ಶಿವಮೊಗ್ಗ

ಕೆಎಸ್‌ಐಸಿ ಮೈಸೂರ್ ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟ

ಕೆಎಸ್‌ಐಸಿ(ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ) ವತಿಯಿಂದ ಕರ್ನಾಟಕದ ಪಾರಂಪರಿಕ ಉತ್ಪನ್ನವಾದ ‘ಮೈಸೂರ್ ಸಿಲ್ಕ್’ ಸೀರೆಗಳ ಪ್ರದರ್ಶನ ಮತ್ತು ಮಾರಾಟವನ್ನು ಮಾ.೧೦ ರಿಂದ ೧೩ ರವರೆಗೆ ನಗರದ ಹಳೇ ತಾಲ್ಲೂಕು ಕಚೇರಿ ರಸ್ತೆಯ ಶ್ರೀ ವೀರಶೈವ ಕಲ್ಯಾಣ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಇವರು ಮಾ.೧೦ ರ ಬೆಳಿಗ್ಗೆ ೧೦.೩೦ ಕ್ಕೆ ‘ಮೈಸೂರು ಸಿಲ್ಕ್’ ಸೀರೆಗಳ ಪ್ರದರ್ಶನ ಮತ್ತು ಮಾರಾಟವನ್ನು ಶ್ರೀ ವೀರಶೈವ ಕಲ್ಯಾಣ ಮಂದಿರದಲ್ಲಿ ಉದ್ಘಾಟಿಸಲಿದ್ದು, ಕೆಎಸ್‌ಐಸಿ ನಿರ್ದೇಶಕ ಜಿ.ಪಿ.ವಿಜಯಕುಮಾರ್ ಅಧ್ಯಕ್ಷತೆ ವಹಿಸುವರು. ಮಾರಾಟ ಮತ್ತು …

ಕೆಎಸ್‌ಐಸಿ ಮೈಸೂರ್ ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟ Read More »

ಎಲ್ಲರೂ ಮರಗಳನ್ನು ನೆಟ್ಟು ಅದನ್ನು ಆರೈಕೆ ಮಾಡಬೇಕು : ತುಳಿಸಿಗೌಡ

ನಾನು ಈಗಾಗಲೇ ನೂರಾರು ಜಾತಿ ಮರಗಳನ್ನು ಬೆಳೆಸಿದ್ದೇನೆ. ಕೆಲವು ಫಲ ಕೊಡುತ್ತವೆ, ಕೆಲವು ನೆರಳು ಕೊಡುತ್ತವೆ ಹಾಗೂ ಕೆಲವು ಮರಗಳನ್ನು ಕಡಿದರೂ ಮತ್ತೆ ಚಿಗುರಿ ಬೆಳೆಯುತ್ತವೆ. ನನ್ನ ಹಾಗೆ ಎಲ್ಲರೂ ಮರಗಳನ್ನು ನೆಟ್ಟು ಮತ್ತು ಅದನ್ನು ಆರೈಕೆ ಮಾಡಬೇಕು ಎಂದು ಪದ್ಮಶ್ರೀ ಮತ್ತು ಮದರ್ ತೆರೇಸಾ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಅಂಕೋಲದ ತುಳಸಿಗೌಡ ಕರೆ ನೀಡಿದರು.ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗದ ವತಿಯಿಂದ ಮಾ.೮ ರಂದು ನವಿಲೆ ಆವರಣದ ಕೃಷಿ ಮಹಾವಿದ್ಯಾಲಯದ …

ಎಲ್ಲರೂ ಮರಗಳನ್ನು ನೆಟ್ಟು ಅದನ್ನು ಆರೈಕೆ ಮಾಡಬೇಕು : ತುಳಿಸಿಗೌಡ Read More »

ಕುರಿ ಶೆಡ್‌ನಿಂದ ಬದುಕು ಕಟ್ಟಿಕೊಂಡ ಯುವಕ-ಪ್ರದೀಪ್

ಕೊರೊನಾ ಲಾಕ್‌ಡೌನ್ ವೇಳೆ ಬೆಂಗಳೂರಿನಲ್ಲಿದ್ದ ಕೆಲಸ ಕಳೆದುಕೊಂಡು ಊರಿಗೆ ವಾಪಸ್ಸಾದ ಪ್ರದೀಪ್ ಕುರಿಗಳನ್ನು ಕೊಂಡು ಕುರಿ ಸಾಕಾಣಿಕೆಯನ್ನೇ ತಮ್ಮ ಉದ್ಯೋಗವಾಗಿಸಿಕೊಂಡರು. ನಂತರ ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ಕುರಿ ಶೆಡ್ ನಿರ್ಮಿಸಿಕೊಂಡು ಉತ್ತಮ ಆದಾಯ ಗಳಿಸುತ್ತಾ ಸ್ವಗ್ರಾಮದಲ್ಲೇ ನೆಲೆ ಕಂಡುಕೊಂಡಿದ್ದಾರೆ.ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಭಾರಂಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೆಣ್ಣಿಗೆರೆಯ ಪ್ರದೀಪ್ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಕೋವಿಡ್ ವೇಳೆ ಕೆಲಸವಿಲ್ಲದೇ ಊರಿಗೆ ಬಂದಾಗ ಅವರು ಆರಂಭಿಸಿದ ಉದ್ಯೋಗ ಕುರಿ ಸಾಕಾಣಿಕೆ. ತಮ್ಮ ಉಳಿತಾಯದ ಹಣದಲ್ಲಿ ಮೊದಲಿಗೆ ೧೦ …

ಕುರಿ ಶೆಡ್‌ನಿಂದ ಬದುಕು ಕಟ್ಟಿಕೊಂಡ ಯುವಕ-ಪ್ರದೀಪ್ Read More »

ಶ್ರೀ ಹರತಾಳು ಹಾಲಪ್ಪನವರೊಂದಿಗೆ ಆಸ್ಪತ್ರೆಗೆ ಬೇಟಿ

ಹೊಸನಗರ,ಮಾರ್ಚ್,1: ಹಿರಿಯ ಸಂಘಟನಾ ಕಾರ್ಯಕರ್ತರಾದ ನಗರ ಹೋಬಳಿ ಶ್ರೀ ತರುವೆ ನಾಗರಾಜ್ ಅವರು ತೀವ್ರ ಅನಾರೋಗ್ಯದಲ್ಲಿದ್ದು ಹೊಸನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿನ್ನೆ ಸಂಜೆ ಮಾನ್ಯ ಅರಗಜ್ಞಾನೇಂದ್ರ ಶ್ರೀ ಹರತಾಳು ಹಾಲಪ್ಪನವರೊಂದಿಗೆ ಆಸ್ಪತ್ರೆಗೆ ಬೇಟಿ ನೀಡಿ ಅವರ ಯೋಗಕ್ಷೇಮ ವಿಚಾರಿಸಲಾಯಿತು.

ಶಿವಮೊಗ್ಗ ಗಲಭೆ: ಮೃತ ಹರ್ಷನ ಕುಟುಂಬಕ್ಕೆ 10 ಲಕ್ಷ ರೂ. ನೆರವು ಘೋಷಿಸಿದ ಸಚಿವ ಅಶ್ವತ್ಥನಾರಾಯಣ

ಬೆಂಗಳೂರು: ಶಿವಮೊಗ್ಗದಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾಗಿರುವ ಭಜರಂಗದಳದ ಕಾರ್ಯಕರ್ತ ಹರ್ಷ ಅವರ ಕುಟುಂಬಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು 10 ಲಕ್ಷ ರೂ.ಗಳ ನೆರವನ್ನು ಘೋಷಿಸಿದ್ದಾರೆ. ಈ ಬಗ್ಗೆ ಹೇಳಿಕೆ‌ ನೀಡಿರುವ ಅವರು ಡಾ.ಸಿ.ಎನ್ ಅಶ್ವತ್ಥನಾರಾಯಣ ಫೌಂಡೇಶನ್ ನಿಂದ ಪರಿಹಾರದ ಮೊತ್ತ ನೀಡಲಾಗುವುದು ಎಂದು ತಿಳಿಸಿದ್ದಾರೆ.ಸಚಿವರು ಬುಧವಾರ ಸಂಜೆ ಹರ್ಷ ಅವರ ತಾಯಿ ಜತೆ ದೂರವಾಣಿ ಮೂಲಕ ಮಾತನಾಡಿ ಸಂತ್ವಾನ ಹೇಳಿದರು.“ಹರ್ಷ ಈ ದೇಶ ಮತ್ತು ಸಮಾಜಕ್ಕಾಗಿ ತನ್ನ ಪ್ರಾಣವನ್ನೇ ಸಮರ್ಪಿಸಿದ್ದಾನೆ. ಇಂತಹ ಸಂಕಷ್ಟದ ಸಮಯದಲ್ಲಿ …

ಶಿವಮೊಗ್ಗ ಗಲಭೆ: ಮೃತ ಹರ್ಷನ ಕುಟುಂಬಕ್ಕೆ 10 ಲಕ್ಷ ರೂ. ನೆರವು ಘೋಷಿಸಿದ ಸಚಿವ ಅಶ್ವತ್ಥನಾರಾಯಣ Read More »

ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತನ ಹತ್ಯೆ

ಶಿವಮೊಗ್ಗ,ಫೆ,22 : ಈಗಾಗಲೇ ರಾಜ್ಯಾದ್ಯಂತ ಹಿಜಾಬ್ ಕುರಿತ ವಿವಾದದ ಮೂಲಕ ಶಿವಮೊಗ್ಗ ನಗರ ಬಹುದಿನಗಳಿಂದ ಬೂದಿ ಮುಚ್ಚಿದ ಕೆಂಡದಂತಾಗಿತ್ತು. ಇದರ ನಡುವೆ ಭಜರಂಗದಳ ಕಾರ್ಯಕರ್ತನ ಭೀಕರ ಕೊಲೆ ಪರಿಸ್ಥಿತಿ ಜನರಲ್ಲಿ ಮತ್ತಷ್ಟು ಆತಂಕವನ್ನು ತಂದಿದೆ. ಸದ್ಯ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿರು ಪೊಲೀಸರು, ಆರೋಪಿಗಳಿಗೆ ಬಲೆ ಬೀಸಿದ್ದಾರೆ.ಭಾನುವಾರ ರಾತ್ರಿವರೆಗೂ ಶಿವಮೊಗ್ಗ ತಣ್ಣಗಿತ್ತು. ರಾತ್ರಿ ಸುಮಾರು ೯.೩೦ರ ಸಮಯದಲ್ಲಿ ಈ ರಕ್ತಪಾತದ ಪ್ರಕರಣ ನಡೆದಿದೆ.

ಫಸಲ್ ಬಿಮಾ ಯೋಜನೆ ಲಾಭ ಹೆಚ್ಚಿನ ರೈತರಿಗೆ ದೊರೆಯಲು ಕ್ರಮ ಕೈಗೊಳ್ಳಿ

ಶಿವಮೊಗ್ಗ, ಫೆ.19: ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಪ್ರಯೋಜನ ಪಡೆಯುತ್ತಿರುವ ರೈತರ ಸಂಖ್ಯೆ ಕಡಿಮೆಯಿದ್ದು, ಎಲ್ಲಾ ರೈತರು ಇದರ ಪ್ರಯೋಜನ ಪಡೆಯುವ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣ ಗೌಡ ಅವರು ತಿಳಿಸಿದರು. ಅವರು ಶನಿವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು. ಜಿಲ್ಲೆಯಲ್ಲಿ ಸಹಕಾರ ಬ್ಯಾಂಕ್‍ನಲ್ಲಿ 96ಸಾವಿರಕ್ಕೂ ಅಧಿಕ ರೈತರು ಖಾತೆಯನ್ನು ಹೊಂದಿದ್ದರೂ, ಫಸಲ್ ಬಿಮಾ ಯೋಜನೆಯಡಿ …

ಫಸಲ್ ಬಿಮಾ ಯೋಜನೆ ಲಾಭ ಹೆಚ್ಚಿನ ರೈತರಿಗೆ ದೊರೆಯಲು ಕ್ರಮ ಕೈಗೊಳ್ಳಿ Read More »

ಶಿಗ್ಗಾಂವಿ ಅಭಿವೃದ್ಧಿಗೆ 20 ಕೋಟಿ ರೂ.ಗಳ ವಿಶೇಷ ಅನುದಾನ

ಶಿಗ್ಗಾವಿ,13 : ಶಿಗ್ಗಾಂವಿ ನಗರದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ 20 ಕೋಟಿ ರೂ.ಗಳ ವಿಶೇಷ ಅನುದಾನವನ್ನು ಮಂಜೂರು ಮಾಡಲಾಗಿದೆ. ಇಷ್ಟು ದೊಡ್ಡ ಪ್ರಮಾಣದ ಅನುದಾನ ಈ ಕ್ಷೇತ್ರಕ್ಕೆ ನೀಡಿರುವುದು ಇದೇ ಮೊದಲು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಭವಿಷ್ಯ ಬರೆಯುವ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾವೇರಿ, ಫೆಬ್ರವರಿ 13 ಭವಿಷ್ಯ ಬರೆಯುವ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಶಿಗ್ಗಾಂವಿ …

ಶಿಗ್ಗಾಂವಿ ಅಭಿವೃದ್ಧಿಗೆ 20 ಕೋಟಿ ರೂ.ಗಳ ವಿಶೇಷ ಅನುದಾನ Read More »

ತಾಲೂಕಿನಲ್ಲಿ ಒಂದೇ ಒಂದು ಗುಡಿಸಲು ವಿದ್ಯುತ್ ಸಂಪರ್ಕ ರಹಿತರಾಗಿರಬಾರದು

ತೀರ್ಥಹಳ್ಳಿ, ಫೆಬ್ರವರಿ,12 : ರಾಜ್ಯದ ಯಾವುದೇ ಹಳ್ಳಿ ಅಥವಾ ಪಟ್ಟಣದಲ್ಲಿ, ವಿದ್ಯುತ್ ಸಂಪರ್ಕ ವಂಚಿತ ಗುಡಿಸಲು ಅಥವಾ ಮನೆಗಳು ಇರದಂತೆ,ಅಭಿಯಾನ ರೂಪದಲ್ಲಿ, ಮಹತ್ವಾಾಂಕ್ಷೆಯ ” ಬೆಳಕು” ಯೋಜನೆಯನ್ನು, ಅನುಷ್ಟಾನ ಗೊಳಿಸಬೇಕೆಂದು, ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ರವರು ಇಂದು, ಅಧಿಕಾರಿಗಳಿಗೆ, ನಿರ್ದೇಶನ ನೀಡಿದರು. ಸಚಿವರು ಇಂದು ತಮ್ಮ ಮತಕ್ಷೇತ್ರ ತೀರ್ಥಹಳ್ಳಿ ತಾಲೂಕು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ,ಮಾತನಾಡುತ್ತಿದ್ದರು. ಬೆಳಕು, ಯೋಜನೆಯ ಅನುಷ್ಠಾನಕ್ಕೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಪ್ರಾಶಸ್ತ್ಯ ನೀಡಬೇಕು ಹಾಗೂ ಕೇಂದ್ರ ಪ್ರಾಯೋಜಿತ ಈ …

ತಾಲೂಕಿನಲ್ಲಿ ಒಂದೇ ಒಂದು ಗುಡಿಸಲು ವಿದ್ಯುತ್ ಸಂಪರ್ಕ ರಹಿತರಾಗಿರಬಾರದು Read More »

ಪೊಲೀಸ್ ಅಧಿಕಾರಿ ಅಮಾನುತು

ಶಿವಮೊಗ್ಗ ,ಜನವರಿ , 30 : ಒಬ್ಬ ಅಸಹಾಯಕ ಮಹಿಳೆಯ ಮೇಲೆ, ಪೊಲೀಸ್ ಅಧಿಕಾರಿಯೊಬ್ಬರು, ಅವಾಚ್ಯ ಮಾತುಗಳನ್ನು ಬಳಸಿದ್ದಲ್ಲದೆ, ಹಲ್ಲೆ ಮಾಡಿರುವ ಘಟನೆಗೆ ಸಂಬಂಧಿಸಿದಂತೆ, ತನಿಖೆಗೆ ಆದೇಶಿಸಿರುವ ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ, ಆಪಾದಿತ ಪೊಲೀಸ್ ಅಧಿಕಾರಿಯನ್ನು ಸೇವೆಯಿಂದ ಅಮಾನತು ಗೊಳಿಸಿದ್ದಾರೆ. ಯಾರೇ ಆದರೂ ಕಾನೂನನ್ನು ಕೈಗೆ ತೆಗೆದುಕೊಳ್ಳ ಬಾರದು, ಇದಕ್ಕೆ ಪೊಲೀಸರೂ ಹೊರತಾಗಿಲ್ಲ, ಎಂದು ತಿಳಿಸಿರುವ ಸಚಿವರು,ಘಟನೆಯ ಬಗ್ಗೆ ತಕ್ಷಣ ತನಿಖೆ ನಡೆಸಿ, ವರದಿ ನೀಡುವಂತೆ, ನಿರ್ದೇಶಿಸಿದ್ದಾರೆ.

Translate »
Scroll to Top