ಲಾರಿ ಮತ್ತು ಬಸ್ ನಡುವೆ ಡಿಕ್ಕಿ ೧೦ ಕ್ಕೂ ಹೆಚ್ಚು ಜನರಿಗೆ ಗಾಯ

ಶಿವಮೊಗ್ಗ, ಡಿ,30 : ಸಕ್ರೆಬೈಲು ಮತ್ತು ಮಂಡಗದ್ದೆಯ ನಡುವೆ ಲಾರಿ ಮತ್ತು ಬಸ್ ನಡುವೆ ಅಪಘಾತ ಸಂಭವಿಸಿದ್ದು ೧೦ ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿದೆ. ಲಾರಿ ಚಾಲಕನಿಗೆ ತೀವ್ರ ಗಾಯವಾಗಿದ್ದು ಆತನನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.


ಸಕ್ರೆಬೈಲು ಮತ್ತು ಮಂಡಗದ್ದೆಯ ರಸ್ತೆ ಮಧ್ಯ ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಹೋಗುತ್ತಿದ್ದ ಸಹ್ಯಾದ್ರಿ ಬಸ್ ಮತ್ತು ತೀರ್ಥಹಳ್ಳಿಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಉಂಟಾಗಿ ಲಾರಿ ಚಾಲಕ ಆದರ್ಶ್ ಎಂಬುವವರಿಗೆ ತೀವ್ರ ಗಾಯವಾಗಿದ್ದು ಅವರನ್ನು ಕೂಡಲೆ ಆಸ್ಪತ್ರೆಗೆ ಸೇರಿಸಲಾಗಿದೆ. ಇನ್ನು ಬಸ್‌ನಲ್ಲಿದ್ದ ಸುಮಾರು ೧೦ ಜನ, ಆಶಾ, ಚಂದ್ರಪ್ಪ,ತಿಮ್ಮಮಂಜಪ್ಪ ಪಾಲಪ್ಪ, ಇನ್ನಿತರೆ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅವರನ್ನು ಮೆಗ್ಗಾನ್‌ಗೆ ದಾಖಲಿಸಲಾಗಿದೆ.
ಇವರೆಲ್ಲರು ಶಿವಮೊಗ್ಗದ ನವುಲೆ, ಚನ್ನಗಿರಿ ತಾಲೂಕಿನ ಹಬ್ಬಿಗೆರೆ, ಗೋಂಧಿ ಚಟ್ನಹಳ್ಳಿಯ ಪ್ರಯಾಣಿಕರು ಎಂದು ತಿಳಿದು ಬಂದಿದೆ. ಈ ಘಟನೆಯು ತುಂಗಾ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Leave a Comment

Your email address will not be published. Required fields are marked *

Translate »
Scroll to Top