ಇಂದಿನ ರಾಶಿ ಭವಿಷ್ಯ ಹೇಗಿದೆ ನೋಡಿ.

ಮೇಷ ರಾಶಿ: ವೃತ್ತಿಪರ ವ್ಯವಹಾರಗಳು ನಿಧಾನವಾಗಿ ಸಾಗುತ್ತವೆ. ಉದ್ಯೋಗದಲ್ಲಿ ಅಧಿಕಾರಿಗಳಿಂದ ಕೋಪಕ್ಕೆ ಗುರಿಯಾಗುತ್ತೀರಿ. ದೂರ ಪ್ರಯಾಣವನ್ನು ಮುಂದೂಡಲಾಗುತ್ತದೆ. ಕೈಗೊಂಡ ಕಾರ್ಯಗಳು ಕಠಿಣ ಪರಿಶ್ರಮದಿಂದ ಪೂರ್ಣಗೊಳ್ಳುತ್ತವೆ. ಸ್ಥಿರಾಸ್ತಿ ವಿಷಯದಲ್ಲಿ ಹಿರಿಯರೊಂದಿಗೆ ಭಿನ್ನಭಿಪ್ರಾಯಗಳು ಇರುತ್ತವೆ. ಮಕ್ಕಳ ಶೈಕ್ಷಣಿಕ ವಿಷಯಗಳು  ನಿರುತ್ಸಾಹಗೊಳಿಸುತ್ತದೆ.

ವೃಷಭ ರಾಶಿ : ಸಹೋದರರೊಂದಿಗಿನ ವಿವಾದಗಳು ನಿವಾರಣೆಯಾಗುತ್ತವೆ. ಮನೆಯ ವಾತಾವರಣ ಸಂತೋಷದಿಂದ ಕೂಡಿರುತ್ತದೆ. ವೃತ್ತಿಪರ ವ್ಯವಹಾರದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡು, ಲಾಭವನ್ನು ಪಡೆಯುತ್ತೀರಿ. ಪ್ರಮುಖ ವ್ಯವಹಾರಗಳಲ್ಲಿ  ಸ್ವಂತ ಆಲೋಚನೆಗಳು ಕೂಡಿ ಬರುತ್ತವೆ. ಅಗತ್ಯಕ್ಕೆ ಇತರರಿಂದ ಆರ್ಥಿಕ ಸಹಾಯ ದೊರೆಯುತ್ತದೆ. ಹೊಸ ಉದ್ಯೋಗಾವಕಾಶಗಳು ದೊರೆಯುತ್ತವೆ.

ಮಿಥುನ ರಾಶಿ : ಹೊಸ ವ್ಯವಹಾರಗಳು ಅಲ್ಪ ಲಾಭದಾಯಕವಾಗಿರುತ್ತವೆ .ನಿರುದ್ಯೋಗ ಪ್ರಯತ್ನಗಳು ನಿರುತ್ಸಾಹಗೊಳಿಸುತ್ತವೆ.  ಉದ್ಯೋಗಿಗಳಿಗೆ ಅಧಿಕಾರಿಗಳ ಒತ್ತಡ  ಹೆಚ್ಚಾಗುತ್ತದೆ. ಕಣ್ಣಿನ ಸಂಬಂಧಿತ ಕಾಯಿಲೆಗಳು ಸ್ವಲ್ಪಮಟ್ಟಿಗೆ ನೋವಿನಿಂದ ಕೂಡಿರುತ್ತದೆ. ಕೈಗೆತ್ತಿಕೊಂಡ ಕೆಲಸಗಳು ಮಂದಗತಿಯಲ್ಲಿ ಸಾಗುತ್ತವೆ. ಹಣಕಾಸಿನ ಪರಿಸ್ಥಿತಿ ಗೊಂದಲಮಯವಾಗಿರುತ್ತದೆ .ದೈವಿಕ ಚಿಂತನೆ ಹೆಚ್ಚಾಗುತ್ತದೆ.

ಕಟಕ ರಾಶಿ: ಮಕ್ಕಳ ಶೈಕ್ಷಣಿಕ ವಿಷಯಗಳು ತೃಪ್ತಿಕರವಾಗಿ  ಸಾಗುತ್ತವೆ. ವ್ಯಾಪಾರ-ವ್ಯವಹಾರಗಳು ನಿರೀಕ್ಷೆಯಂತೆ ಸಾಗುತ್ತವೆ. ಸಮಾಜದಲ್ಲಿ ಗೌರವಕ್ಕೆ ಕೊರತೆ ಇರುವುದಿಲ್ಲ. ಕೈಗೆತ್ತಿಕೊಂಡ ಕೆಲಸದಲ್ಲಿ ಕಾರ್ಯ ಸಿದ್ದತೆ ಇರುತ್ತದೆ. ಹಠಾತ್ ಆರ್ಥಿಕ ಲಾಭದ ಸೂಚನೆಗಳಿವೆ. ದೂರದ ಬಂಧುಗಳ ಆಗಮನ ಸಂತಸ ತರುತ್ತದೆ.

ಸಿಂಹ ರಾಶಿ : ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತದೆ.  ಸಾಲಗಾರರ ಒತ್ತಡ ಹೆಚ್ಚಾಗುತ್ತದೆ. ಹೊಟ್ಟೆಯ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಕೈಗೆತ್ತಿಕೊಂಡ ಕೆಲಸಗಳಲ್ಲಿ ವಿಳಂಬ ಉಂಟಾಗುತ್ತದೆ. ವ್ಯಾಪಾರದಲ್ಲಿ ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ. ವೃತ್ತಿಪರ  ಉದ್ಯೋಗಗಳಲ್ಲಿ ವಿವಾದಗಳಿಂದ ದೂರವಿರುವುದು ಉತ್ತಮ.

 

ಕನ್ಯಾ ರಾಶಿ: ಸಮಾಜದ ಪ್ರಮುಖ ವ್ಯಕ್ತಿಗಳಿಂದ ವಿಶೇಷ ಬೆಂಬಲ ದೊರೆಯುತ್ತದೆ. ಮಕ್ಕಳ ವಿವಾಹ ಪ್ರಯತ್ನಗಳು ಉತ್ತಮ ಫಲಿತಾಂಶವನ್ನು ನೀಡುತ್ತವೆ. ಹಣಕಾಸಿನ ವ್ಯವಹಾರಗಳು ಸುಗಮವಾಗಿ ಸಾಗುತ್ತವೆ. ಮನೆಯಲ್ಲಿ ಮಕ್ಕಳ ಶುಭ ಕಾರ್ಯದ ಬಗ್ಗೆ ಪ್ರಸ್ತಾಪವಿರುತ್ತದೆ.  ಬಂಧು ಮಿತ್ರರ ನೆರವಿನಿಂದ ಮಹತ್ವದ ಕಾರ್ಯಗಳನ್ನು ಪೂರ್ಣಗೊಳಿಸುತ್ತೀರಿ.

ತುಲಾ ರಾಶಿ : ಉದ್ಯೋಗದಲ್ಲಿ ದೀರ್ಘಕಾಲದಿಂದ ಇದ್ದ ಸಮಸ್ಯೆಗಳು ಬಗೆಹರಿಯುತ್ತವೆ. ವ್ಯಾಪಾರ ವ್ಯವಹಾರಗಳು ಆಶಾದಾಯಕವಾಗಿರುತ್ತವೆ. ಮನೆಯ ಹೊರಗೆ  ಅನುಕೂಲಕರ ವಾತವಾರಣವಿರುತ್ತದೆ. ವೃತ್ತಿಪರ ವ್ಯವಹಾರಗಳಲ್ಲಿ ಸ್ವಂತ ಆಲೋಚನೆಗಳೊಂದಿಗೆ ಮುಂದುವರಿಯುವುದು ಉತ್ತಮ. ಬಂಧುಗಳಲ್ಲಿ ಸಣ್ಣಪುಟ್ಟ ವಿವಾದಗಳು ಉಂಟಾಗುತ್ತವೆ. ದೈವಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ.

ವೃಶ್ಚಿಕ ರಾಶಿ : ವ್ಯವಹಾರದಲ್ಲಿ ಇತರರ ವರ್ತನೆಯಿಂದ ಮಾನಸಿಕ ಅಶಾಂತಿ  ಉಂಟಾಗುತ್ತದೆ.ವೃತ್ತಿಪರ ವ್ಯವಹಾರಗಳು ನಿಧಾನಗತಿಯಲ್ಲಿ ಸಾಗುತ್ತವೆ. ನಿರುದ್ಯೋಗ ಪ್ರಯತ್ನಗಳು ವಿಫಲವಾಗುತ್ತವೆ. ಕುಟುಂಬ ಸದಸ್ಯರೊಂದಿಗೆ ಸಣ್ಣ ಪುಟ್ಟ ವಿವಾದಗಳಿರುತ್ತವೆ. ಕೈಗೊಂಡ ಕೆಲಸಗಳು ಮಧ್ಯದಲ್ಲಿ ನಿಲ್ಲುತ್ತವೆ . ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.

ಧನುಸ್ಸು ರಾಶಿ : ವೃತ್ತಿ ವ್ಯವಹಾರದಲ್ಲಿ ಗೊಂದಲ ಉಂಟಾಗುತ್ತದೆ. ನಿರುದ್ಯೋಗಿಗಳಿಗೆ ಹೆಚ್ಚಿನ ಕಷ್ಟದಿಂದ ಅಲ್ಪ ಫಲಿತಾಂಶ ದೊರೆಯುತ್ತದೆ.ಉದ್ಯೋಗದಲ್ಲಿ ಜವಾಬ್ದಾರಿಗಳು ಹೆಚ್ಚಾಗುತ್ತವೆ.ದೂರದ ಪ್ರಯಾಣವನ್ನು ಮುಂದೂಡುವುದು ಉತ್ತಮ. ಕೆಲವು ವ್ಯವಹಾರಗಳು ಸಮಸ್ಯಾತ್ಮಕವಾಗಿರುತ್ತವೆ. ವ್ಯರ್ಥ ಖರ್ಚುಗಳು ಹೆಚ್ಚಾಗುತ್ತವೆ.

ಮಕರ ರಾಶಿ : ಉದ್ಯೋಗದಲ್ಲಿ ಅಧಿಕಾರಿಗಳಿಂದ ಗೌರವ ಹೆಚ್ಚಾಗುತ್ತದೆ.ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಬೇಕು.ಪ್ರಯಾಣದಲ್ಲಿ ಹೊಸ ಪರಿಚಯಗಳು ಉಂಟಾಗುತ್ತವೆ. ಪ್ರಮುಖ ವಿಷಯಗಳಲ್ಲಿ ಸಂಗಾತಿಯ ಸಲಹೆಗಳು ಕೂಡಿ ಬರುತ್ತವೆ. ನಿರುದ್ಯೋಗಿಗಳಿಗೆ ಶುಭ ಸುದ್ದಿ ದೊರೆಯುತ್ತದೆ. ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ.

ಕುಂಭ ರಾಶಿ : ಬಂಧು ಮಿತ್ರರೊಂದಿಗೆ ಸೌಹಾರ್ದತೆ ಹೆಚ್ಚಾಗುತ್ತದೆ.ವ್ಯವಹಾರದಲ್ಲಿ ಶತ್ರುಗಳ ಸಮಸ್ಯೆಗಳಿಂದ  ಬುದ್ಧಿವಂತಿಕೆಯಿಂದ ಹೊರಬರುತ್ತೀರಿ. ಮನೆಯ ಹೊರಗೆ  ಅನುಕೂಲಕರವಾಗಿರುತ್ತದೆ. ಹಣಕಾಸಿನ ವಿಚಾರಗಳು ಅನುಕೂಲಕರವಾಗಿರುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿ ಹೊಸ ಪ್ರೋತ್ಸಾಹ ದೊರೆಯುತ್ತದೆ. ಆಪ್ತ ಸ್ನೇಹಿತರೊಂದಿಗೆ ಮನೆಯಲ್ಲಿ ಸಂತೋಷದಿಂದ ಕಳೆಯುತ್ತೀರಿ.

 

ಮೀನ ರಾಶಿ : ಹೊಸ  ವಸ್ತು ಮತ್ತು ವಾಹನಗಳನ್ನು ಖರೀದಿಸುತ್ತೀರಿ. ದೂರದ ಸ್ನೇಹಿತರಿಂದ ಶುಭ ಸುದ್ಧಿ ದೊರೆಯುತ್ತದೆ. ಉದ್ಯೋಗದಲ್ಲಿ ಉತ್ತಮ ಕಾರ್ಯನಿರ್ವಹಣೆಯಿಂದ ಅಧಿಕಾರಿಗಳಿಂದ ಮೆಚ್ಚುಗೆಯನ್ನು ಪಡೆಯುತ್ತೀರಿ. ನಿರ್ಣಾಯಕ ಸಮಯದಲ್ಲಿ ಒಳ್ಳೆಯ ಚಿಂತನೆಯ ಜ್ಞಾನದಿಂದ ಮುನ್ನಡೆಯುತ್ತೀರಿ. ವೃತ್ತಿಪರ ವ್ಯವಹಾರಗಳು ಲಾಭದಾಯಕವಾಗಿರುತ್ತವೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top