ಹಳೆ ವಿಧ್ಯಾರ್ಥಿಗಳಿಂದ ಶಿಕ್ಷಕರಿಗೆ ಸನ್ಮಾನ


ದೇವನಹಳ್ಳಿ : ವಿದ್ಯಾರ್ಥಿ ಜೀನದಲ್ಲಿ ನಮ್ಮನ್ನು ತಿದ್ದಿ ತೀಡಿ ಉತ್ತಮ ಸತ್ಪ ಪ್ರಜೆಗಳನ್ನಾಗಿ ರೂಪಿಸಿದ ಶಿಕ್ಷಕನ್ನು ಪ್ರತಿಯೊಬ್ಬರು ನೆನಯಬೇಕು ಎಂದು ವಾಣಿ ವಿದ್ಯಾಕೇಂದ್ರ ಹಳೆ ವಿದ್ಯಾರ್ಥಿ ಸಂಘದ ಸದಸ್ಯ ನವೀನ್ ತಿಳಿಸಿದರು.

ಪಟ್ಟಣದಲ್ಲಿರುವ ವಾಣಿವಿದ್ಯಾಕೇಂದ್ರ ಶಾಲೆಯ 1999-2000 ನೇ ಸಾಲಿನ ವಿದ್ಯಾರ್ಥಿಳಿಂದ ಶಿಕ್ಷರಿಗೆ ಸನ್ಮಾನಮಾಡಿ ಅವರು ಮಾತನಾಡಿದರು. ವಿದ್ಯಾರ್ಥಿಜೀವನದಲ್ಲಿ ನಮ್ಮನ್ನು ಅನೇಕ ಶಿಕ್ಷಕರು ತಿದ್ದಿ ತೀಡಿದ್ದರ ಪರಿಣಾಮ ನಾವು ಉತ್ತಮ ಸತ್ಪ ಪ್ರಜೆಗಳಾಗಿ ಹೊರಹೊಮ್ಮಲು ಸಾಧ್ಯವಾಗಿದೆ ಇದಕ್ಕೆಲ್ಲ ಕಾರಣ ನಮಗೆ ಪಾಠ ಹೇಳಿದ ಗುರುಗಳು. ಆಗಾಗಿ ಅಂತಹ ಮಹನಿಯರನ್ನು ಪ್ರತಿಯೊಬ್ಬರು ಗೌರವಿಸಬೇಕು. ತಂದೆ ತಾಯಿ ನಂತರೆ ನಮಗೆ ಮಾರ್ಗದರ್ಶನ ನೀಡುವ ಗುರುಗಳನ್ನು ಪ್ರತಿಯೊಬ್ಬರು ನೆನೆಯಬೇಕು ಎಂದರು. ಹಳೆ ವಿದ್ಯಾರ್ಥಿ ಶೇಖರ್ ಮಾತನಾಡಿ ಸಮಾಜದಲ್ಲಿ ನಾವೆನನ್ನಾದರು ಸಾಧಿಸಬೇಕಾದರೆ ಬಾಲ್ಯದಲ್ಲಿ ಶಿಕ್ಷಣ ನೀಡಿದ ಗುರುಗಳು ಮಹತ್ತರವಾದ ಪಾತ್ರವಹಿಸುತ್ತಾರೆ ಎಂದು ತಿಳಿಸಿದರು.ನಿವೃತ್ತ ಮುಖ್ಯಶಿಕ್ಷಕರಾದ ಸಂಪತ್ ಕುಮಾರ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ವಿದ್ಯಾಭ್ಯಾಸ ವ್ಯಾಪಾರೀಕರಣವಾಗುತ್ತಿದೆ. ಪೋಷಕರು ಮಕ್ಕಳನ್ನು ಕನ್ನಡಮಾಧ್ಯಮ ಶಾಲೆಗಳಿಗೆ ಸೇರಿಸಿ ಕನ್ನಡ ಶಾಲೆಗಳನ್ನು ಉಳಿಸುವ ಕೆಲಸ ಪೋಷಕರು ಮಾಡಬೇಕು ಇಲ್ಲವಾದರೆ ಮುಂದಿನದಿನಗಳಲ್ಲಿ ಕನ್ನಡ ಶಾಲೆಗಳು ಬಾಗಿಲುಮುಚ್ಚುವ ಅವನತಿಗೆ ಹೋಗಲಿದೆ ಎಂದರು.
ಇದೆ ವೇಳೆ ವಾಣಿವಿದ್ಯಾಕೇಂದ್ರ ಶಾಲೆಯ ಅಧ್ಯಕ್ಷ ಕಾಂತರಾಜ್, ಶಿಕ್ಷಕರಾದ ವಸಂತ್‌ಕುಮಾರ್, ನೀಲಮ್ಮ, ಪಧ್ಮ, ಲಲಿತ, ಹೆಗ್ಡೆ, ಹಳೆ ವಿದ್ಯಾರ್ಥಿಗಳಾದ ನವೀನ್, ನಾಗೇಶ್, ಕಿಟ್ಟಿ, ಶೇಖರ್ (ಜರ್ಸಿ) ರಮೇಶ್, ಮಂಜೇಶ್, ಚೇತನ್, ನಜೀರ್ ಅಹಮದ್, ಅರುಣ್, ಪ್ರವೀಣ್, ನಾರಾಯಣಸ್ವಾಮಿ, ಮುನಿರಾಜು, ಮಂಜುಳ, ರಾಣಿ, ಸ್ಮಿತ, ಸುಧಾ, ಸುಮ, ಪಧ್ಮ ಮುಂತಾದವರು ಇದ್ದರು.

Leave a Comment

Your email address will not be published. Required fields are marked *

Translate »
Scroll to Top