ಕುಷ್ಟಗಿ,ಜ,8 :- ಕೊರೋನಾ ವೈರಸ್ ಹಾಗೂ ಓಮೇಕ್ರಾನ್ ಹೆಚ್ಚಾದ ಹಿನ್ನಲೆ ಕರ್ನಾಟಕ ಸರಕಾರ ವಿಕೆಂಡ್ ಕರ್ಪ್ಯೂ ಜಾರಿಗೆ ಮಾಡಿದ ಹಿನ್ನಲೆ ಕುಷ್ಟಗಿ ಪಟ್ಟಣದಲ್ಲಿ ಅಗತ್ಯ ವಸ್ತುಗಳನ್ನು ಹೊರತು ಪಡಿಸಿ ಉಳಿದ ಎಲ್ಲಾ ಅಂಗಡಿ ಮುಗ್ಗಟ್ಟುಗಳು ಸಂಪೂರ್ಣವಾಗಿ ಬಂದ್ ಮಾಡಲಾಯಿತು.

ನಿನ್ನೆ ರಾತ್ರಿ 10 ಗಂಟೆಗೆ ಬಂದ್ ಆದ ಅಂಗಡಿಗಳು ಶನಿವಾರ ದಿಂದ ಸರಕಾರ ವಿಕೆಂಡ್ ಕರ್ಪ್ಯೂ ಜಾರಿಗೆ ಮಾಡಿದ ಹಿನ್ನಲೆ ಕುಷ್ಟಗಿ ಸಿ.ಪಿ.ಐ ನಿಂಗಪ್ಪ ರುದ್ರಕೊಳ್ಳ, ಪಿ.ಎಸ್.ಐ ತಿಮ್ಮಣ್ಣ ನಾಯಕ, ಕುಷ್ಟಗಿ ಪಟ್ಟಣದ ಎಲ್ಲಾ ಕಡೆ ಗಸ್ತು ತಿರಿಗು ಬೀಗಿ ಬದೋಬಸ್ತ ಹೊದಗಿಸಿದರು. ಅನಾವಶಕವಾಗಿ ಹೊಡಾಡುವರನ್ನು ತಡೆದು ವಿಕೆಂಡ್ ಕಪ್ಯೂ೯ ಮುಗಿಯುವವರಿಗೂ ಹೊರಗಡೆ ಬರದಂತೆ ತಿಳಿಸಿದರು. ಅದೇ ರೀತಿಯಾಗಿ ತಾಲೂಕಿನ ಹನಮಸಾರ, ತವರಗೇರಾ ಸೇರಿದಂತೆ ನಾನಾಗಡೆ ಬಂದ್‌ಗೆ ಉತ್ತಮ ಬೆಂಬಲ ವ್ಯಕ್ತವಾಯಿತು.
