ಬರೆಯುವ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಶಿಗ್ಗಾಂವಿ ತಾಲ್ಲೂಕಿನ ಗಂಜಿಗಟ್ಟಿ ಗ್ರಾಮದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಿಸಲಿರುವ ಮನೆಗಳಿಗೆ 750 ಕೆವಿ ವಿದ್ಯುತ್ ಕೇಂದ್ರ ಹಾಗೂ ಕುರುಬ ಸಮುದಾಯದ ವಿದ್ಯಾರ್ಥಿಗಳ ವಸತಿ ನಿಲಯ ಮತ್ತು ಸಮುದಾಯ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಿದ್ದರು.

ಅಲ್ಪಸಂಖ್ಯಾತರಿಗೆ ಅಬ್ದುಲ್ ಕಲಾಂ ಶಾಲೆಗಳು ಹಾಗೂ ವಿದ್ಯಾರ್ಥಿನಿಲಯಗಳನ್ನು ನೀಡುವ ಕೆಲಸವನ್ನೂ ಮಾಡಲಾಗಿದೆ. ನಾಲ್ಕು ಅಬ್ದುಲ್ ಕಲಾಂ ಶಾಲೆಗಳು ತನ್ನದೇ ಸ್ವಂತ ಕಟ್ಟಡದಲ್ಲಿ ಈ ವರ್ಷ ಪ್ರಾರಂಭವಾಗಲಿದೆ. ಎಲ್ಲಾ ವರ್ಗದ ಜನರ ಸಮಗ್ರ ಅಭಿವೃದ್ಧಿಯನ್ನು ಮಾಡಲು ಸರ್ಕಾರ ಬದ್ಧವಾಗಿದೆ. ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿಗೆ ವಿಶೇಷ ತರಬೇತಿಯನ್ನು ಎಲ್ಲಾ ರಂಗಗಳಲ್ಲಿಯೂ ನೀಡುತ್ತಿದೆ. ಟಾಟಾ ಸಮೂಹದೊಂದಿಗೆ ಒಪ್ಪಂದ ಮಾಡಿಕೊಂಡು ಶಿಗ್ಗಾಂವಿ ಐಟಿಐಯನ್ನು 30 ಕೋಟಿ ರೂ.ಗಳ ವೆಚ್ಚದಲ್ಲಿ ಆಧುನಿಕ ತಂತ್ರಜ್ಞಾನದಿಂದ ಅಭಿವೃದ್ಧಿಪಡಿಸಲಾಗಿದೆ. ಇಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಉನ್ನತ ಉದ್ಯೋಗ ದೊರೆಯುವ ವ್ಯವಸ್ಥೆಗಳು ಆಗಲಿವೆ. ಡಿಪ್ಲೊಮಾ ಕಾಲೇಜಿನ ಉನ್ನತೀಕರಣಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದರು.

Leave a Comment

Your email address will not be published. Required fields are marked *

Translate »
Scroll to Top