ಸ್ವರಾಜ್ ಸಂಸ್ಥೆಯ “ಸ್ವರಾಜ್ ಟಾರ್ಗೆಟ್” ಟ್ರ್ಯಾಕ್ಟರ್ ಬಿಡುಗಡೆ

ಅತ್ಯಾಧುನಿಕ ತಂತ್ರಜ್ಞಾನದ, ಸುಗಮ ಮತ್ತು ಆರಾಮದಾಯಕ ಚಾಲನೆಯ ರೈತ ರಥ

  • ನಂಜುಂಡಪ್ಪ.ವಿ.

 ಮುಂಬೈ: ದೇಶದ ಕೃಷಿ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡುತ್ತಿರುವ ಸ್ವರಾಜ್ ಸಂಸ್ಥೆ ಇದೀಗ ಅತ್ಯಾಧುನಿಕ ತಂತ್ರಜ್ಞಾನದ, ಸುಗಮ ಮತ್ತು ಆರಾಮದಾಯಕ ಚಾಲನೆ, ವಿಶ್ವಾಸಾರ್ಹತೆಯೊಂದಿಗೆ ದೀರ್ಘಕಾಲ ಬಾಳಿಕೆ ಬರುವ, ಹಗುರ ಮತ್ತು ಹೆಚ್ಚು ಶಕ್ತಿಶಾಲಿಯಾದ “ಸ್ವರಾಜ್ ಟಾರ್ಗೆಟ್” ಟ್ರ್ಯಾಕ್ಟರ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಗ್ರಾಮೀಣ ಕೃಷಿ ಕ್ಷೇತ್ರದ ಅಗತ್ಯತೆಗಳನ್ನು ಮನಗಂಡು ಹೊಸ ತಲೆಮಾರಿನ ಟ್ರ್ಯಾಕ್ಟರ್ ಅನ್ನು ಸ್ವರಾಜ್ ಸಂಸ್ಥೆ ಕೃಷಿ ವಲಯಕ್ಕೆ ನೀಡಿದೆ.

 

ಮುಂಬೈನ ಸೊಫಿಟಾಲ್ ಹೋಟೆಲ್ ನಲ್ಲಿ ಸ್ವರಾಜ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರೀಶ್ ಚವಾಣ್, ಕೃಷಿ ಪರಿಕರಗಳ  ಮಾರುಕಟ್ಟೆ ವಿಭಾಗದ ಅಧ್ಯಕ್ಷ ಹೇಮಂತ್ ಸಿಕ್ಕಾ, ಮಾರಾಟ ವಿಭಾಗದ ಮುಖ್ಯಸ್ಥ ರಾಜೀವ್ ರಿಲೇನ್, ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ರಾಜೇಶ್ ಜೆಜುರಿಕರ್  ಅವರು “ಸ್ವರಾಜ್ ಟಾರ್ಗೆಟ್” ಟ್ರ್ಯಾಕ್ಟರ್ ಗಳನ್ನು ಬಿಡುಗಡೆ ಮಾಡಿದರು.

 

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹರೀಶ್ ಚವಾಣ್, ಸ್ವರಾಜ್ ಟಾರ್ಗೆಟ್ 5.35 ಲಕ್ಷ ರೂಪಾಯಿಗೆ ದೊರೆಯಲಿದ್ದು, ಅತಿ ಹೆಚ್ಚು ಪ್ಯೂಚರ್ ಗಳನ್ನು ಇದು ಒಳಗೊಂಡಿದೆ. ಈ ಟ್ರ್ಯಾಕ್ಟರ್ ಗೆ ಆರು ವರ್ಷಗಳ ಕಾಲ ವಾರೆಂಟಿ ಇರಲಿದೆ. ಕೈಗೆಟುಕುವ ದರದಲ್ಲಿ ದೊರೆಯುವ ಇದು 29 ಹೆಚ್.ಪಿ ಶಕ್ತಿ ಜೊತೆಗೆ 980 ಕೆ.ಜಿ. ಭಾರ ಎತ್ತುವ ಸಾಮರ್ಥ್ಯ ಹೊಂದಿದೆ. ಇದು ಇಂಧನ ಮಿತವ್ಯಯಕಾರಿಯಾಗಿದೆ. ಸ್ವರಾಜ್ ಟಾರ್ಗೆಟ್, ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳ ರೈತರು ಮತ್ತು ಕೃಷಿ ಕ್ಷೇತ್ರವನ್ನು ಗುರಿಯಾಗಿರಿಸಿಕೊಂಡು ಒಟ್ಟಾರೆ ದೇಶದ ಕೃಷಿ ಕ್ಷೇತ್ರದ ತಂತ್ರಜ್ಞಾನವನ್ನು ಗಮನದಲ್ಲಿಟ್ಟುಕೊಂಡು ಈ ಟ್ರ್ಯಾಕ್ಟರ್ ಅಭಿವೃದ್ಧಿಪಡಿಸಲಾಗಿದೆ ಎಂದರು.

 

 

ರಾಜೀವ್ ರಿಲೇನ್ ಮಾತನಾಡಿ, ಮಹೇಂದ್ರ ಸಂಸ್ಥೆಯ ನಂತರ ಎರಡನೇ ಅತಿ ದೊಡ್ಡ ಸಂಸ್ಥೆಯಾದ ಸ್ವರಾಜ್ ಅಭಿವೃದ್ಧಿಪಡಿಸಿರುವ ನೂತನ ಟ್ರ್ಯಾಕ್ಟರ್, ತಂತ್ರಜ್ಞಾನದ ಜೊತೆಗೆ ಸಾಮರ್ಥ್ಯವೂ ಅತ್ಯುತ್ತಮ ರೀತಿಯಲ್ಲಿ ಮಿಳಿತಗೊಂಡಿದೆ. ಕೃಷಿ ಚಟುವಟಿಕೆಯಲ್ಲಿ ರೈತರ ನಿರೀಕ್ಷೆಗಳನ್ನು ಇದು ಸಾಕಾರಗೊಳಿಸಲಿದ್ದು, ಹೆಚ್ಚಿನ ಇಳುವರಿ ದೊರೆಯಲು ಸಹಕಾರಿಯಾಗಲಿದೆ. ರೈತರ ಆದಾಯ ಹೆಚ್ಚಳದ ಜೊತೆಗೆ ಜಿಡಿಪಿ ಬೆಳವಣಿಗೆಗೆ ಹೆಚ್ಚಿನ ಕೊಡುಗೆ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹೇಮಂತ್ ಸಿಕ್ಕಾ ಮಾತನಾಡಿ, ಸ್ವರಾಜ್ ಟಾರ್ಗೆಟ್ ಕೃಷಿ ಜೊತೆಗೆ  ತೋಟಗಾರಿಕಾ ಕ್ಷೇತ್ರದಲ್ಲೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ. ಕೃಷಿ ವಲಯಕ್ಕೆ ತೋಟಗಾರಿಕಾ ಕ್ಷೇತ್ರ ಶೇ 30 ರಷ್ಟು ಕೊಡುಗೆ ನೀಡುತ್ತಿದ್ದು, ರೈತರಿಗೆ ಎಲ್ಲಾ ರೀತಿಯಲ್ಲೂ ಇದು ನೆರವಾಗಲಿದೆ ಎಂದು ಹೇಳಿದರು.

 

 

ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ವಲಯದಲ್ಲಿ ಎಲೆಕ್ಟ್ರಾನಿಕ್ ವಾಹನಗಳು ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಕೃಷಿ ಕ್ಷೇತ್ರದಲ್ಲಿ ಸಧ್ಯಕ್ಕೆ ಎಲೆಕ್ಟ್ರಾನಿಕ್ ಟ್ರ್ಯಾಕ್ಟರ್ ಉತ್ಪಾದನೆ ಮಾಡುತ್ತಿಲ್ಲ. ಕೃಷಿ ಕ್ಷೇತ್ರಕ್ಕೆ ಎಲೆಕ್ಟ್ರಾನಿಕ್ ವಾಹನಗಳನ್ನು ಪರಿಚಯಿಸಲು ಇನ್ನೂ ಸಾಕಷ್ಟು ಸಮಯ ಬೇಕಾಗುತ್ತದೆ ಎಂದರು.

ಮಾಜಿ ಕ್ರಿಕೆಟಿಗ ಹಾಗೂ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಮಹೇಂದ್ರ ಸಿಂಗ್ ಧೋನಿ ಇದೀಗ ಕೃಷಿಯತ್ತ ಆಸಕ್ತರಾಗಿದ್ದಾರೆ. ಜೊತೆಗೆ ಮಹೇಂದ್ರ ಸಂಸ್ಥೆಯ ಹೆಮ್ಮೆಯ ಗ್ರಾಹಕರಾಗಿದ್ದು, ಮುಂಬರುವ ದಿನಗಳಲ್ಲಿ ಸಂಪೂರ್ಣವಾಗಿ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಆಸಕ್ತರಾಗಿದ್ದಾರೆ.

Facebook
Twitter
LinkedIn
WhatsApp

Leave a Comment

Your email address will not be published. Required fields are marked *

Translate »
Scroll to Top