ತುಮಕೂರು

ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ

ತುಮಕೂರು, ಮಾ,3 : ಗೃಹ ಸಚಿವರು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಶ್ರೀ ಆರಗ ಜ್ಞಾನೇಂದ್ರ ರವರು ಇಂದು ತುಮಕೂರು ನಗರದಲ್ಲಿ, ಟೈಮ್ಸ್ ಆಫ್ ಇಂಡಿಯಾ ಸಮೂಹ ಹಾಗೂ ವಿದ್ಯ ವಿದ್ಯಾ ಶಿಕ್ಷಣ ಸಂಸ್ಥೆ ವತಿಯಿಂದ ಏರ್ಪಡಿಸಲಾಗಿದ್ದ ” ಡ್ರಗ್ಸ್ ಮುಕ್ತ ಕರ್ನಾಟಕ” ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು. ಲೋಕಸಭಾ ಸದಸ್ಯ ಶ್ರಿ ಬಸವರಾಜು, ಶಾಸಕ ಶ್ರಿ ಜ್ಯೋತಿ ಗಣೇಶ್, ವಿಧಾನ ಪರಿಷತ್ ಸದಸ್ಯ ಶ್ರಿ ಚಿದಾನಂದ್ ಗೌಡ ಹಾಗೂ ಇತರ ಗಣ್ಯರು ಈ ಸಂದರ್ಭದಲ್ಲಿ …

ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ Read More »

ಹಂದನಕೆರೆ ನಾಡಕಛೇರಿಯಲ್ಲಿ ಕರೆಂಟ್ ಹೋದರೆ ಸೇವೆ ಸ್ಥಗಿತ!

ಹಂದನಕೆರೆ ನಾಡಕಛೇರಿಯಲ್ಲಿ ಕರೆಂಟ್ ಹೋದರೆ ಸೇವೆ ಸ್ಥಗಿತ!ಇಲ್ಲಿ ಕರೆಂಟ್ ಇದ್ದರೆ ಮಾತ್ರ ಜನರಿಗೆ ಸೇವೆ ಸಿಗುತ್ತದೆ, ಸೌಲಭ್ಯಗಳು ದೊರೆಯುತ್ತವೆ. ಕರೆಂಟ್ ಹೋದರೆ ಎಲ್ಲವೂ ಸ್ಥಗಿತಗೊಂಡು ಸಿಬ್ಬಂದಿಗಳು ಕೈ ಕಟ್ಟಿ ಕೂತರೆ, ಸಾರ್ವಜನಿಕರು ಬಾಗಿಲಲ್ಲಿ ಕಾಯುತ್ತಾ ಕುಳಿತುಕೊಳ್ಳುವ ಅನಿವಾರ್ಯ ಕರ್ಮ ನಿರ್ಮಾಣವಾಗುತ್ತದೆ. ಹೌದು, ಇದು ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ನಾಡಕಛೇರಿಯ ದುಸ್ಥಿತಿ.ನಾಡಕಛೇರಿ ಎಂದರೆ ಬೆಳಗ್ಗೆ ಬಾಗಿಲು ತೆಗೆದ ಕ್ಷಣದಿಂದಲೂ ಸಂಜೆ ಬಾಗಿಲು ಹಾಕುವವರೆವಿಗೂ ಜನಜಂಗುಳಿ ಇದ್ದದ್ದೇ. ದಿನನಿತ್ಯ ಸಾವಿರಾರು ಜನರು ಹಳ್ಳಿಗಳಿಂದ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ವಿವಿಧ …

ಹಂದನಕೆರೆ ನಾಡಕಛೇರಿಯಲ್ಲಿ ಕರೆಂಟ್ ಹೋದರೆ ಸೇವೆ ಸ್ಥಗಿತ! Read More »

ಬಡವರಿಗೆ ನಿವೇಶನ ಒದಗಿಸದ ಪಂಚಾಯತಿಗಳನ್ನು ಸೂಪರ್ ಸೀಡ್ ಮಾಡಲು ಸೂಚನೆ

ತುಮಕೂರು: ಜಿಲ್ಲೆಯ ಗ್ರಾಮೀಣಪ್ರದೇಶದಲ್ಲಿರುವ ನಿವೇಶನ ರಹಿತ ಬಡವರಿಗೆ ವಿವಿಧ ವಸತಿಯೋಜನೆಗಳಡಿ ನಿವೇಶನವನ್ನು ಒದಗಿಸದಿದ್ದಲ್ಲಿ ಅಂತಹಪಂಚಾಯತಿಗಳನ್ನು ಸೂಪರ್ ಸೀಡ್ ಮಾಡಲು ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣಖಾತೆ ರಾಜ್ಯ ಸಚಿವ, ಚಿತ್ರದುರ್ಗ ಸಂಸದ ಹಾಗೂ ಜಿಲ್ಲಾ ದಿಶಾ ಸಮಿತಿ ಅಧ್ಯಕ್ಷ ಎ. ನಾರಾಯಣಸ್ವಾಮಿ ಅವರು ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ: ಕೆ. ವಿದ್ಯಾಕುಮಾರಿ ಅವರಿಗೆ ಸೂಚನೆ ನೀಡಿದರು.ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿಂದು ಕೇಂದ್ರ ಪುರಸ್ಕೃತಯೋಜನೆಗಳ ಸಂಬಂಧಜರುಗಿದ ದಿಶಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ಆವಾಜ಼್ …

ಬಡವರಿಗೆ ನಿವೇಶನ ಒದಗಿಸದ ಪಂಚಾಯತಿಗಳನ್ನು ಸೂಪರ್ ಸೀಡ್ ಮಾಡಲು ಸೂಚನೆ Read More »

ತುಮಕೂರು-ರಾಯದುರ್ಗ ರೈಲ್ವೆ ಯೋಜನೆ: 50 ಕೋಟಿ ರೂ. ಬಿಡುಗಡೆಗೆ ಕ್ರಮ

ತುಮಕೂರು: ಜಿಲ್ಲೆಯಲ್ಲಿ ತುಮಕೂರು-ರಾಯದುರ್ಗ ರೈಲ್ವೇ ಯೋಜನೆಗೆ ಸಂಬಂಧಿಸಿದಂತೆ ಹೊಸದಾಗಿ ಹೆಚ್ಚುವರಿಯಾಗಿ ಬೇಡಿಕೆ ಇಟ್ಟಿರುವ ೪೦೦ ಎಕರೆ ಜಮೀನಿನ ಭೂಸ್ವಾಧೀನಕ್ಕಾಗಿ ಅಗತ್ಯವಿರುವ ೫೦ ಕೋಟಿ ರೂ.ಗಳ ಅನುದಾನವನ್ನು ಇನ್ನೊಂದು ತಿಂಗಳೊಳಗೆ ಒದಗಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ, ಚಿತ್ರದುರ್ಗ ಸಂಸದ ಹಾಗೂ ಜಿಲ್ಲಾ ದಿಶಾ ಸಮಿತಿ ಅಧ್ಯಕ್ಷ ಎ. ನಾರಾಯಣಸ್ವಾಮಿ ಭರವಸೆ ನೀಡಿದರು.ಜಿಲ್ಲಾ ಪಂಚಾಯತಿಯಲ್ಲಿಂದು ಜರುಗಿದ ದಿಶಾ ಸಮಿತಿ ಸಭೆ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತುಮಕೂರು-ರಾಯದುರ್ಗ ಮಾರ್ಗದಲ್ಲಿ …

ತುಮಕೂರು-ರಾಯದುರ್ಗ ರೈಲ್ವೆ ಯೋಜನೆ: 50 ಕೋಟಿ ರೂ. ಬಿಡುಗಡೆಗೆ ಕ್ರಮ Read More »

ಮನೆಯ ಮೋಟರ್ ಸ್ಟಾರ್ಟರ್ ನ ಒಳಗೆ ಸೇರಿಕೊಂಡಿದ್ದ ಹಾವು

ತುಮಕೂರು : ತುಮಕೂರಿನ ಜಯನಗರದ ಶಿವಕುಮಾರ್ ಅವರ ಮನೆಯ ಮೋಟರ್ ಸ್ಟಾರ್ಟರ್ ನ ಒಳಗೆ ಸೇರಿಕೊಂಡಿದ್ದ ಕೇರೆ ಹಾವನ್ನು (ರ‍್ಯಾಟ್ ಸ್ನೇಕ್) ರಕ್ಷಿಸಿ ಸಮೀಪದ ಅರಣ್ಯಕ್ಕೆ ಬಿಟ್ಟಿದ್ದಾರೆ. ಸುಮಾರು 2.5 ಅಡಿ ಉದ್ದದ ಕೇರೆ ಹಾವು ಸ್ಟಾರ್ಟರ್ ನ ಒಳಗೆ ಹೋಗುವುದನ್ನ ಗಮನಿಸಿದ ಮನೆಯವರು ಕೂಡಲೇ ವನ್ಯಜೀವಿ ಜಾಗೃತಿ ಹಾಗೂ ಉರಗ ಸಂರಕ್ಷಣಾ ಸಂಸ್ಥೆಯವರಿಗೆ (ವಾರ್ಕೊ) ಕರೆ ಮಾಡಿ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ವಾರ್ಕೊ ಸಂಸ್ಥೆಯ ಉರಗ ತಜ್ಞ ಮನು ಅಗ್ನಿವಂಶಿ ಸುರಕ್ಷಿತವಾಗಿ ರಕ್ಷಿಸಿ ಅರಣ್ಯ …

ಮನೆಯ ಮೋಟರ್ ಸ್ಟಾರ್ಟರ್ ನ ಒಳಗೆ ಸೇರಿಕೊಂಡಿದ್ದ ಹಾವು Read More »

ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ತುಮಕೂರು ಅಭಿವೃದ್ಧಿಗೆ ಶ್ರಮಿಸುತ್ತನೆ

ತುಮಕೂರು, ಜನವರಿ, 26 : ಮಾನವ ಸಂಪನ್ಮೂಲ ಒಳಗೊಂಡಂತೆ, ಕೃಷಿ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ಮುಂಚೂಣಿ ಯಲ್ಲಿರುವ ತುಮಕೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ, ಶ್ರಮಿಸುವುದಾಗಿ, ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ರವರು ತಿಳಿಸಿದ್ದಾರೆ. ಜಿಲ್ಲಾ ಕೇಂದ್ರ ತುಮಕೂರು ನಗರದಲ್ಲಿ, 73ನೇ ಗಣರಜ್ಯೋತ್ಸವದಂದು, ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಸುದ್ದಿಗಾರರೊಂದಿಗೆ, ಮಾತನಾಡಿದ ಸಚಿವರು, ಜಿಲ್ಲೆಯಲ್ಲಿ ಶಾಸಕರೂ ಸೇರಿದಂತೆ, ಎಲ್ಲಾ ಜನಪ್ರತಿನಿಧಿ ಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು. ಜಿಲ್ಲೆಯು ಕೃಷಿ, ಶಿಕ್ಷಣ ಕ್ಷೇತ್ರದಲ್ಲಿ …

ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ತುಮಕೂರು ಅಭಿವೃದ್ಧಿಗೆ ಶ್ರಮಿಸುತ್ತನೆ Read More »

ರಾಜ್ಯದ ಜನರಿಗೆ ಸರ್ಕಾರದಿಂದ ತ್ರಿವಿಧ ದಾಸೋಹ ಸಮರ್ಪಣೆ

ತುಮಕೂರು, ಜನವರಿ 21: ರಾಜ್ಯದಲ್ಲಿ ಅವಶ್ಯಕತೆ ಇರುವ ಎಲ್ಲ ವರ್ಗದ ಜನರಿಗೆ ಹಾಗೂ ಬಡವರಿಗೆ ಅನ್ನ, ಅಕ್ಷರ, ಆಶ್ರಯದ ತ್ರಿವಿಧ ದಾಸೋಹವನ್ನು ಸಮರ್ಪಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ದಾಸೋಹ ದಿನಾಚರಣೆಯ ಅಂಗವಾಗಿ ಶ್ರೀ ಸಿದ್ದಗಂಗಾ ಕ್ಷೇತ್ರಕ್ಕೆ ಭೇಟಿ ನೀಡಿ ದಾಸೋಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದರು. ದಾಸೋಹ ಕರ್ನಾಟಕದ ಪರಂಪರೆ. ಅನ್ನ, ಅಕ್ಷರ, ಆಶ್ರಯ ದಾಸೋಹಕ್ಕೆ ಮಹತ್ವ ತಿಳಿಸುವ ದಿನವಾಗಿದೆ. ಅನ್ನ ದಾಸೋಹಕ್ಕಾಗಿ ಸರ್ಕಾರ 4 …

ರಾಜ್ಯದ ಜನರಿಗೆ ಸರ್ಕಾರದಿಂದ ತ್ರಿವಿಧ ದಾಸೋಹ ಸಮರ್ಪಣೆ Read More »

ನೂತನ ಆಡಳಿತ ಕಛೇರಿ ಕಟ್ಟಡದ ಉದ್ಘಾಟನೆ

ತುಮಕೂರು,ಜ,6 : ನಗರಾಭಿವೃದ್ಧಿ ಇಲಾಖೆಯ ಅಡಿಯಲ್ಲಿ ಬರುವ ತುಮಕೂರು ಮಹಾನಗರ ಪಾಲಿಕೆ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ಆಡಳಿತ ಕಛೇರಿ ಕಟ್ಟಡದ ಉದ್ಘಾಟನೆ ಹಾಗೂ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ ವತಿಯಿಂದ “ಕೊಳಗೇರಿ ಪ್ರದೇಶದ ನಿವಾಸಿಗಳ ಪುನರ್ವಸತಿ ಯೋಜನೆ” ಅಡಿಯಲ್ಲಿ ಮರಿಯಮ್ಮ ನಗರದಲ್ಲಿ ಹೊಸದಾಗಿ ನಿರ್ಮಿಸಿರುವ ವಸತಿ ಸಂಕೀರ್ಣ ಮತ್ತು ಎಂಪ್ರೆಸ್ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ಸಭಾಂಗಣ, ಪ್ರಯೋಗಾಲಯ ಹಾಗೂ ಗ್ರಂಥಾಲಯ ಕಟ್ಟಡವನ್ನು ಮಾನ್ಯ ನಗರಾಭಿವೃದ್ಧಿ ಸಚಿವರಾದ ಶ್ರೀ ಬಿ.ಎ.ಬಸವರಾಜ ಮತ್ತು ಕಾನೂನು ಮತ್ತು …

ನೂತನ ಆಡಳಿತ ಕಛೇರಿ ಕಟ್ಟಡದ ಉದ್ಘಾಟನೆ Read More »

ಬ್ಯೂಟಿ ಪಾರ್ಲರ್ ಹಾಗೂ ಟೈಲರಿಂಗ್ ತರಬೇತಿ

ತುಮಕೂರು,ಡಿ.೭: ಬೆಂಗಳೂರು ಗ್ರಾಮಾಂತರ ನೆಲಮಂಗಲ ತಾಲ್ಲೂಕು ಅರಿಶಿನಕುಂಟೆ ರುಡ್‌ಸೆಟ್ ಸಂಸ್ಥೆಯು ತುಮಕೂರು ಜಿಲ್ಲಾ ವ್ಯಾಪ್ತಿಗೆ ಒಳಪಡುವ ಗ್ರಾಮೀಣ ನಿರುದ್ಯೋಗಿ ಮಹಿಳೆಯರಿಗಾಗಿ ಉಚಿತ ವಸತಿಯುತ ೩೦ ದಿನಗಳ ಬ್ಯೂಟಿ ಪಾರ್ಲರ್ ಹಾಗೂ ಟೈಲರಿಂಗ್ ತರಬೇತಿಯನ್ನು ಇದೇ ಡಿಸೆಂಬರ್ ಮಾಹೆಯಲ್ಲಿ ಹಮ್ಮಿಕೊಂಡಿದೆ. ತರಬೇತಿ ಪಡೆಯಲು ಆಸಕ್ತ ೧೮ ರಿಂದ ೪೫ ವರ್ಷದೊಳಗಿನ ಕನ್ನಡ ಓದಲು ಬರೆಯಲು ಬಲ್ಲ ಹಾಗೂ ಬಿ.ಪಿ.ಎಲ್. ಕಾರ್ಡ್ ಹೊಂದಿರುವವರು ಡಿಸೆಂಬರ್ ೧೩ರಂದು ರುಡ್‌ಸೆಟ್ ಸಂಸ್ಥೆಯಲ್ಲಿ ನಡೆಯುವ ನೇರ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ.ವಾ.ಸಂ. 080-27728166,, …

ಬ್ಯೂಟಿ ಪಾರ್ಲರ್ ಹಾಗೂ ಟೈಲರಿಂಗ್ ತರಬೇತಿ Read More »

ವಿಧಾನ ಪರಿಷತ್ ಚುನಾವಣೆ: ಮದ್ಯ ಮಾರಾಟ ನಿಷೇಧ

ತುಮಕೂರು,ಡಿ.೭: ತುಮಕೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಡಿಸೆಂಬರ್ ೧೦ರಂದು ನಡೆಯಲಿರುವ ಕರ್ನಾಟಕ ವಿಧಾನ ಪರಿಷತ್ ಚುನಾವಣಾ ಮತದಾನವು ಮುಕ್ತ ಹಾಗೂ ನಿಸ್ಪಕ್ಷಪಾತವಾಗಿ ನಡೆಯಲು ಮತ್ತು ಚುನಾವಣಾ ಪ್ರದೇಶದ ವ್ಯಾಪ್ತಿಯಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಡಿಸೆಂಬರ್ ೮ರ ಸಂಜೆ ೪ ಗಂಟೆಯಿಂದ ಡಿಸೆಂಬರ್ ೧೦ರ ಮಧ್ಯರಾತ್ರಿ ೧೨ ಗಂಟೆಯವರೆಗೆ ಜಿಲ್ಲೆಯಾದ್ಯಂತ ಎಲ್ಲಾ ನಮೂನೆಯ ಮದ್ಯದಂಗಡಿಗಳನ್ನು ಮುಚ್ಚಿಸಿ ಮದ್ಯ ಸಾಗಾಣಿಕೆ, ಹಂಚಿಕೆ, ಶೇಖರಣೆ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಒಣದಿನವನ್ನಾಗಿ ಆಚರಿಸಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ವೈ.ಎಸ್.ಪಾಟೀಲ …

ವಿಧಾನ ಪರಿಷತ್ ಚುನಾವಣೆ: ಮದ್ಯ ಮಾರಾಟ ನಿಷೇಧ Read More »

Translate »
Scroll to Top