ಬಳ್ಳಾರಿ: ತಾಲೂಕಿನ ಹಂದ್ಯಾಳು ಗ್ರಾಮ ಪಂಚಾಯ್ತಿಯಲ್ಲಿನ ನರೇಗಾ ಸೇರಿದಂತೆ ಹಲವು ಕಾಮಗಾರಿಗಳಲ್ಲಿ ಅವ್ಯವಹಾರವಾಗಿದೆ. ನರೇಗಾದಲ್ಲಿ ಬೋಗಸ್ ಆಗಿದೆಂದು ಮೇಲ್ನೋಟಕ್ಕೆ ಕಂಡು ಬಂದಿದ್ದರಿಂದ ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯನಿರ್ಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರು ಅವರಿಗೆ ದೂರು ನೀಡಿದ್ದು. ಈ ಬಗ್ಗೆ ತನಿಖೆಯಾಗಬೇಕೆಂದು ಸ್ವತಃ ಆ ಗ್ರಾಮ ಪಂಚಾಯ್ತಿಯವ ಅಧ್ಯಕ್ಷ ಯು. ಗಣೇಶ್ ಕುಮಾರ್ ಒತ್ತಾಯ ಮಾಡಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿದ ಅವರು ಗ್ರಾಮದ ಎ.ನಿಂಗಪ್ಪ ಅವರು ಬಂದು ನರೇಗಾ ಕಾಮಗಾರಿಯಲ್ಲಿ ಭ್ರಷಾಚಾರವಾಗಿದೆಂದು ದೂರು ನೀಡಿದರು. ಇದನ್ನು ಪರಿಶೀಲಿಸಿದಾಗ ಮೇಲ್ನೋಟಕ್ಕೆ ಅವ್ಯವಹಾರವಾಗಿರುವುದು ಕಂಡು ಬಂದಿದ್ದರಿಂದ ತನಿಖೆ ಮಾಡಲು ಸಿಎಸ್ ಅವರಿಗೆ ದೂರು ನೀಡಿದೆಂದು ಹೇಳಿದರು.
ಗ್ರಾಮ ಪಂಚಾಯ್ತಿಯಲ್ಲಿ ಅಂದಾಜು 1095 ಜಾಬ್ ಕಾರ್ಡ್ ಇವೆ. ಒಬ್ಬ ಮೇಟಿಗೆ 20 ಜನರನ್ನು ನೀಡಬೇಕು, ಆದರೆ ನೂರಕ್ಕೂ ಹೆಚ್ಚು ಜನರಿಗೆ ಒಬ್ಬ ಮೇಟಿ ಮಾಡಿದ್ದಾರೆ. ಗುಡುದೂರು, ಹಂದ್ಯಾಳ ಗ್ರಾಮದಲ್ಲಿ ನಡೆದ
ನರೇಗದಲ್ಲಿ ಕೆಲಸಕ್ಕೆ ಹೋಗದ ಅನೇಕ ಜನರಿಗೆ ಹಣ ಸಂದಾಯವಾಗಿದೆ.
ಗ್ರಾಮ ಪಂಚಾಯ್ತಿಯಲ್ಲಿ ಪಿಡಿಓ ಎಂ.ಕೆ.ಸಂದ್ಯ, ಕಾರ್ಯದರ್ಶಿ ಲಿಂಗಮೂರ್ತಿ ಮತ್ತು ನರೇಗ ಕಾಮಗಾರಿ ಪರಿಶೀಲನೆಗೆ ತಾಲೂಕು ಪಂಚಾಯ್ತಿಯಲ್ಲಿ ಸಹಾಯಕ ನಿರ್ದೇಶಕರಾಗಿ ಬಸವರಾಜ್ ಇದ್ದರೂ ಈ ರೀತಿ ಭ್ರಷ್ಟಾಚಾರ ನಡೆದಿರುವುದು ಕಂಡು ಬಂದಿದೆ.
ಕಾಮಗಾರಿ ಮಾಡಿದ ಬಗ್ಗೆ ಬಿಲ್ ಮಾಡಿ ಕೊನೆ ಗಳಿಗೆಯಲ್ಲಿ ತಂದು ನನಗೆ ಸಹಿಬಮಾಡಲು ಹೇಳುತ್ತಾರೆ. ಆ ವೇಳೆ ಪರಿಶೀಲನೆ ಮಾಡಲು ಆಗಲ್ಲ. ನಿಲ್ಲಿಸಿದರೆ ದುಡಿದವರಿಗೆ ಹಣ ದೊರೆಯದೆ ಅನೇಕ ಸಮಸ್ಯೆಗಳು ಆಗುತ್ತವೆಂದು ಸಹಿಮಾಡಿದರೆ ಈ ರೀತಿ ಭ್ರಷ್ಟಾಚಾರ ಆಗಿರುವುದು ಕಂಡು ಬಂದಿದೆಂದರು.
ಎ.ನುಂಗಪ್ಪ ಅವರು ಮಾತನಾಡಿ ಗ್ರಾಮದಲ್ಲಿ ಗೋಕಟ್ಟೆ ನಿರ್ಮಾಣ ಕಾಮಗಾರಿ ನಡೆದಿದೆ. ಆದರೆ ಅಂತಹ ಯಾವುದೇ ಕಾಮಗಾರಿ ಆಗಿಲ್ಲ. 7 ನೂರು ಜನಕ್ಕೆ ಕೆಲಸ ನೀಡಿದೆ ಎಂದು ಇದರಲ್ಲಿ ಹಣ ಬಿಡುಗಡೆ ಮಾಡಿದೆ. ಆಶಾಬೀ, ಗಾದೆಮ್ಮ, ರುದ್ರಪ್ಪ ಸೇರಿದಂತೆ ಕೆಲಸಕ್ಕೆ ಬಾರದ ಅನೇಕ ಹೆಸರಲ್ಲಿ ನರೇಗ ಕೂಲಿ ಸಂದಾಯವಾಗಿದೆ. ಈ ವರಗೆ ಕೆಲಸ ಮಾಡಿದ್ದಾರೆನ್ನಲಾದ
881 ಜನಕ್ಕೆ ಕೂಲಿ ಲಾಗಿನ್ ಕೊಟ್ಟಿದೆ. ಅದಕ್ಕಾಗಿ ಈ ಬಗ್ಗೆ ತನಿಖೆಯಾಗಲಿ. ಅಷ್ಟೇ ಅಲ್ಲದೆ ಇನ್ನಿತರ ಕಾಮಗಾರಿಗಳಲ್ಲೂ ಅವ್ಯವಹಾರ ನಡೆದಿರುವುದು ಕಂಡು ಬರುತ್ತಿದೆ ಎಲ್ಲದರ ತನಿಖೆ ಆಗಲಿ ಎಂದರು. ಸುದ್ದಿ ಗೋಷ್ಟಿಯಲ್ಲಿ ಗ್ರಾಮದ ಗೆಜ್ಜೆಳ್ಳಿ ಲಿಂಗಪ್ಪ ಇದ್ದರು.