ಕೊಚ್ಚಿ ಬ್ಲ್ಯು ಸ್ಪೈಕರ್ಸ್‌ ವಿರುದ್ಧ ರೋಚಕ ಗೆಲುವು ಸಾಧಿಸಿದ ಬೆಂಗಳೂರು ಟಾರ್ಪಿಡೋಸ್‌

ಚೆನ್ನೈ ; ಇಲ್ಲಿನ ಜವಾಹರ್‌ ಲಾಲ್‌ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರುಪೇ ಪ್ರೈಮ್‌ ವಾಲಿಬಾಲ್‌ ಲೀಗ್‌ ನಲ್ಲಿ ಕೊಚ್ಚಿ ಬ್ಲ್ಯು ಸ್ಪೈಕರ್ಸ್‌ ವಿರುದ್ಧ ಬೆಂಗಳೂರು ಟಾರ್ಪಿಡೋಸ್‌ ರೋಚಕ ಗೆಲುವು ಸಾಧಿಸಿದೆ.

 

ಕಳೆದ ರಾತ್ರಿ ನಡೆದ ತೀವ್ರ ಹಣಾಹಣಿಯಲ್ಲಿ ಬೆಂಗಳೂರು ಟಾರ್ಪಿಡೋಸ್‌ ತಂಡ  12-15, 16-14, 15-13, 13-15, 16-5 ಸೆಟ್‌ ಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿತು.

ಟಾರ್ಪಿಡೋಸ್‌ ನ ನೀಳಕಾಯದ ಆಟಗಾರ ಥಾಮಸ್ ಹೆಪ್ಟಿನ್ಸ್ಟಾಲ್ ಪಂದ್ಯಶ್ರೇಷ್ಠ ಪುರಸ್ಕಾರಕ್ಕೆ ಪಾತ್ರರಾದರು. ಬಲಬದಿಯಿಂದ ಹೆಪ್ಟಿನ್‌ಸ್ಟಾಲ್‌ನ ಸ್ಪೈಕ್‌ಗಳು ಬೆಂಗಳೂರಿಗೆ ಆರಂಭದಲ್ಲಿ ನೆರವಾದವು. ಆದರೆ ಕೊಚ್ಚಿಯ ಎರಿನ್ ಅಥೋಸ್ ಫೆರೇರಾ ಮತ್ತು ಕ್ರೋಲ್ ಜಾನ್ ತಮ್ಮ ಗಟ್ಟಿಯಾದ ಆಟದೊಂದಿಗೆ ಮುನ್ನಡೆಯಲು ನೆರವಾದರು.

 

ಎರಿನ್ ವರ್ಗೀಸ್ ಟಾರ್ಪಿಡೊಸ್‌ ಗಳ ರಕ್ಷಣೆಗೆ ದೊಡ್ಡ ಬೆದರಿಕೆಯಾಗಿ ಪರಿಣಮಿಸಿದರು. ಆದರೆ ಸ್ರಾಜನ್ ಮತ್ತು ಮುಜೀಬ್ ಅವರ ಬ್ಲ್ಯಾಕ್‌ ಗಳು ಆಟದ ಸಮತೋಲನಕ್ಕೆ ಕಾರಣವಾಯಿತು.

ಥಾಮಸ್ ಹೆಪ್ಟಿನ್ಸ್ಟಾಲ್ ಮತ್ತು ಸ್ರಾಜನ್ ಅವರ ಎರಡು ಪ್ರಮುಖ ಬ್ಲ್ಯಾಕ್‌ ಗಳು ಬೆಂಗಳೂರು ತಂಡಕ್ಕೆ ನೆರವಾಯಿತು. ಮತ್ತು ಇವರು ರಕ್ಷಣಾ ಕೋಟೆಯಾಗಿ ಪರಿಣಮಿಸಿದರು. ಕೆಟ್ಟ ದಾಳಿಗಳಿಗೆ ಕೊಚ್ಚಿ ಬೆಲೆ ತೆರಬೇಕಾಯಿತು. ಹೆಪ್ಟಿನ್‌ಸ್ಟಾಲ್ ರಕ್ಷಣಾ ಕೋಟೆಯಾಗಿ ಪರಿಣಮಿಸಿದರು. ಪಟ್ಟುಬಿಡದ ಟಾರ್ಪಿಡೊಗಳ ದಾಳಿಗಳು ಕೊಚ್ಚಿ ಬ್ಲೂಸ್‌ಗೆ ಯಾವುದೇ ಬಿಡುವು ನೀಡಲಿಲ್ಲ. ಗೆಲುವಿಗಾಗಿ ಬೆಂಗಳೂರು ಅಂತಿಮ ಸೆಟ್‌ ವರೆಗೆ ಕಾಯಬೇಕಾಯಿತು.

Facebook
Twitter
LinkedIn
Telegram
Pocket
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top