ದೇವನಹಳ್ಳಿ: ಸಾರ್ವಜನಿಕರಿಗೆ ಮೊದಲು ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಶುದ್ಧ ಕುಡಿಯುವ ನೀರಿನ್ನು ನೀಡಬೇಕು ಆದ್ದರಿಂದ ಪ್ರತಿ ವಾರ್ಡ್ ಗೊಂದು ಶುದ್ಧ ಕುಡಿಯುವ ನೀರಿನ ಘಟಕ ಮಾಡುತ್ತಿದ್ದು ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಹಾಗೂ ನೀರನ್ನು ಮಿತವಾಗಿ ಬಳಸಿ ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡಬೇಕಿದೆ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ತಿಳಿಸಿದರು.
ದೇವನಹಳ್ಳಿ ಪಟ್ಟಣದ ಪುರಸಭೆ ವ್ಯಾಪ್ತಿಯ 14 ನೇ ವಾರ್ಡ್ ನ ನಗರೇಶ್ವರಸ್ವಾಮಿ ದೇವಾಲಯ ಸಮೀಪ ಶ್ರೀ ಟಿ.ಸುಬ್ರಮಣ್ಯಂ ಶುದ್ಧ ಗಂಗಾಜಲ ಇವರ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ಲೋಕಾರ್ಪಣೆ ಗೊಳಿಸಿ ಮಾತನಾಡಿ, ಐದು ಲಕ್ಷ ರೂಗಳ ವೆಚ್ಚದಲ್ಲಿ ಸಾವಿರ ಲೀಟರ್ ಸಾಮರ್ಥ್ಯದ ಘಟಕವನ್ನು ಉದ್ಘಾಟಿಸುತ್ತಿದ್ದು ಪ್ರಸ್ತುತ ವರ್ಷದಲ್ಲಿ ಉತ್ತಮ ಮಳೆಯಾಗಿರುವ ಕಾರಣ ನೀರಿನ ಅಭಾವ ಕಡಿಮೆಯಾಗಿದೆ. ನೀರಿನ ಸಮಸ್ಯೆ ಶಾಶ್ವತವಾಗಿ ನೀಗಿಸಲು ನನ್ನ ಎಲ್ಲಾ ಸಹಕಾರ ಪಕ್ಷಾತೀತವಾಗಿ ನೀಡುವುದಾಗಿ ತಿಳಿಸಿದರು. ಇದೇ ವೇಳೆ 14 ನೇ ವಾರ್ಡ್ ಸದಸ್ಯ ವೈ.ಆರ್.ರುದ್ರೇಶ್ ರವರು ವಾರ್ಡ್ ನ 400 ಕುಟುಂಬಕ್ಕೆ ನೀರಿನ ಕ್ಯಾನ್ ಉಚಿತವಾಗಿ ನೀಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರವೀಂದ್ರ, ಪುರಸಭಾ ಅಧ್ಯಕ್ಷೆ ರೇಖಾ ವೇಣುಗೋಪಾಲ್, ಉಪಾಧ್ಯಕ್ಷೆ ಪುಷ್ಪಲತಾ, ಸ್ಥಾಯಿಸಮಿತಿ ಅಧ್ಯಕ್ಷ ನಾಗೇಶ್, ಸದಸ್ಯರಾದ ರಘು, ರುದ್ರೇಶ್, ಗೋಪಿ, ರತ್ನಮ್ಮ, ಗೀತಾ ಶ್ರೀಧರ್ ಮುಖ್ಯಾಧಿಕಾರಿ ನಾಗರಾಜ್, ಜೆಡಿಎಸ್ ಟೌನ್ ಅಧ್ಯಕ್ಷ ಮುನಿನಂಜಪ್ಪ, ಇನ್ನು ಹಲವು ಮುಖಂಡರು ಜನಪ್ರತಿನಿಧಿಗಳು ಇದ್ದರು.