ಕಾರಟಗಿ : ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾಗಿದ್ದ (ಪ್ರಭಾರ) ಹೇಮಂತ್ ಎನ್., ಐಎಎಸ್ ಅವರು ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾಗಿ ಡಾ.ಡಿ.ಮೋಹನ್ ಅವರು ಬುಧವಾರ ಅಧಿಕಾರ ಸ್ವೀಕಾರ ಮಾಡಿಕೊಂಡರು. ಇಓ ಪ್ರಭಾರರಾಗಿ ಒಂದು ತಿಂಗಳ ಕಾಲ ಕಾರ್ಯನಿರ್ವಹಿಸಿ ವರ್ಗಾವಣೆಗೊಂಡ ಹೇಮಂತ್ ಎನ್., ಐಎಎಸ್ ಅವರನ್ನು ತಾಪಂ ಅಧಿಕಾರಿಗಳು, ಪಿಡಿಓಗಳು, ಸಿಬ್ಬಂದಿಗಳು ಸನ್ಮಾನ ಮಾಡುವ ಮೂಲಕ ಬೀಳ್ಕೊಟ್ಟರು.
