ಆಕ್ಸ್ ಬ್ರಿಡ್ಜ್ ಗ್ರೂಪ್ ಆಫ್ ಸಂಸ್ಥೆಗಳಿಂದ ಮಹತ್ವಾಕಾಂಕ್ಷೆಯ “ಅಕ್ಸಲರೇಟ್” ಉದ್ಯೋಗ ಮೇಳ : ಸಹಸ್ರಾರು ವಿದ್ಯಾರ್ಥಿಗಳು ಭಾಗಿ

ಬೆಂಗಳೂರು: ಆಕ್ಸ್ ಬ್ರಿಡ್ಜ್ ಗ್ರೂಪ್ ಆಫ್ ಸಂಸ್ಥೆಗಳಿಂದ ಮಾಗಡಿ ರಸ್ತೆಯ ಹೇರೋ ಹಳ್ಳಿಯ ಕಚೇರಿಯಲ್ಲಿ ಬೃಹತ್ ಜಾಬ್ ಮೇಳ ಆಯೋಜಿಸಲಾಗಿತ್ತು. 75 ಕ್ಕೂ ಅಧಿಕ ಕಂಪೆನಿಗಳು ಮೇಳದಲ್ಲಿ ಸಹಸ್ರಾರು ಮಂದಿ ಭಾಗಿಯಾಗಿದ್ದು, ನೂರಾರು ಮಂದಿಗೆ ಸ್ಥಳದಲ್ಲಿಯೇ ನೇಮಕಾತಿ ಪತ್ರ ನೀಡಲಾಯಿತು. 

ಐಟಿ ಸಂಸ್ಥೆಗಳು, ನಿರ್ವಹಣೆ, ವಿದ್ಯುನ್ಮಾನ, ಸಿವಿಲ್ ಎಂಜಿನಿಯರಿಂಗ್, ಮಾರುಕಟ್ಟೆ, ಹಣಕಾಸು, ಪೂರೈಕೆ ಸರಪಳಿ, ಆರೋಗ್ಯ, ಔಷಧ, ಡಿಜಿಟಲ್ ಮಾರುಕಟ್ಟೆ ಮತ್ತಿತರೆ ವಲಯಗಳ ಪ್ರಮುಖ ಕಂಪೆನಿಗಳು ಮೇಳದಲ್ಲಿ ಭಾಗವಹಿಸಿದ್ದವು. 

ಆಕ್ಸ್‌ಬ್ರಿಡ್ಜ್ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಡಾ. ಮನ್ಸೂರ್ ಆಲಿ ಖಾನ್ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿ, ಉದ್ಯೋಗ ಮೇಳದಲ್ಲಿ ಇನ್ಫೋಸಿಸ್, ಟಿವಿಎಸ್ ಗ್ರೂಪ್, ಐ.ಎಫ್.ಬಿ, ಹಿಟಾಚಿ, ಅಪಲೋ ಪವರ್ ಸಿಸ್ಟಮ್ಸ್, ರಾಯಲ್ ಎನ್ ಫೀಲ್ಡ್ ಮತ್ತಿತರೆ ಕಂಪೆನಿಗಳು ಭಾಗವಹಿಸಿದ್ದವು. ನೂರಾರು ಮಂದಿಗೆ ಉದ್ಯೋಗ ದೊರೆಕಿದೆ. ಇಂತಹ ಉದ್ಯೋಗ ಮೇಳಗಳು ನಿರಂತರವಾಗಿ ನಡೆಯಲಿವೆ ಎಂದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top