ತುಮಕೂರು,ಡಿ.೭: ಬೆಂಗಳೂರು ಗ್ರಾಮಾಂತರ ನೆಲಮಂಗಲ ತಾಲ್ಲೂಕು ಅರಿಶಿನಕುಂಟೆ ರುಡ್‌ಸೆಟ್ ಸಂಸ್ಥೆಯು ತುಮಕೂರು ಜಿಲ್ಲಾ ವ್ಯಾಪ್ತಿಗೆ ಒಳಪಡುವ ಗ್ರಾಮೀಣ ನಿರುದ್ಯೋಗಿ ಮಹಿಳೆಯರಿಗಾಗಿ ಉಚಿತ ವಸತಿಯುತ ೩೦ ದಿನಗಳ ಬ್ಯೂಟಿ ಪಾರ್ಲರ್ ಹಾಗೂ ಟೈಲರಿಂಗ್ ತರಬೇತಿಯನ್ನು ಇದೇ ಡಿಸೆಂಬರ್ ಮಾಹೆಯಲ್ಲಿ ಹಮ್ಮಿಕೊಂಡಿದೆ. ತರಬೇತಿ ಪಡೆಯಲು ಆಸಕ್ತ ೧೮ ರಿಂದ ೪೫ ವರ್ಷದೊಳಗಿನ ಕನ್ನಡ ಓದಲು ಬರೆಯಲು ಬಲ್ಲ ಹಾಗೂ ಬಿ.ಪಿ.ಎಲ್. ಕಾರ್ಡ್ ಹೊಂದಿರುವವರು ಡಿಸೆಂಬರ್ ೧೩ರಂದು ರುಡ್‌ಸೆಟ್ ಸಂಸ್ಥೆಯಲ್ಲಿ ನಡೆಯುವ ನೇರ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ.ವಾ.ಸಂ. 080-27728166,, ಮೊ.ಸಂ.9113880324/ 9481778047/ 8050549412/ 9241482541 ಅಥವಾ ವೆಬ್‌ಸೈಟ್ rudsetiblr. in ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.