ಬೆಂಗಳೂರು : ಯಲಹಂಕ ರಾಜಕಾಲುವೆ ನೀರಿನ ಹರಿವು ಹೆಚ್ಚಾಗಿ ಸುಮಾರು ೨೦ ಮನೆಗಳಿಗೆ ಮಳೆ ನೀರು

ಬೆಂಗಳೂರು:  ಬೆಂಗಳೂರು ರಾಜಕಾಲುವೆ ಯಲಹಂಕ ವಲಯ ವ್ಯಾಪ್ತಿಯ ರಮಣಶ್ರೀ ಗಾರ್ಡೇನಿಯಾ ಲೇಔಟ್ ಹಾಗೂ ನಾರ್ತ್ ಹುಡ್ ನಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ರಾಜಕಾಲುವೆಯಲ್ಲಿ ನೀರಿನ ಹರಿವು ಹೆಚ್ಚಾಗಿ ಸುಮಾರು ೨೦ ಮನೆಗಳಿಗೆ ಮಳೆ ನೀರು ನುಗ್ಗಿದೆ.

ಈ ಹಿನ್ನಲೆಯಲ್ಲಿ ಇಂದು ಸ್ಥಳಕ್ಕೆ ಭೇಟಿ ನೀಡಿದ ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಅರಣ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯಾದ ಎನ್. ಮಂಜುನಾಥ್ ಪ್ರಸಾದ್ ಜೊತೆ ಸ್ಥಳ ಪರಿಶೀಲನೆ ನಡೆಸಿದರು.

ತುಷಾರ್ ಗಿರಿನಾಥ್ ಮಾತನಾಡಿ, ನಗರದ ರಮಣಶ್ರೀ ಗಾರ್ಡೇನಿಯಾ ಲೇಔಟ್ ಹಾಗೂ ನಾರ್ತ್ ಹುಡ್ ವಿಲ್ಲಾ ಪ್ರದೇಶದಲ್ಲಿ ಮಳೆ ನೀರು ನಿಲ್ಲದಂತೆ ಶೀಘ್ರ ಪರ್ಯಾಯವಾಗಿ ೫೨೦ ಮೀಟರ್ ಉದ್ದದ ೧.೬೦೦ ಎಂ.ಎಂ ಪೈಪ್ ಅಳವಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಬೆಂಗಳೂರು, ಮೇ, 20; ಕರ್ನಾಟಕದ ಕಾನೂನು ಸುವ್ಯವಸ್ಥೆ ಉಳಿಸುವ ದಕ್ಷ ಗೃಹಸಚಿವರು ಬೇಕಾಗಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ವ್ಯಂಗ್ಯಭರಿತವಾಗಿ ಟ್ವೀಟ್‌ ಮಾಡಿದ್ದಾರೆ.

 

ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು, ಕುರ್ಚಿಗೆ ಭಾವಚಿತ್ರವನ್ನು ಅಂಟಿಸಿ ದಕ್ಷ ಗೃಹಸಚಿವರು ಬೇಕಾಗಿದ್ದಾರೆ ಎನ್ನುವ ಮೂಲಕ ಪರೋಕ್ಷವಾಗಿ ಹಾಲಿ ಗೃಹಸಚಿವ ಡಾ.ಜಿ.ಪರಮೇಶ್ವರ್‌ ಅವರ ಕಾಲೆಳೆದಿದ್ದಾರೆ.

 

ಸಮಾಜದಲ್ಲಿ ಅಶಾಂತಿ, ಗಲಭೆ, ಬೆದರಿಕೆ, ಕೊಲೆ, ಅತ್ಯಾಚಾರ, ಅನೀತಿ, ಅನ್ಯಾಯ, ಕೃತ್ಯಗಳನ್ನು ಹತ್ತಿಕ್ಕಲು ಓರ್ವ ದಕ್ಷ ಸಮರ್ಥ ಗೃಹಮಂತ್ರಿ ಬೇಕಾಗಿದ್ದಾರೆ ಎಂದು ಹಾಲಿ ಸಚಿವರ ಕಾರ್ಯವೈಖರಿಯನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.

 

ಕಠಿಣ ಕ್ರಮ, ಕಾನೂನು ರೀತ್ಯ ಕ್ರಮ ಈ ಪದಪುಂಜಗಳನ್ನು ಬಿಟ್ಟು ಪಾತಕಿಗಳಿಗೆ ಅರ್ಥವಾಗುವ ಭಾಷೆಯಲ್ಲಿ ಕಾರ್ಯ ನಿರ್ವಹಿಸಬೇಕು. ಅವರು ನಮ ಬ್ರದರ್ಸ್‌, ಸಿಸ್ಟರ್ಸ್‌ ಎಂದು ಓಲೈಕೆ ರಾಜಕಾರಣ ಮಾಡಬಾರದು. ಉಡಾಫೆ ಮಾತುಗಳನ್ನು ಆಡಬಾರದು ಎಂದಿದ್ದಾರೆ.

 

ಹಾರಿಕೆ ಉತ್ತರಗಳನ್ನು ಬಿಟ್ಟು ಗಂಭೀರವಾಗಿ ಕೆಲಸ ನಿರ್ವಹಿಸಬೇಕು, ದೇಶ ಮೊದಲು ಎಂಬ ಭಾವನೆ ಇರಬೇಕು. ಹಿರಿಯ ಅಧಿಕಾರಿಗಳಿಗೆ, ಜನರಿಗೆ ಏಕವಚನವನ್ನು ಬಳಸದಿರುವುದು ಪೊಲೀಸ್‌‍ಇಲಾಖೆ, ಗುಪ್ತಚರ ಇಲಾಖೆಯನ್ನು ಕಾರ್ಪರೇಟ್‌ ಮಾದರಿ ನಡೆಸುವ ಚಾಕಚಕ್ಯತೆ, ಕಾನೂನುಬಾಹಿರ ಚಟುವಟಿಕೆಗಳಿಗೆ ಶೂನ್ಯ ಸಹಿಷ್ಣುತೆ ಇರಬೇಕು ಎಂದು ಸಲಹೆ ಮಾಡಿದ್ದಾರೆ.

 

 

ಮೇಲ್ಕಂಡ ಕಾರ್ಯವೈಖರಿ, ವ್ಯಕ್ತಿತ್ವವಿರುವ ಶಾಸಕರು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ತಮ ಸ್ವವಿವರವನ್ನು ಮುಚ್ಚಿದ ಲಕೋಟೆಯಲ್ಲಿ ಕಳುಹಿಸಬಹುದು ಎಂದು ಟೀಕಿಸಿದ್ದಾರೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top