ಶಿವಮೊಗ್ಗ

ಡಿಕೆಶಿ, ಸಿದ್ದರಾಮಯ್ಯನವರ ಕುತಂತ್ರ ನಡೆಯಲ್ಲ

ಶಿವಮೊಗ್ಗ,ಜನವರಿ,26 : ಶಿವಮೊಗ್ಗ ಜಿಲ್ಲೆಯಲ್ಲಿ ಗಣರಾಜ್ಯೋತ್ಸವದ ಧ್ವಜಾರೋಹಣ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ. ಇದಕ್ಕೆ ಅವಕಾಶ ಮಾಡಿಕೊಟ್ಟ ನಮ್ಮ ನಾಯಕರಾದ ಶ್ರೀ ಬಿಎಸ್ ಯಡಿಯೂರಪ್ಪನವರು ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಶಿವಮೊಗ್ಗ ಇಡೀ ರಾಜ್ಯದಲ್ಲಿ ಹೆಸರುವಾಸಿ ಆಗಿದೆ. ಕೆಆರ್ ಪೇಟೆ ಹಾಗೂ ಶಿವಮೊಗ್ಗ ಅವಿನಾಭವ ಸಂಬಂಧ ಇದೆ ಅನ್ಸುತ್ತೆ. ಯಡಿಯೂರಪ್ಪನವರು ಕೆಆರ್ ಪೇಟೆಯಿಂದ ಬಂದವರು. ನಾನು ಕೆಆರ್ ಪೇಟೆಯವನಾಗಿ ಇಲ್ಲಿ ಬಂದು ಧ್ವಜಾರೋಹಣ ಮಾಡಿರುವುದಕ್ಕೆ ಖುಷಿ ಕೊಟ್ಟಿದೆ ಎಂದು ಸಚಿವ ಡಾ.ನಾರಾಯಣಗೌಡ …

ಡಿಕೆಶಿ, ಸಿದ್ದರಾಮಯ್ಯನವರ ಕುತಂತ್ರ ನಡೆಯಲ್ಲ Read More »

ಪರಪ್ಪನ ಅಗ್ರಹಾರ ಕಾರಗೃಹ ಅವ್ಯವಹಾರಗಳ ಬಗ್ಗೆ ತನಿಖೆ

ಶಿವಮೊಗ್ಗ, ಜನವರಿ, 25 ; ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಯುತ್ತಿರುವ ಅವ್ಯವಹಾರ ಗಳ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿದೆ. ನಾನು ಈ ಹಿಂದೆ ಕಾರಾಗೃಹಕ್ಕೂ ಭೇಟಿ ನೀಡಿದ್ದೆ ಹಾಗೂ ಅಲ್ಲಿನ ಸಿಬ್ಬಂದಿಗಳು ಹಾಗೂ ಕೈದಿಗಳ ಜೊತೆಗೂ ಸಂವಾದ ನಡೆಸಿದ್ದೆ. ಕಾರಾಗೃಹಗಳು ಅಪರಾಧ ಕೃತ್ಯ ನಡೆಸುವ ಕೇಂದ್ರ ಸ್ಥಾನಗಳು ಆಗಬಾರದು. ಈ ನಿಟ್ಟಿನಲ್ಲಿ ಯಾವುದೇ ರೀತಿಯ ಲೋಪಗಳಾಗುತ್ತಿದ್ದರೆ ಅದರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಲು ನಿರ್ದೇಶನ ನೀಡಿದ್ದೇನೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆಗೆ ಆದೇಶ ನೀಡಿದ್ದೇನೆ. ವರದಿ ಸಲ್ಲಿಕೆ ನಂತರ …

ಪರಪ್ಪನ ಅಗ್ರಹಾರ ಕಾರಗೃಹ ಅವ್ಯವಹಾರಗಳ ಬಗ್ಗೆ ತನಿಖೆ Read More »

ಲಾರಿ ಮತ್ತು ಬಸ್ ನಡುವೆ ಡಿಕ್ಕಿ ೧೦ ಕ್ಕೂ ಹೆಚ್ಚು ಜನರಿಗೆ ಗಾಯ

ಶಿವಮೊಗ್ಗ, ಡಿ,30 : ಸಕ್ರೆಬೈಲು ಮತ್ತು ಮಂಡಗದ್ದೆಯ ನಡುವೆ ಲಾರಿ ಮತ್ತು ಬಸ್ ನಡುವೆ ಅಪಘಾತ ಸಂಭವಿಸಿದ್ದು ೧೦ ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿದೆ. ಲಾರಿ ಚಾಲಕನಿಗೆ ತೀವ್ರ ಗಾಯವಾಗಿದ್ದು ಆತನನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಕ್ರೆಬೈಲು ಮತ್ತು ಮಂಡಗದ್ದೆಯ ರಸ್ತೆ ಮಧ್ಯ ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಹೋಗುತ್ತಿದ್ದ ಸಹ್ಯಾದ್ರಿ ಬಸ್ ಮತ್ತು ತೀರ್ಥಹಳ್ಳಿಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಉಂಟಾಗಿ ಲಾರಿ ಚಾಲಕ ಆದರ್ಶ್ ಎಂಬುವವರಿಗೆ ತೀವ್ರ ಗಾಯವಾಗಿದ್ದು ಅವರನ್ನು ಕೂಡಲೆ ಆಸ್ಪತ್ರೆಗೆ ಸೇರಿಸಲಾಗಿದೆ. …

ಲಾರಿ ಮತ್ತು ಬಸ್ ನಡುವೆ ಡಿಕ್ಕಿ ೧೦ ಕ್ಕೂ ಹೆಚ್ಚು ಜನರಿಗೆ ಗಾಯ Read More »

ವಿಶ್ರಾಂತ ಅಧಿಕಾರಿಗಳು, ನೌಕರರ ಸಭೆ ನಡೆಸಿದ ಡಿ.ಕೆ. ಶಿವಕುಮಾರ್

ಶಿವಮೊಗ್ಗ: ವಿಶ್ರಾಂತ ನೌಕರರ ಸಂಘ ಶನಿವಾರ ಏರ್ಪಡಿಸಿದ್ದ ನಿವೃತ್ತ ಸರಕಾರಿ ಅಧಿಕಾರಿಗಳು ಹಾಗೂ ನೌಕರರ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪಾಲ್ಗೊಂಡರು. ಮಾಜಿ ಶಾಸಕರಾದ ಬೇಳೂರು ಗೋಪಾಲಕೃಷ್ಣ, ಚಂದ್ರಶೇಖರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುಂದರೇಶ್, ನಿವೃತ್ತ ಡಿಎಫ್ಒ ರವಿಕುಮಾರ್, ನಿವೃತ್ತ ಡಿವೈಎಸ್ಪಿಗಳಾದ ಪಿ.ಒ. ಶಿವಕುಮಾರ್, ಎಸ್.ಸಿ. ಮಂಜಪ್ಪ, ನಿವೃತ್ತ ಎಆರ್ಟಿಒ ಪಾಲಾಕ್ಷಪ್ಪ, ನಿವೃತ್ತ ಡಿಡಿಪಿಐ ಕುಮಾರ್ ಮತ್ತಿತರರು ಪಾಲ್ಗೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, ನೀವು ನಿವೃತ್ತರಾಗಿದ್ದೆರೆಂದು ಭಾವಿಸುವ ಅಗತ್ಯವಿಲ್ಲ.‌ ನಿಮ್ಮಂತ ಪ್ರಜ್ಞಾವಂತರ, …

ವಿಶ್ರಾಂತ ಅಧಿಕಾರಿಗಳು, ನೌಕರರ ಸಭೆ ನಡೆಸಿದ ಡಿ.ಕೆ. ಶಿವಕುಮಾರ್ Read More »

ಶಾಸಕ ಶ್ರೀ ಎಸ್ ಆರ್ ವಿಶ್ವನಾಥ್ ಅವರ ಹತ್ಯೆ ಸಂಚು ಆಪಾದನೆ ಕುರಿತು ಗಂಭೀರ ತನಿಖೆ: ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ

ಶಿವಮೊಗ್ಗ, ಡಿಸೆಂಬರ್ ೧ : ಶಾಸಕ ಶ್ರೀ ಎಸ್ ಆರ್ ವಿಶ್ವನಾಥ್ ಅವರ ಹತ್ಯೆಗೆ ಸಂಚು ರೂಪಿಸಲಾಗಿತ್ತು, ಎಂಬ ವಿಷಯವನ್ನು, ಸರಕಾರ ಗಂಭೀರವಾಗಿ ಪರಿಗಣಿಸಿದ್ದು ಈ ಬಗ್ಗೆ, ಸೂಕ್ತ ತನಿಖೆ ನಡೆಸಲಾಗುವುದು ಎಂದು, ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ರವರು, ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ” ಈ ಬಗ್ಗೆ ಸ್ವತಃ ವಿಶ್ವನಾಥ್ ಅವರು ನನ್ನ ಜೊತೆ ಮಾತನಾಡಿದ್ದಾರೆ” ಎಂದೂ ಹೇಳಿದ್ದಾರೆ. ಪ್ರಕರಣದ ತನಿಖೆ ಪ್ರಾಥಮಿಕ ಹಂತದಲ್ಲಿದೆ” ಎಂದೂ ಅವರು ಹೇಳಿದ್ದಾರೆ. ಶಾಸಕರ ಮನವಿಯಂತೆ, ಹೆಚ್ಚಿನ …

ಶಾಸಕ ಶ್ರೀ ಎಸ್ ಆರ್ ವಿಶ್ವನಾಥ್ ಅವರ ಹತ್ಯೆ ಸಂಚು ಆಪಾದನೆ ಕುರಿತು ಗಂಭೀರ ತನಿಖೆ: ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ Read More »

ಅಕ್ರಮ ಗೋ ಸಾಗಾಟ ವಿರುದ್ಧ ಕಠಿಣ ಕಾನೂನು ಜಾರಿ

ಶಿವಮೊಗ್ಗ,ನ.೩೦: ರಾಜ್ಯದಲ್ಲಿ ಅಕ್ರಮ ಗೋ ಸಾಗಾಟ ವಿರುದ್ಧ, ಕಠಿಣ ಕಾನೂನು ಜಾರಿಯಾಗಿದ್ದು, ಅದನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ನಿರ್ದೇಶನ ನೀಡಲಾಗಿದೆ, ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ, ತಿಳಿಸಿದ್ದಾರೆ. ತೀರ್ಥಹಳ್ಳಿ ತಾಲೂಕು, ಮೇಳಿಗೆ ಗ್ರಾಮ ದಿಂದ, ಇಂದು, ಅಕ್ರಮವಾಗಿ ದನಗಳನ್ನು ಸಾಗಣೆ ತಡೆಯಲು, ಯತ್ನಿಸಿದ ಇಬ್ಬರು ಯುವಕರನ್ನು, ಪಶು ಕಳ್ಳರು, ತೀವ್ರವಾಗಿ ಗಾಯಗೊಳಿಸಿ, ಪರಾರಿಯಾದ ಘಟನೆ ಕುರಿತು ಮಾತನಾಡಿದ ಸಚಿವರು, ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಜರುಗಿಸಲು, ನಿರ್ದೇಶಿಸಲಾಗಿದೆ, ಎಂದು ತಿಳಿಸಿದ್ದಾರೆ. ದನಗಳ್ಳರನ್ನು ತಡೆಯಲು ಯತ್ನಿಸಿದ ಇಬ್ಬರು …

ಅಕ್ರಮ ಗೋ ಸಾಗಾಟ ವಿರುದ್ಧ ಕಠಿಣ ಕಾನೂನು ಜಾರಿ Read More »

Translate »
Scroll to Top