ಅಂತರರಾಷ್ಟ್ರೀಯ

ಮದುವೆಯಿಂದ ಹಿಂದಿರುಗುತ್ತಿದ್ದಾಗ ದೋಣಿ ಅವಘಡ: 103 ಮಂದಿ ಸಾವು

ನೈಜೀರಿಯಾ: ಮದುವೆಯಿಂದ ಹಿಂದಿರುಗುತ್ತಿದ್ದಾಗ ದೋಣಿ ಮಗುಚಿ, ಮಕ್ಕಳು ಸೇರಿದಂತೆ ಕನಿಷ್ಠ 103 ಜನರು ಸಾವನ್ನಪ್ಪಿದ ಘಟನೆ ಎಂದು ಉತ್ತರ ನೈಜೀರಿಯಾದಲ್ಲಿ ನಡೆದಿದೆ.

ಸ್ವರಾಜ್ ಸಂಸ್ಥೆಯ “ಸ್ವರಾಜ್ ಟಾರ್ಗೆಟ್” ಟ್ರ್ಯಾಕ್ಟರ್ ಬಿಡುಗಡೆ

ಮುಂಬೈ, : ದೇಶದ ಕೃಷಿ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡುತ್ತಿರುವ ಸ್ವರಾಜ್ ಸಂಸ್ಥೆ ಇದೀಗ ಅತ್ಯಾಧುನಿಕ ತಂತ್ರಜ್ಞಾನದ, ಸುಗಮ ಮತ್ತು ಆರಾಮದಾಯಕ ಚಾಲನೆ, ವಿಶ್ವಾಸಾರ್ಹತೆಯೊಂದಿಗೆ ದೀರ್ಘಕಾಲ ಬಾಳಿಕೆ ಬರುವ, ಹಗುರ ಮತ್ತು ಹೆಚ್ಚು ಶಕ್ತಿಶಾಲಿಯಾದ “ಸ್ವರಾಜ್ ಟಾರ್ಗೆಟ್” ಟ್ರ್ಯಾಕ್ಟರ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಗ್ರಾಮೀಣ ಕೃಷಿ ಕ್ಷೇತ್ರದ ಅಗತ್ಯತೆಗಳನ್ನು ಮನಗಂಡು ಹೊಸ ತಲೆಮಾರಿನ ಟ್ರ್ಯಾಕ್ಟರ್ ಅನ್ನು ಸ್ವರಾಜ್ ಸಂಸ್ಥೆ ಕೃಷಿ ವಲಯಕ್ಕೆ ನೀಡಿದೆ.

ಬೆಂಗಳೂರಿನಲ್ಲಿ ಆಸ್ಟ್ರೇಲಿಯನ್‌ ಕಾನ್ಸುಲೇಟ್‌ ಕಚೇರಿ ಶೀಘ್ರ ಪ್ರಾರಂಭ

ಬೆಂಗಳೂರು: ಭಾರತದಲ್ಲಿ ಆಸ್ಟ್ರೇಲಿಯಾದ ಕಾನ್ಸಲ್‌ ಜನರಲ್‌ ಬ್ಯಾರಿ ಓʼ ಫ್ಯಾರೆಲ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಾತುಕತೆ ನಡೆಸಿದರು.

ಬೆಂಗಾವಲು ಇಲ್ಲ, ಶಿಷ್ಟಾಚಾರಗಳಿಲ್ಲ, ರಸ್ತೆ ತಡೆ ಇಲ್ಲ

ಯುಎಇ ಅಧ್ಯಕ್ಷರ ‘ನಡೆ’ಯನ್ನು ಕೊಂಡಾಡಿದ ನೆಟ್ಟಿಗರು..! ಅಬುಧಾಬಿ: ಯುಎಇ ಅಧ್ಯಕ್ಷರು ಬೆಂಗಾವಲು ಇಲ್ಲದೆ ರಸ್ತೆಯಲ್ಲಿ ಸಾಮಾನ್ಯ ವ್ಯಕ್ತಿಯಂತೆ ನಡೆದುಕೊಂಡು ಹೋಗುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸದಾ ಜನರೊಂದಿಗೆ ನಿಕಟ ಸಂಪರ್ಕದಲ್ಲಿರುವ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಯಾವುದೇ ಭದ್ರತಾ ಪಡೆಗಳು ಇಲ್ಲದೆ ದೇಶದ ಅನೇಕ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಅಂಥದ್ದೊಂದು ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಹಸನ್ ಸಜ್ವಾನಿ ಎಂಬ ಟ್ವಿಟ್ಟರ್ ಬಳಕೆದಾರರೊಬ್ಬರು ಯುಎಇ ಅಧ್ಯಕ್ಷರು ರಸ್ತೆಬದಿಯಲ್ಲಿ …

ಬೆಂಗಾವಲು ಇಲ್ಲ, ಶಿಷ್ಟಾಚಾರಗಳಿಲ್ಲ, ರಸ್ತೆ ತಡೆ ಇಲ್ಲ Read More »

ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಸಿಎಂ ಭಾಗಿ

ದಾವೋಸ್ ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಎ ಬಿ ಇನ್ ಬೇವ್ ಸಂಸ್ಥೆಯ ನಿಯಂತ್ರಣ ಮತ್ತು ಸಾರ್ವಜನಿಕ ನೀತಿ ಜಾಗತಿಕ ಉಪಾಧ್ಯಕ್ಷ ಆಂಡ್ರೆಸ್ ಪೆನಾತೆ ಅವರೊಂದಿಗೆ ಕರ್ನಾಟಕದಲ್ಲಿ ಹೂಡಿಕೆಗೆ ಸಂಬಂಧಿಸಿದಂತೆ ಚರ್ಚಿಸಿದರು. ರಾಜ್ಯ ಸರ್ಕಾರ ಉದ್ಯಮ ಸ್ಥಾಪನೆಗೆ ಸಂಬಂಧಿಸಿದಂತೆ ನೀಡುತ್ತಿರುವ ವಿಶೇಷ ಸವಲತ್ತುಗಳು ಹಾಗೂ ರಿಯಾಯಿತಿಗಳ ಬಗ್ಗೆ ವಿವರಿಸಿದರು.

ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಜತೆ ಲಂಡನ್ ನಲ್ಲಿ ಮಾತುಕತೆ

ಲಂಡನ್: ಕರ್ನಾಟಕದ ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಓದುತ್ತಿರುವ ಆಯ್ದ 1,000 ವಿದ್ಯಾರ್ಥಿಗಳಿಗೆ ಡೇಟಾ ಸಾಕ್ಷರತೆಯನ್ನು ಒದಗಿಸಲು ಮತ್ತು ಶಾಲಾ ವಿದ್ಯಾರ್ಥಿಗಳ ಮಟ್ಟದಲ್ಲಿ ಸಂಪೂರ್ಣವಾಗಿ ಈ ಕಾರ್ಯಕ್ರಮವನ್ನು ವಿಸ್ತರಿಸಲು ಇಲ್ಲಿನ ಅನಲಿಟಿಕ್ಸ್ ಇನ್ಸ್ಟಿಟ್ಯೂಟ್ (ಐಒಎ) ತೀವ್ರ ಆಸಕ್ತಿ ವ್ಯಕ್ತಪಡಿಸಿದೆ.ಇಲ್ಲಿ ನಡೆಯುತ್ತಿರುವ ವರ್ಲ್ಡ್ ಎಜುಕೆಷನ್ ಫೋರಂ ಸಮಾವೇಶದಲ್ಲಿ ಭಾಗವಹಿಸಲು ಬಂದಿರುವ ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣಅವರನ್ನು ಭೇಟಿ ಆ ಸಂಸ್ಥೆಯ ಉನ್ನತಾಧಿಕಾರಿಗಳ ನಿಯೋಗ ಈ ವಿಚಾರವನ್ನು ಹಂಚಿಕೊಂಡಿದೆ.ಸಚಿವರೊಂದಿಗೆ ಮಾತುಕತೆ ನಡೆಸಿದ ಅನಲಿಟಿಕ್ಸ್ ಐಒಎ ಪ್ರತಿನಿಧಿ ಡಾ.ಕ್ಲೇರ್ ವಾಲ್ಶ್, …

ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಜತೆ ಲಂಡನ್ ನಲ್ಲಿ ಮಾತುಕತೆ Read More »

ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಯಾಗಿಲ್ಲ:ಮುಖ್ಯ ಮಂತ್ರಿ ಬೊಮ್ಮಾಯಿ

ನವದೆಹಲಿ: ಸಂಪುಟ ವಿಸ್ತರಣೆ ಬಗ್ಗೆ ಪಕ್ಷದ ವರಿಷ್ಠರ ಜತೆ ಚರ್ಚೆಯಾಗಿಲ್ಲ. ಸುಪ್ರೀಂ ಕೋರ್ಟ್ ಬಿಬಿಎಂಪಿ ಹಾಗೂ ಇತರೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಸೂಚಿಸಿರುವ ಹಿನ್ನೆಲೆಯಲ್ಲಿ ಅದರ ಬಗ್ಗೆ ಚರ್ಚೆ ಮಾಡಲಾಗಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಅವರು ಇಂದು ನವದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.ಅಮಿತ್ ಶಾ ಅವರ ಸೂಚನೆಯಂತೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರೊಂದಿಗೆ ಮಾತನಾಡಿ ಕರ್ನಾಟಕ ವಿಧಾನ ಪರಿಷತ್ ಹಾಗೂ ರಾಜ್ಯ ಸಭಾ ಚುನಾವಣೆಗೆ ಕಳುಹಿಸಲಾಗಿರುವ ಪಟ್ಟಿಯ ಬಗ್ಗೆ ವಿವರಗಳನ್ನು ನೀಡಲಾಗಿದೆ. ನಾಲ್ಕು …

ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಯಾಗಿಲ್ಲ:ಮುಖ್ಯ ಮಂತ್ರಿ ಬೊಮ್ಮಾಯಿ Read More »

ಇಂಗ್ಲೆಂಡಿನ ದಂಡಿ ವಿ.ವಿ.ಗೆ ಸಚಿವ ಅಶ್ವತ್ಥನಾರಾಯಣ ಭೇಟಿ

ದಂಡಿ (ಸ್ಕಾಟ್ಲೆಂಡ್): ಜೀವವಿಜ್ಞಾನ ಕ್ಷೇತ್ರದ ಅಧ್ಯಯನ ಮತ್ತು ಸಂಶೋಧನೆಯಲ್ಲಿ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಇಲ್ಲಿನ ದಂಡೀ ವಿಶ್ವವಿದ್ಯಾಲಯದ ಜೀವವಿಜ್ಞಾನ ವಿಭಾಗ ಮತ್ತು ಅತ್ಯಾಧುನಿಕ ಪ್ರಯೋಗಾಲಯಗಳಿಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಶನಿವಾರ ಭೇಟಿ ನೀಡಿ, ಸಮಗ್ರವಾಗಿ ವೀಕ್ಷಿಸಿದರು.ಈ ಸಂದರ್ಭದಲ್ಲಿ ಸಚಿವರೊಂದಿಗೆ ಮಾತನಾಡಿದ ವಿ.ವಿ.ದ ಉನ್ನತಾಧಿಕಾರಿಗಳ ನಿಯೋಗವು, `ನಮ್ಮ ತಂಡವು ಬರುವ ಸೆಪ್ಟೆಂಬರಿನಲ್ಲಿ ಭಾರತಕ್ಕೆ ಭೇಟಿ ನೀಡಲಿದೆ. ಕರ್ನಾಟಕ ಸರಕಾರವು ಆಸಕ್ತಿ ವಹಿಸಿದರೆ ಜೀವವಿಜ್ಞಾನ ಅಧ್ಯಯನಕ್ಕೆ ಸಹಭಾಗಿತ್ವ ಹೊಂದಲು ಒಡಂಬಡಿಕೆಗೆ ಸಿದ್ಧರಿದ್ದೇವೆ. ಇಂತಹ ಕೇಂದ್ರಗಳನ್ನು …

ಇಂಗ್ಲೆಂಡಿನ ದಂಡಿ ವಿ.ವಿ.ಗೆ ಸಚಿವ ಅಶ್ವತ್ಥನಾರಾಯಣ ಭೇಟಿ Read More »

ಕೇದಾರನಾಥ ಶಿವ ದೇಗುಲಕ್ಕೆ ಡಿ. ಕೆ. ಶಿವಕುಮಾರ್ ಹಾಗೂ ಅವರ ಪತ್ನಿ ಉಷಾ ಭೇಟಿ

ಉತ್ತರಾಖಂಡ : ಉತ್ತರಾಖಂಡದ ಜಗತ್ಪ್ರಸಿದ್ಧ ಕೇದಾರನಾಥ ಶಿವ ದೇಗುಲಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರು ಪತ್ನಿ ಉಷಾ ಅವರ ಜತೆ ಸೋಮವಾರ ಭೇಟಿ ನೀಡಿ ಪೂಜೆ ಸಲ್ಲಿಸಿದರು.

Translate »
Scroll to Top