2023 ಕ್ಕೆ ಬಿಜೆಪಿ ಪಕ್ಷ ಶೂನ್ಯ ಪಕ್ಷವಾಗಿ ಉಳಿಯಲಿದೆ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ

ಕುಷ್ಟಗಿ:- ಅತಿಯಾಗಿ ಬೆಲೆ ಏರಿಕೆ ಮಾಡಿ ಈ ದೇಶದ ಜನತೆಯಿಂದ ಬೇಸತ್ತಿರುವ ಬಿಜೆಪಿ ಪಕ್ಷ 2023 ಕ್ಕೆ ನಮ್ಮ ರಾಜ್ಯದಲ್ಲಿ ಅಷ್ಟೇ ಅಲ್ಲದೇ ಇಡೀ ದೇಶದಲ್ಲಿ ಶೂನ್ಯ ಪಕ್ಷವಾಗಿ ಉಳಿಯಲಿದೆ ಎಂದು‌ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು.ಇಲ್ಲಿನ ತಮ್ಮ ನಿವಾಸದಲ್ಲಿ ಸುದ್ದಿ ಮಿತ್ರರೊಂದಿಗೆ ಮಾತನಾಡಿದ ಅವರು ೬೦ ವರ್ಷ ಮಾಡಿದಂತಹ ಯೋಜನೆಯ ಸಾಧನೆಯ ಕಾರ್ಯಕ್ರಮವನ್ನ ಬಿಜೆಪಿ ಪಕ್ಷ ಬರಿ ೭ ವರ್ಷದಲ್ಲಿ ಮಾಡಿ ತೋರಿಸುತ್ತೇನೆ ಎಂದು ಹೇಳಿ ಇವತ್ತು ಸಮರ್ಪಕವಾದ ಯೋಜನೆಯನ್ನು ತಯಾರು ಮಾಡದೇ ಇವರ ಕೈಯಲ್ಲಿ ಒಂದು ಕಾರ್ಯಕ್ರಮ ಮಾಡಲು ಆಗುತ್ತಿಲ್ಲ ಎಂದು ಶಾಸಕರು ಬಿಜೆಪಿ ಪಕ್ಷವನ್ನು ಟೀಕಿಸಿದರು.

ಆದರೆ ೨೦೨೩ ಕ್ಕೆ ಬಿಜೆಪಿ ಪಕ್ಷ ಶೂನ್ಯ ಪಕ್ಷವಾಗಿ ಉಳಿಯಲಿದೆ ಈ ದೇಶದ ಜನತೆ ಬಿಜೆಪಿ ಪಕ್ಷದ ದುರಾಡಳಿತಕ್ಕೆ ಬೇಸರಗೊಂಡಿದ್ದಾರೆ. ಆದ್ದರಿಂದ ಈಗ ನಡೆಯಲಿರುವ ಹಾನಗಲ್ ಮತ್ತು ಸಿಂದಗಿ ವಿಧಾನಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷ ದೂಳಿಪಟವಾಗಲಿದೆ ಆದ್ದರಿಂದ ನಮ್ಮ ಕಾಂಗ್ರೆಸ್ ಪಕ್ಷ ಎರಡು ಕ್ಷೇತ್ರದಲ್ಲಿ ವಿಜಯದ ಪತಾಕಿ ಹಾರಿಸಲಿದೆ ಬಿಜೆಪಿ ಪಕ್ಷ ಬೆಲೆ ಏರಿಕೆ ಮಾಡಿ ಎಲ್ಲಾ ರಂಗದಲ್ಲಿ ವಿಫಲವಾಗಿದೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಈ ಒಂದು ಬೆಲೆ ಏರಿಕೆಯಿಂದ ಸಾಮಾನ್ಯ ಜನತೆ ಮತ್ತು ಈ ನಾಡಿನ ರೈತರು ರೋಷ ಹೋಗಿದ್ದಾರೆ. ಬಿಜೆಪಿ ‌ಸಾಮಾನ್ಯ ಜನರ ಜೀವ ತೆಗೆಯುತ್ತಿದೆ. ಸಾಮಾನ್ಯ ಜನರು ಬದುಕುವ ಸ್ಥಿತಿ ಬಂದಿಲ್ಲ ಇವತ್ತು ಅಡಿಗೆ ಎಣ್ಣೆ ಬೆಲೆ ೬೦ ಕೆ.ಜಿ ಇದ್ದ ಬೆಲೆ ೧೮೦ ರೂಪಾಯಿ ಆಗಿದೆ ಬೆಲೆ ಏರಿಕೆಯನ್ನು ಹೆಚ್ಚು ಮಾಡಿ ನಮ್ಮ ದೇಶದ ಆರ್ಥಿಕ ಸ್ಥಿತಿಯನ್ನು ಅದೋ ಗತಿಗೆ ತಂದು ಕಾಂಗ್ರೆಸ್ ಪಕ್ಷ ‌ಮಾಡಿದ ಸಾಲ ಕ್ಕಿಂತ ೭ ಪಟ್ಟು ಹೆಚ್ಚಿಗೆ ಮಾಡಿ ನಮ್ಮ‌ ದೇಶವನ್ನು ಅಭಿವೃದ್ಧಿ ಮಾಡದೆ ಆರ್ಥಿಕ ಸ್ಥಿತಿಯನ್ನು ಹಾಳುಮಾಡಿದ್ದಾರೆ ಎಂದು ಹೇಳಿದರು.

Leave a Comment

Your email address will not be published. Required fields are marked *

Translate »
Scroll to Top