ಕಾರಟಗಿಯಲ್ಲಿ ಸಂಜೀವಿನಿ ಮಾಸಿಕ ಸಂತೆ ಉದ್ಘಾಟನೆ

ಕಾರಟಗಿ : ಸ್ವಸಹಾಯ ಸಂಘದ ಮಹಿಳೆಯರು ತಯಾರಿಸಿದ ಉತ್ಪನ್ನಕ್ಕೆ ಉತ್ತಮ ಮಾರುಕಟ್ಟೆ ವ್ಯವಸ್ಥೆ ಒದಗಿಸಲಾಗುತ್ತಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಡಿ.ಮೋಹನ್ ಅವರು ಹೇಳಿದರು. ಪಟ್ಟಣದ ಸಂತೆ ಮಾರುಕಟ್ಟೆಯಲ್ಲಿ ಎನ್ ಆರ್ ಎಲ್ ಎಂ – ಸಂಜೀವಿನಿ ಯೋಜನೆಯಡಿ ಬುಧವಾರ ಸಂಜೀವಿನಿ ಮಾಸಿಕ ಸಂತೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿ ತಿಂಗಳು ಪಟ್ಟಣದಲ್ಲಿ ಸಂಜೀವಿನಿ ಮಾಸಿಕ ಸಂತೆಯನ್ನು ನಡೆಸಲಾಗುವುದು. ಸ್ವ ಸಹಾಯ ಸಂಘದ ಸದಸ್ಯರು ಮಾರುಕಟ್ಟೆ ಸೌಲಭ್ಯ ಸದ್ಬಳಕೆ ಮಾಡಿಕೊಂಡು ಗ್ರಾಹಕರನ್ನು ಸೃಷ್ಟಿ ಮಾಡಿಕೊಳ್ಳಬೇಕು. ಮಹಿಳೆಯರು ಗುಣಮಟ್ಟದ ಉತ್ಪನ್ನ ತಯಾರಿಸಬೇಕು. ಇದರಿಂದ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಸಹಕಾರಿ ಆಗುತ್ತದೆ ಎಂದರು. ಸಂಜಿವಿನಿ ಯೋಜನೆಯಡಿ ಸ್ವ ಸಹಾಯ ಸಂಘಗಳ ಸದಸ್ಯರು ಪಡೆಯುವ ಸಾಲಸೌಲಭ್ಯವನ್ನು ಸದುಪಯೋಗ ಮಾಡಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದರು. ಕಾರ್ಯಕ್ರಮ ಉದ್ಘಾಟಿಸಿದ ತಹಸೀಲ್ದಾರರಾದ ರವಿ ಅಂಗಡಿ ಅವರು ಮಾತನಾಡಿ, ಮಹಿಳೆಯರು ಸ್ವಂತ ಬ್ಯುಸಿನೆಸ್ ಮಾಡಲು ಸಂಜೀವಿನಿ ಯೋಜನೆ ಬಹಳ ಅನುಕೂಲವಾಗಿದೆ. ಸರ್ಕಾರಿ ಕಾರ್ಯಕ್ರಮಗಳು ಹಾಗೂ ಸಭೆ ಸಮಾರಂಭಗಳಲ್ಲೂ ಸಂಘದ ಮಹಿಳೆಯರ ವ್ಯಾಪಾರಕ್ಕೆ ಅನುಕೂಲ ಮಾಡಲಾಗುವುದು ಎಂದರು.

ಏನೇನು ವಸ್ತುಗಳಿದ್ದವು :
ಅಲಂಕಾರಿಕ ವಸ್ತತಟ್ಟೆ, ಉದುಬತ್ತಿ ಪೌಷ್ಠಿಕ ಪುಷ್ಟಿ, ಸಾವಯವ ಅಕ್ಕಿ, ಸಾವಿಗೆ, ದೇಶೀಯ ತುಪ್ಪ, ಬ್ಲಾಕ್ ಅಕ್ಕಿ, ಮುತ್ತಿನ ಸರ, ಸಿಹಿ ಪದಾರ್ಥ, ದವಸ ಧಾನ್ಯಗಳು, ಪತ್ರವಳಿ, ಉಪಾಹಾರ ತಟ್ಟೆ ಸೇರಿ ಇತರೆ ವಸ್ತುಗಳನ್ನು ಸ್ವಸಹಾಯ ಸಂಘದ ಸದಸ್ಯರು ಮಾರಾಟಕ್ಕೆ ಇಟ್ಟಿದರು. ಸಂತೆಗೆ ಬಂದಿದ್ದ ಜನ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿದರು. ಕಾರಟಗಿ ಪುರಸಭೆಯ ವ್ಯವಸ್ಥಾಪಕರಾದ ಪರಮೇಶ್ವರಪ್ಪ, ಎಸ್ ಡಿಎ ಸುಮಾ ಕಂಚಿ, ಎನ್ ಆರ್ ಎಲ್ ಎಂ- ಸಂಜೀವಿನಿ ಯೋಜನೆ ಜಿಲ್ಲಾ ವ್ಯವಸ್ಥಾಪಕ ಮಲ್ಲಿಕಾರ್ಜುನ್ , ಐಇಸಿ ಸಂಯೋಜಕರಾದ ಬಾಳಪ್ಪ ತಾಳಕೇರಿ, ಟಿಪಿಎಂ ಉಮೇಶ ವಿ, ಶ್ಯಾಮ್ ಸುಂದರ್ ಮಲ್ಲಿಕಾರ್ಜುನ್, ಪರಶುರಾಮ ಸೇರಿ ಇತರರಿದ್ದರು.

Leave a Comment

Your email address will not be published. Required fields are marked *

Translate »
Scroll to Top