ವಿಕಲಚೇತನ ಯುವಕನ ಬೇಡಿಕೆಗೆ ಸ್ಪಂದಿಸಿ ಮಾನವೀಯತೆ ಮೆರೆದ ಮುಖ್ಯಮಂತ್ರಿ

ಬೆಂಗಳೂರು: ಕೊಪ್ಪಳ ಜಿಲ್ಲೆಯ ಕನಕಗಿರಿ ಕ್ಷೇತ್ರದ ಅಡವಿಬಾವಿ ಗ್ರಾಮದ ಶಿವಪ್ಪ ಎಂಬ ವಿಕಲಚೇತನ ಯುವಕನ ಬೇಡಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಂದಿಸಿ ಮಾನವೀಯತೆ ಮೆರೆದಿದ್ದಾರೆ. ಇಂದು ಬೆಂಗಳೂರಿನ ಬಿಜೆಪಿ ಕೋರ್ ಕಮೀಟಿ ಸಭೆಯ ನಂತರ ಹೊರಗೆ ಬಂದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಶಿವಪ್ಪ ತನ್ನ ತ್ರಿಚಕ್ರ ವಾಹನ ಅಪಘಾತಕ್ಕೆ ಈಡಾಗಿದ್ದು, ಹೊಸ ತ್ರಿ – ಚಕ್ರ ವಾಹನಕ್ಕೆ ಮನವಿ ಮಾಡಿದರು.

ಶಿವಪ್ಪನ ಮನವಿಗೆ ತಕ್ಷಣವೇ ಸ್ಪಂದಿಸಿದ ಸಿಎಂ ಬೊಮ್ಮಾಯಿ ಕೊಪ್ಪಳ ಜಿಲ್ಲಾಧಿಕಾರಿಗಳಿಗೆ
ದೂರವಾಣಿ ಕರೆ ಮಾಡಿ ಮಾತಾಡಿದ‌ರು. ಶಿವಪ್ಪನಿಗೆ ತ್ರಿಚಕ್ರ ವಾಹನದ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದರು.

Leave a Comment

Your email address will not be published. Required fields are marked *

Translate »
Scroll to Top