ಪುನಿತ್ ರಾಜ್ ಕುಮಾರ್ ಎರಡನೇ ಪುಣ್ಯತಿಥಿ ಅಂಗವಾಗಿ ಬ್ರದರ್ ಹುಡ್ ರೈಡರ್ಸ್ ಆರ್ಗನೈಸೇಷನ್ ನಿಂದ ಅಕ್ಟೋಬರ್ ಬೈಕರ್ಸ್ ಫೆಸ್ಟ್ ಆಯೋಜನೆ
ಬೈಕ್ ರೈಡ್ ಮಾಡಿ ಹುರಿದುಂಬಿಸಿದ ಬಿಗ್ ಬಾಸ್ ಸ್ಪರ್ಧಿ ಕೆ.ಪಿ. ಅರವಿಂದ್, ನಟಿ ದಿವ್ಯಾ ಉರುಡುಗ
ಅಪ್ಪ – ಮಕ್ಕಳು, ಅಮ್ಮ – ಮಕ್ಕಳ ಬೈಕ್ ರೈಡ್ ಫ್ಯಾಷನ್ ಶೋ ಆಯೋಜನೆ
ಬೆಂಗಳೂರು: ಪುನಿತ್ ರಾಜ್ ಕುಮಾರ್ ಅವರ ಎರಡನೇ ಪುಣ್ಯತಿಥಿ ಅಂಗವಾಗಿ ಬ್ರದರ್ ಹುಡ್ ರೈಡರ್ಸ್ ಆರ್ಗನೈಸೇಷನ್ ನಿಂದ ಅಕ್ಟೋಬರ್ ಬೈಕರ್ಸ್ ಫೆಸ್ಟ್ ಆಯೋಜಿಸಿದ್ದು, ಸಂಚಾರ ನಿಯಮಗಳ ಪಾಲನೆ, ಮನೋರಂಜನೆ, ಅಮ್ಮ ಮಕ್ಕಳು, ಅಪ್ಪ ಮಕ್ಕಳು ಬೈಕ್ ಗಳಲ್ಲಿ ಸಾಗುವ ಫ್ಯಾಷನ್ ಶೋ ಏರ್ಪಡಿಸಲಾಗಿತ್ತು.
ವಿಧಾನಸೌಧದ ಮುಂಭಾಗ ಬೈಕ್ ರೈಡಿಂಗ್ ಗೆ ಟಿ.ವಿ.ಎಸ್ ಸಂಸ್ಥೆಯ ದಕ್ಷಿಣ ವಲಯದ ಮುಖ್ಯಸ್ಥರಾದ ಉನ್ನೀ ಕೃಷ್ಣನ್ ಚಾಲನೆ ನೀಡಿದರು. ಬ್ರದರ್ ಹುಡ್ ರೈಡರ್ಸ್ ಆರ್ಗನೈಸೇಷನ್ ಅಧ್ಯಕ್ಷ ಸುಶೀಲ್ ಸಾಗರ್ ಮತ್ತಿತರರು ಉಪಸ್ಥಿತರಿದ್ದರು.

ವಿಧಾನಸೌಧದಿಂದ ಮಹಿಳಾ ಬೈಕರ್ಸ್ ಗಳು ಒಳಗೊಂಡಂತೆ ೧೫೦ ಅಧಿಕ ಮಂದಿ ಕೆಂಗೇರಿಯ ಜಿ.ಕೆ. ಅರೇನಾ ವರೆಗೆ ಸಾಗಿ ಬಂದರು. ಹಾದಿಯುದ್ದಕ್ಕೂ ಸಂಚಾರ ನಿಮಯಗಳ ಪಾಲನೆ, ಹೆಲ್ಟ್ ಧರಿಸುವುದರಿಂದ ಆಗುವ ಲಾಭಗಳು, ಕವಿಗಡಚಿಕ್ಕುವ ಹಾರನ್ ನಿಂದ ಕಿವುಡುತನ, ರಕ್ತದೊತ್ತಡ ಹೆಚ್ಚಾಗುವುದು ಸೇರಿದಂತೆ ಹಲವು ಅನಾರೋಗ್ಯ ಸಮಸ್ಯೆಗಳ ಕುರಿತು ಜನ ಜಾಗೃತಿಮೂಡಿಸಿದರು.

ನಂತರ ಕೆಂಗೇರಿಯ ಜಿ.ಕೆ. ಅರೇನಾನದಲ್ಲಿ ಆಯೋಜಿಸಿದ್ದ “ಮಡ್ ರೈಡ್”ನಲ್ಲಿ ಬಿಗ್ ಬಾಸ್ ಸ್ಪರ್ಧಿ ಕೆ.ಪಿ. ಅರವಿಂದ್ ಮತ್ತು ನಟಿ ದಿವ್ಯಾ ಉರುಡುಗ ಅವರು ಪಾಲ್ಗೊಂಡು, ಟ್ರ್ಯಾಕ್ ನಲ್ಲಿ ಬೈಕ್ ರೈಡ್ ಮಾಡಿ ಬೈಕರ್ಸ್ ಗಳನ್ನು ಹುರಿದುಂಬಿಸಿದರು. ಅಂತರ್ ಕ್ಲಬ್ ಬೈಕ್ ರೈಡಿಂಗ್ ಸ್ಪರ್ಧೆಯೂ ಸಹ ನಡೆಯಿತು.
ಈ ಸಂದರ್ಭದಲ್ಲಿ ಸ್ಲೋ ಬೈಕ್ ರೈಡ್, ಸಂಗೀತ, ನೃತ್ಯ, ಪ್ಯಾಷನ್ ಮತ್ತಿತರೆ ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ವಿಶೇಷವಾಗಿ ತಂದೆ ಮಕ್ಕಳು, ತಾಯಿ ಮಕ್ಕಳ ಬೈಕ್ ರೈಡ್ ಪ್ಯಾಷನ್ ಶೋ ಗಮನ ಸೆಳೆಯಿತು.