ರಾಯಚೂರು : ಕನ್ನಡ ಕಂಠೀರವ, ರಸಿಕರ ರಾಜ, ಗಾನ ಗಂಧರ್ವ, ಕರ್ನಾಟಕ ರತ್ನ, ನಟಸಾರ್ವಭೌಮ, ಪದ್ಮಭೂಷಣ ಡಾ.ರಾಜ್ ಕುಮಾರ್ ಅವರ 94ನೇ ಜನ್ಮ ದಿನಾಚರಣೆ ಅಂಗವಾಗಿ ಇಂದು ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಡಾ.ಕೆ.ಆರ್.ದುರುಗೇಶ್ ಅವರು ಡಾ.ರಾಜಕುಮಾರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ನಮನ ಸಲ್ಲಿಸಿದರು. ಈ ವೇಳೆ ಮಾತನಾಡಿ, ಅವರು ಸಾಮಾನ್ಯ ಕುಟುಂಬದಿoದ ಬಂದು ಅಸಾಮಾನ್ಯ ಸಾಧನೆ ಮಾಡಿ, ಪ್ರತಿಯೊಬ್ಬರಲ್ಲೂ ಒಂದೇ ತರನಾಗಿ ಕಾಣುವ ವ್ಯಕ್ತಿತ್ವ ಡಾ.ರಾಜಕುಮಾರ್ ಅವರದ್ದು ಎಂದು ಸ್ಮರಿಸಿದರು. ಸಮಗ್ರ ಕರ್ನಾಟಕವನ್ನು ಪ್ರತಿನಿಧಿಸುವ ಏಕೈಕ ಕಲಾವಿದ ಎಂದರೆ ಅದು ಡಾ.ರಾಜ್ಕುಮಾರ್ ಮಾತ್ರ, ಅವರ ಪ್ರತಿ ನಡೆ-ನುಡಿ ಇತರರಿಗೆ ಮಾರ್ಗದರ್ಶನವಾಗಿತ್ತು. ಅವರು ಕೇವಲ ಒಬ್ಬ ಕಲಾವಿದರಲ್ಲದೆ ಅತ್ಯುತ್ತಮ ಮಾನವೀಯ ಅಂತಃಕರಣವುಳ್ಳ ಮಹಾನ್ ಮಾನವತಾವಾದಿಯಾಗಿದ್ದರು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತರರಾದ ಭೀಮರಾಯ ಹದ್ದಿನಾಳ, ಪಿ.ಚನ್ನಬಸವ ಬಾಗಲವಾಡ, ಖಾನ್ ಸಾಬ್ ಮೊಮೆನ್, ಡಾ.ಶರಣಪ್ಪ ಗೋನಾಳ, ಡಾ.ದಂಡಪ್ಪ ಬಿರಾದರ್, ಸುಮಂಗಲ ಸಕ್ರಿ, ಲಲಿತಾ, ಪ್ರತಿಭಾ ಗೋನಾಳ, ತಮ್ಮೇಶ, ಪಿ.ನರಸಿಂಹಲು, ಶಿಲ್ಪಾ ಹಿರೇಮಠ, ರೇಖಾ ಪಾಟೀಲ್, ಬಸೀರ್ ಅಹ್ಮದ್ ಹೊಸಮನಿ, ವಾರ್ತಾ ಇಲಾಖೆಯ ಪ್ರಥಮ ದರ್ಜೆ ಸಹಾಯಕರಾದ ಲಿಂಗರಾಜ್, ಸಿನಿ ಚಾಲಕ ಎ.ಪ್ರಕಾಶ್, ಬೆರಳಚ್ಚುಗಾರ ರಮೇಶ ಪಿ.ಗೌಡೂರು, ಮಹ್ಮಮದ್ ಅಜರ್ ಉಲ್ ಹಕ್, ಅಂಬ್ರೇಶ ಚವ್ಹಾಣ್ ಸೇರಿದಂತೆ ಡಾ.ರಾಜ್ ಕುಮಾರ ಅಭಿಮಾನಿಗಳ ಸಂಘದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಇದ್ದರು.