ಇತರೆ

‘ನಾವು ಪಾಕಿಸ್ತಾನದಲ್ಲಿದ್ದೇವೆಯೇ?’; ಕಾರ್ ಅಡ್ಡ ಹಾಕಿ ಹರ್ಷಿಕಾಗೆ ಕಿರುಕುಳ; ಪೊಲೀಸರು ಸಹಾಯಕ್ಕೆ ಬಂದಿಲ್ಲ ಎಂದ ನಟಿ

ಬೆಂಗಳೂರು: ನಟಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಇತ್ತೀಚೆಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ತಮಗಾದ ಭಯಾನಕ ಅನುಭವ ಹಂಚಿಕೊಂಡಿದ್ದಾರೆ. ‘ನಮ್ಮ ಬೆಂಗಳೂರಿನಲ್ಲಿ ನಾವು ಸ್ಥಳೀಯರು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ನನಗೆ ಮೂಡಿದೆ’ ಎಂದು ಅವರು ಪೋಸ್ಟ್ ಆರಂಭಿಸಿದ್ದಾರೆ. ಅವರು ಬರೆದ ಸೋಶಿಯಲ್ ಮೀಡಿಯಾ ಪೋಸ್ಟ್ ವಿವರ ಇಲ್ಲಿದೆ.

ಗದಗ: ನಗರ ಸಭೆ ಉಪಾಧ್ಯಕ್ಷೆಯ ಪುತ್ರ ಸೇರಿ ಒಂದೇ ಕುಟುಂಬದ ನಾಲ್ವರ ಹತ್ಯೆ; ಮಲಗಿದ್ದಲ್ಲೇ ಭೀಕರ ಕೊಲೆ!

ಗದಗ: ಗದಗ- ಬೆಟಗೇರಿ ನಗರಗರಸಭೆ ಉಪಾಧ್ಯಕ್ಷೆಯ ಪುತ್ರ ಸೇರಿದಂತೆ ಮಲಗಿದಲ್ಲೇ ಒಂದೇ ಕುಟುಂಬದ ನಾಲ್ವರನ್ನು ದುಷ್ರ್ಮಿ ಗಳು ಭೀಕರವಾಗಿ ಕೊಲೆ ಮಾಡಿರುವ ಘಟನೆ ನಗರದ ದಾಸರ ಓಣಿಯಲ್ಲಿ ನಡೆದಿದೆ.

ಹುಬ್ಬಳ್ಳಿ: ಕಾಲೇಜು ಕ್ಯಾಂಪಸ್​ನಲ್ಲಿ ಕಾಂಗ್ರೆಸ್ ಕರ‍್ಪೋರೇಟರ್ ನಿರಂಜನ್ ಪುತ್ರಿಯ ಭೀಕರ ಕೊಲೆ, ಆರೋಪಿ ಫಯಾಜ್ ಬಂಧನ

ಹುಬ್ಬಳ್ಳಿ: ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಓದುತ್ತಿದ್ದ ೨೪ರ ಹರೆಯದ ಯುವತಿಯೊಬ್ಬಳನ್ನು ಕಾಲೇಜು ಕ್ಯಾಂಪಸ್ನಲ್ಲಿ ಇಂದು ಭೀಕರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.
ಯುವಕನರ್ವ ಕಾಲೇಜಿನಿಂದ ಯುವತಿ ಹೊರಬರುವುದಕ್ಕೆ ಕಾಯುತ್ತಿದ್ದು ಆಕೆಯ ಮೇಲೆ ಅನೇಕ ಬಾರಿ ಚಾಕುವಿನಿಂದ ಇರಿದಿದ್ದಾನೆ. ಸಂತ್ರಸ್ತೆ ನೇಹಾ ಹಿರೇಮಠ ಹುಬ್ಬಳ್ಳಿಯ ಕಾಂಗ್ರೆಸ್ ಕರ್ಪೊರರೇಟರ್ ಪುತ್ರಿ ನಿರಂಜನ ಹಿರೇಮಠ ಪುತ್ರಿ ಎಂದು ತಿಳಿದುಬಂದಿದೆ.

ಕೋಮು ರಾಜಕಾರಣ ನಮ್ಮದಲ್ಲ  :   ಧ್ವನಿ ಎತ್ತಿದ  ಬ್ರಾಹ್ಮಣ ಸಮುದಾಯ 

ಮಂಗಳೂರು : ಸಮಾನ ಮನಸ್ಕ ಬ್ರಾಹ್ಮಣ ವೇದಿಕೆ ಹೆಸರಿನಲ್ಲಿ ದ.ಕ ಜಿಲ್ಲೆಯ ಸುಮಾರು ನೂರು ಜನ ಬ್ರಾಹ್ಮಣ ಮುಖಂಡರು ಮಂಗಳೂರು ನಗರದಲ್ಲಿ ಸಭೆ ಸೇರಿ, ಧಾರ್ಮಿಕ ಅಸಹಿಷ್ಣುತೆ , ಕೋಮುವಾದ, ಪ್ರಜಾಪ್ರಭುತ್ವ ಆಶಯಗಳಿಗೆ ಧಕ್ಕೆ ತರುವ ವಿಚಾರದ ವಿರುದ್ಧ ಧ್ವನಿಯೆತ್ತಿದ್ದಾರೆ. ಕರಾವಳಿಯಲ್ಲಿ ಬ್ರಾಹ್ಮಣ ಸಮುದಾಯದ ಸಂಖ್ಯೆ ಕಡಿಮೆ ಇದ್ದರೂ ಇತ್ತೀಚಿನ ವರ್ಷಗಳಿಂದ ಬಿಜೆಪಿ ಬ್ರಾಹ್ಮಣ ನಾಯಕತ್ವಕ್ಕೆ ಮಣೆ ಹಾಕಿದ್ದು ಹೆಚ್ಚು . ಇದು ಬ್ರಾಹ್ಮಣ ಸಮುದಾಯ ಬಿಜೆಪಿಯತ್ತ ವಾಲಲು ಮುಖ್ಯ ಕಾರಣವಾಗಿತ್ತು.

ಅದ್ಧೂರಿಯಾಗಿ ಜರುಗಿದ ಐತಿಹಾಸಿಕ ಶ್ರೀಲಕ್ಷ್ಮೀನಾರಾಯಣ ಸ್ವಾಮಿ ಮತ್ತು ಶ್ರೀಆಂಜಿನೇಯ ಸ್ವಾಮಿ ಜೋಡಿ ರಥೋತ್ಸವ

ಹೊಸಪೇಟೆ: ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ಜೋಡಿ ರಥೋತ್ಸವ ನಡೆದಿದೆ ಕಳೆದ ೬೦೦ ವರ್ಷಗಳಿಂದ ನಡೆಯುತ್ತಿರುವ ಜೋಡಿ ರಥೋತ್ಸವ ತುಂಗಭದ್ರಾ ಜಲಾಶಯ ನಿರ್ಮಾಣವಾದ ಬಳಿಕ ನಾಣಿಕೇರಿಯಿಂದ ಸ್ಥಳ ಬದಲಾಯಿತು. ಜೋಡಿ ರಥಗಳು ರಾಮನವಮಿ ದಿನದಂದು ಅದ್ಧೂರಿಯಾಗಿ ಆಚರಿಸು ಮರಿಯಮ್ಮನಹಳ್ಳಿಯ ಸುತ್ತ-ಮುತ್ತ ಜನತೆಮರಿಯಮ್ಮನಹಳ್ಳಿ ಭಾಗದಲ್ಲಿಯೇ ಅತಿ ದೊಡ್ಡ ಜೋಡಿ ರಥೋತ್ಸವವು ಕಳೆದ ಒಂಬತ್ತು ದಿನಗಳಿಂದ ವಿವಿಧ ಧಾರ್ಮಿಕ ಪೂಜೆ ಪುರಸ್ಕಾರಗಳು ನಡೆಯುತ್ತವೆ.

ಹೊಸಪೇಟೆಯ ಉತ್ತರಾಧಿ ಮಠಕ್ಕೆ ದಲಿತರ ಪ್ರವೇಶ : ಸ್ವಾಗತ ಮಾಡಿದ ಅರ್ಚಕರು

ಹೊಸಪೇಟೆ: ಅಂಬೇಡ್ಕರ್ ಜಯಂತಿ ನಿಮಿತ್ತ ಉತ್ತರಾಧಿ ಮಠಕ್ಕೆ ದಲಿತ ಹಕ್ಕುಗಳ ಹೋರಾಟ ಸಮಿತಿಯಿಂದ ಪ್ರವೇಶ
ಎಲ್ಲರಿಗೂ ಸಮಾನ ಅವಕಾಶ ನೀಡಲಿ, ಎಲ್ಲರೂ ಮಠಕ್ಕೆ ಹೋಗಲಿ .ಉತ್ತರಾಧಿ ಮಠಕ್ಕೆ ಪ್ರವೇಶ ಮಾಡಿದ ದಲಿತರನ್ನು ಅರ್ಚಕರು, ಮಠದವರು ಸ್ವಾಗತಿಸಿದರು.

ಮಿಸ್ಟರ್ ಗೇ ವರ್ಲ್ಡ್ ಇಂಡಿಯಾ ಕೀರಿಟ ಧರಿಸಿದ ಪ್ರತೀಕ್ ಜಂಗಡ

ಬೆಂಗಳೂರು: ಬೆಂಗಳೂರಿನ ದಿ ಲಲಿತ್ ಅಶೋಕ್ ಹೋಟೆಲ್ ನಲ್ಲಿ ನಡೆದ ಬೆರಗುಗೊಳಿಸುವ ಸೌಂದರ್ಯ ಸ್ಪರ್ಧೆಯಲ್ಲಿ ಪ್ರತೀಕ್ ಜಂಗಡ ಅವರು ಮಿಸ್ಟರ್ ಗೇ ವರ್ಲ್ಡ್ ಇಂಡಿಯಾ 2024 ಕಿರೀಟವನ್ನು ಅಲಂಕರಿಸಿದರು. ಗೇ ಸಮುದಾಯಕ್ಕಾಗಿಯೇ ಆಯೋಜಿಸಲಾದ ಅತ್ಯಂತ ಗಮನ ಸೆಳೆಯುವ, ವರ್ಣರಂಜಿತ ಸ್ಪರ್ಧೆಯಲ್ಲಿ ಪ್ರತೀಕ್ ಜಂಗಡ ಇತಿಹಾಸ ಬರೆದಿದ್ದಾರೆ.
ಈ ಪ್ರತಿಷ್ಠಿತ ಪ್ರಶಸ್ತಿಯು ಜಂಗಡ ಅವರ ವೈಯಕ್ತಿಕ ಸಾಧನೆ ಮಾತ್ರವಲ್ಲದೇ ಗೇ ಸಮುದಾಯದಲ್ಲಿ ಮಹತ್ವದ ಹೆಜ್ಜೆಯನ್ನೂ ಸೂಚಿಸುತ್ತದೆ. ಭಾರತೀಯ ಸಮಾಜದಲ್ಲಿ ಸ್ವೀಕಾರ ಮತ್ತು ವೈವಿಧ್ಯತೆಯನ್ನು ಉತ್ತೇಜಿಸುವಲ್ಲಿ ಈ ಸ್ಪರ್ಧೆ ಮಹತ್ವ ಪಡೆದುಕೊಂಡಿದೆ.

ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ

ಬಳ್ಳಾರಿ,ಏ.14: ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿಶೇಷ ಘಟಕ ಅಡಿಯಲ್ಲಿ ಸಂವಿಧಾನದ ಹರಿಕಾರ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 133 ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು.

ಗುಂಪುಗಳ ಮಧ್ಯೆ ಮಾರಾ ಮಾರಿ ನಾಲ್ವರಿಗೆ ಗಂಭೀರ ಗಾಯ

ರಾಯಚೂರು : ನ್ಯಾಯ ಪಂಚಾಯತಿ ವಿಚಾರಕ್ಕೆ ಎರಡು ಗುಂಪುಗಳ ಮಧ್ಯ ಘರ್ಷಣೆ ಉಂಟಾಗಿ ಕಬ್ಬಿಣದ ರಾಡ್ ಹಾಗೂ ಕಟ್ಟಿಗೆಗಳಿಂದ ಹೊಡೆದಾಡಿಕೊಂಡಿದ್ದು, ಮಾರಣಾಂತಿಕ ಹಲ್ಲೆಯಿಂದಾಗಿ ನಾಲ್ಕು ಜನರಿಗೆ ಗಂಭೀರ ಗಾಯಗಳಾಗಿರುವ ಘಟನೆ ನಗರದ ಹೊರ ವಲಯದ ಅಸ್ಕಿಹಾಳ ಗ್ರಾಮದಲ್ಲಿ ನಡೆದಿದೆ.

ಸಾಮಾಜಿಕ ಜಾಲತಾಣದಲ್ಲಿ ಪೊಸ್ಟ್: ಆರೋಪಿ ವಿದೇಶಕ್ಕೆ ಪರಾರಿ

ಬೆಂಗಳೂರು: ಕಾಲ್ ಗರ್ಲ್ ಗಾಗಿ ಕರೆ ಮಾಡಿ ಎಂದು ಪತ್ನಿಯ ಫೋಟೊ ಮತ್ತು ಮೊಬೈಲ್ ನಂಬರನ್ನು ಸಾಮಾಜಿಕ ಜಾಲತಾಣದಲ್ಲಿ ಪೊಸ್ಟ್ ಮಾಡಿರುವ ಆರೋಪಿ ವಿದೇಶಕ್ಕೆ ಪರಾರಿಯಾಗಿರುವುದು ನಂದಿನಿ ಲೇಔಟ್ ಪೊಲೀಸರ ತನಿಖೆಯಿಂದ ಗೊತ್ತಾಗಿದೆ. 40 ವರ್ಷದ ವ್ಯಕ್ತಿ ಹಾಗೂ 37 ವರ್ಷದ ಮಹಿಳೆ 2019ರಲ್ಲಿ ಪ್ರೀತಿಸಿ ಮದುವೆಯಾಗಿದ್ದಾರೆ. ತದನಂತರ ಇವರಿಬ್ಬರ ನಡುವೆ ಮನಸ್ತಾಪವುಂಟಾಗಿ, ಜಗಳವಾಗಿದ್ದು, ಪತಿಯಿಂದ ಮಹಿಳೆ ಪ್ರತ್ಯೇಕವಾಗಿ ವಾಸವಾಗಿದ್ದಾರೆ.

Translate »
Scroll to Top