ಬೊಮ್ಮಾಯಿ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ತಂತ್ರ


ಬೆಂಗಳೂರು ; ಪತನದ ಭೀತಿ ಇದ್ದರೂ ರಾಜ್ಯ ಸಚಿವ ಸಂಪುಟ ವಿಸ್ತರಣೆ ಇಲ್ಲವೇ ಪುನರ್ರಚನೆಗೆ ಅನುಮತಿ ನೀಡುವಂತೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರನ್ನು ಕೋರಿಕೊಂಡಿದ್ದು,ಅವರ ಕೋರಿಕೆಗೆ ಅಮಿತ್ ಶಾ ಪ್ರಧಾನಿಯವರತ್ತ ಬೆರಳು ತೋರಿಸಿದ ಸಂಗತಿ ಬೆಳಕಿಗೆ ಬಂದಿ ಉನ್ನತ ಮೂಲಗಳು ಈ ವಿಷಯವನ್ನು ತಿಳಿಸಿದ್ದು,ರಾಜ್ಯದ ಬೆಳವಣಿಗೆಗಳ ನಾಡಿ ಮಿಡಿತ ಅರಿಯಲು ಬಂದಿದ್ದ ಅಮಿತ್ ಶಾ ಅವರು ಪಕ್ಷದ ನಾಯಕರೊಂದಿಗೆ ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ದಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು,ಸರ್ಕಾರಕ್ಕೆ ಮತ್ತಷ್ಟು ಶಕ್ತಿ ತುಂಬುವ ದೃಷ್ಟಿಯಿಂದ ತಮಗೆ ಸಂಪುಟ ವಿಸ್ತರಣೆ,ಪುನರ್ರಚನೆ ಇಲ್ಲವೇ ಸಚಿವರ ಖಾತೆಗಳ ಮರು ಹೊಂದಾಣಿಕೆಗೆ ಅನುಮತಿ ನೀಡುವಂತೆ ಕೇಳಿಕೊಂಡರು. ಮುಖ್ಯಮಂತ್ರಿಗಳ ಕೋರಿಕೆಗೆ ಪ್ರತಿಕ್ರಿಯಿಸಿದ ಅಮಿತ್ ಶಾ ಅವರು,ರಾಜ್ಯದಲ್ಲಿ ಏನೇ ಬದಲಾವಣೆಗಳಿದ್ದರೂ ಅದನ್ನು ಪ್ರಧಾನಮಂತ್ರಿಯವರು ನೋಡಿಕೊಳ್ಳುತ್ತಾರೆ ಎಂದು ಚುಟುಕಾಗಿ ಉತ್ತರಿಸಿದರು. ಇದನ್ನು ಹೊರತುಪಡಿಸಿದರೆ ಭೋಜನ ಕೂಟದಲ್ಲಾಗಲೀ,ಇತರ ಕಡೆಗಳಲ್ಲಾಗಲೀ ಅಮಿತ್ ಶಾ ಅವರು ಮುಂದೇನಾಗಲಿದೆ?ಎಂಬುದರ ಕುರಿತು ಸಣ್ಣ ಸುಳಿವನ್ನೂ ಬಿಟ್ಟುಕೊಡಲಿಲ್ಲ.

ಮೂಲಗಳ ಪ್ರಕಾರ,ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯೋ,ಪುನರ್ರಚನೆಯೋ ಮಾಡುವುದಿದ್ದರೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರ ಮೂಲಕ ಪ್ರಧಾನ ಮಂತ್ರಿಗಳು ಸೂಚನೆ ಕೊಡಿಸುವುದು ವಾಡಿಕೆ. ಇದೇ ರೀತಿ ನಾಯಕತ್ವ ಬದಲಾವಣೆಯಂತಹ ವಿಷಯಗಳಿಗೆ ಕೈ ಹಾಕಿದರೆ ಪ್ರಧಾನ ಮಂತ್ರಿ ನರೇಂದ್ರಮೋದಿಯವರಾಗಲೀ,ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಾಗಲೀ ಒಂದಕ್ಷರ ಮಾತನಾಡುವುದಿಲ್ಲ. ಬದಲಿಗೆ ಪಕ್ಷದ ರಾಷ್ಟ್ರೀಯ ನಾಯಕರ ಪೈಕಿ ಯಾರ ಬಾಯಿಂದಲಾದರೂ ಸಂಬಂಧಪಟ್ಟವರಿಗೆ ಸೂಚನೆ ಕೊಡಿಸುತ್ತಾರೆ. ಈ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರನ್ನು ಕೆಳಗಿಳಿಸುವ ಬಗ್ಗೆ ಪ್ರಧಾನಮಂತ್ರಿ ನರೇಂದ್ರಮೋದಿ ಅವರಾಗಲೀ,ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಾಗಲೀ ಒಂದಕ್ಷರ ಮಾತನಾಡಿರಲಿಲ್ಲ. ಆದರೆ ಕೇಂದ್ರ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಮತ್ತು ರಾಜ್ಯಸಭೆತ ಅಧ್ಯಕ್ಷರು,ಉಪರಾಷ್ಟ್ರಪತಿಗಳಾದ ವೆಂಕಯ್ಯ ನಾಯ್ಡು ಅವರನ್ನು ಯಡಿಯೂರಪ್ಪ ಭೇಟಿ ಮಾಡಿದಾಗ:ನೀವು ನಾಯಕತ್ವದಿಂದ ಕೆಳಗಿಳಿಯವುದು ಹೈಕಮಾಂಡ್ ಇಚ್ಚೆ ಎಂಬ ಸೂಚನೆ ಸಿಕ್ಕಿತ್ತು. ಮೂಲಗಳ ಪ್ರಕಾರ:ಒಬ್ಬರನ್ನು ಅಧಿಕಾರದಿಂದ ಇಳಿಯುವಂತೆ ತಾವೇ ಖುದ್ದಾಗಿ ಸೂಚನೆ ನೀಡಿದರೆ ಅವರು ಮರಳಿ ತಮಗೆ ಮತ್ತೊಂದು ಅವಕಾಶ ನೀಡುವಂತೆ ಕೋರಬಹುದು.ಆದರೆ ಅವರು ಹಾಗೆ ಕೋರಲು ಸಾಧ್ಯವಾಗಬಾರದು ಎಂಬುದು ಮೋದಿ-ಶಾ ಜೋಡಿಯ ನಿಲುವು.

ಇದೇ ಕಾರಣಕ್ಕಾಗಿ ಅಮಿತ್ ಶಾ ಅವರ ಕರ್ನಾಟಕ ಭೇಟಿಯ ನಂತರವೂ ಮುಂದೇನು?ಎಂಬ ಕುತೂಹಲ ಉಳಿದುಕೊಂಡಿದ್ದು,ಇದರ ನಡುವೆಯೇ ಮುಖ್ಯಮಂತ್ರಿ ಬೊಮ್ಮಾಯಿ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ತಮ್ಮ ತಂತ್ರವನ್ನು ಪ್ರಯೋಗಿಸಿದ್ದಾರೆ. ಅದೆಂದರೆ,ಸಂಪುಟ ವಿಸ್ತರಣೆ ಇಲ್ಲವೇ ಪುನರ್ರಚನೆಗೆ ಅನುಮತಿ ಪಡೆಯುವುದು ಆ ಮೂಲಕ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂಬ ಸಂದೇಶ ರವಾನೆಯಾಗುವಂತೆ ಮಾಡುವುದು.ಆದರೆ ಅಮಿತ್ ಶಾ ಅವರು ಈ ತಂತ್ರಗಾರಿಕೆಗೆ ಅಡ್ಡ ಗೋಡೆಯ ಮೇಲೆ ದೀಪವಿಟ್ಟಿದ್ದು,ಹೀಗಾಗಿ ಈಗಲೂ ಕರ್ನಾಟಕದ ಭವಿಷ್ಯದ ಬಗ್ಗೆ ಪ್ರಧಾನಿ ನರೇಂದ್ರಮೋದಿ ಅವರ ಕಡೆ ನೋಡುವ ಪರಿಸ್ಥಿತಿ ಉಳಿದುಕೊಂಡಿದೆ.ಕನಿಷ್ಟ ಪಕ್ಷ ತಾವು ಹಾಲಿ ಸಂಪುಟದ ಕೆಲ ಸಚಿವರ ಖಾತೆಗಳ ಮರುಹೊಂದಾಣಿಕೆಯನ್ನಾದರೂ ಮಾಡಬೇಕು ಎಂಬ ಬಯಕೆ ಬೊಮ್ಮಾಯಿ ಅವರಿಗಿದೆ.ಯಾಕೆಂದರೆ ಗೃಹ ಸಚಿವರಾಗಿ ಆರಗ ಜ್ಞಾನೇಂದ್ರ ಅವರ ಸಾಧನೆ ಮುಖ್ಯಮಂತ್ರಿಗಳಿಗೆ ಹಿಡಿಸಿಲ್ಲ.ಆದ್ದರಿಂದ ಆರಗ ಜ್ಞಾನೇಂದ್ರ ಅವರ ಕೈಯ್ಯಿಂದ ಗೃಹ ಖಾತೆಯನ್ನು ವಾಪಸ್ ಪಡೆದು ಬೇರೆಯವರಿಗೆ ನೀಡುವುದು ಅವರ ಉದ್ದೇಶ.ಅದೇ ರೀತಿ ಮತ್ತಷ್ಟು ಮಂದಿ ಸಚಿವರ ಖಾತೆಗಳನ್ನು ಬದಲಿಸುವುದೂ ಮುಖ್ಯಮಂತ್ರಿಗಳ ಉದ್ದೇಶ.ಆದರೆ ಇದರ ಕುರಿತು ಚಕಾರವೆತ್ತದೆ ಅಮಿತ್ ಶಾ ಪರಿಸ್ಥಿತಿ ಇನ್ನೂ ನಿಗೂಢವಾಗಿದೆ ಎಂಬ ಸಂದೇಶ ನೀಡಿ ಹೋಗಿದ್ದಾರೆ.ಈ ಮಧ್ಯೆ ಮೇ ಐದರ ಗುರುವಾರ ನಡೆಯಬೇಕಿದ್ದ ಸಚಿವ ಸಂಪುಟ ಸಭೆಯನ್ನು ಏಕಾಏಕಿ ಮುಂದೂಡಲಾಗಿದ್ದು,ಹನ್ನೊಂದನೇ ತಾರೀಖಿಗೆ ನಿಗದಿ ಮಾಡಲಾಗಿದೆ.ಹೀಗಾಗಿ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಅದು ಸಂಕೇತದಂತಿದೆ.

Leave a Comment

Your email address will not be published. Required fields are marked *

Translate »
Scroll to Top