ಮೊಳಕಾಲ್ಮೂರು : ಮಾನವತಾದಿ, ಶಾಂತಿದೂತ, 12ನೇ ಶತಮಾನದಲ್ಲಿಯೇ ಎಲ್ಲಾ ಜಾತಿ ಧರ್ಮ ಒಂದೇ ಎಂದು ಸಾರಿ ಎಲ್ಲಾ ಜಾತಿಜನಾಂಗವನ್ನು ಒಂದೇ ಎಂದು ಕಾಣುವ ವ್ಯಕ್ತಿ ಎಂದರೆ ಅದು ಬಸವಣ್ಣನವರು ಎಂದು ಡಾ. ಪಿ. ಎಂ. ಮಂಜುನಾಥ್ ನವರು ಹೇಳಿದರು. ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ತಾಲ್ಲೂಕ ಪಂಚಾಯತಿ, ಪಟ್ಟಣ ಪಂಚಾಯತಿ ಹಾಗೂ ತಾಲ್ಲೂಕ ಆಡಳಿತ ಆಯೋಜಿಸಿದ್ದ ಶ್ರೀ ವಿಶ್ವಗುರು ಬಸವಣ್ಣ ಜಯಂತೋತ್ಸವನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿ ಇವರು ಮಾತನಾಡಿದರು. ಭಕ್ತಿ ಬಸವಣ್ಣನವರು 12ನೇ ಶತಮಾನದಲ್ಲಿಯೇ ಎಲ್ಲಾ ಜಾತಿ ಧರ್ಮ ಮೇಲು ಕೀಳು ಎಲ್ಲವನ್ನು ಬಿಟ್ಟು ಮಾನವತಾದಿಯಾಗಿ ಜೀವಿಸಬೇಕು, ಬಸವಣ್ಣನವರು ಅಂದಿನ ಕಾಲದಲ್ಲಿಯೇ ಅನುಭವ ಮಂಟಪವನ್ನು ನಿರ್ಮಿಸಿ ಇಂದಿನ ಕಾಲಮಾನಕ್ಕೆ ಮಾದರಿಯಾಗಿರುವ ವ್ಯಕ್ತಿ ಬಸವಣ್ಣನವರು. ಇಂತಹ ಆದರ್ಶಗಳು ಮಾರ್ಗದರ್ಶನ ಸದಾ ನಮ್ಮ ಜನತೆಗೆ ಬೇಕಾಗಿದೆ. ಮಹಿಳೆಯಾರಿಗೆ ಸ್ಥಾನ ಮಾನ ಕಲ್ಪಿಸಿ, ಸಮಾಜವನ್ನು ಸರಿ ದಾರಿಯಲ್ಲಿ ತರುವಲ್ಲಿ ಪ್ರಮುಖ ವ್ಯಕ್ತಿ ಎಂದು ಹೇಳಿದರು.

ಸಂದರ್ಭದಲ್ಲಿ ತಾಲ್ಲೂಕಿನ ದಂಡಧಿಕಾರಿ ಸುರೇಶ ಕುಮಾರ್, ತಾಲ್ಲೂಕು ಪಂಚಾಯತಿ ಈ. ಓ. ಜಾನಕಿ ರಾಮ್, ಸಿ. ಪಿ. ಐ. ಜಿ. ಬಿ.ಉಮೇಶ್, ಪಟ್ಟಣ ಪಂಚಾಯತಿ. ಸಿ. ಓ. ಕಾಂತರಾಜ್, ಸಿದ್ದಯ್ಯನಕೋಟೆ ವಿಜಯ ಮಹಾಂತ ಶಾಖ ಮಠ ಶ್ರೀ ಬಸವಲಿಂಗ ಸ್ವಾಮೀಜಿ, ರಾಂಪುರದ ರುದ್ರಾಕ್ಷಿ ಮಠದ ಡಾ ವೀರಭದ್ರ ಸ್ವಾಮಿ, ಬ್ರಹ್ಮಗಿರಿ ಮಠದ ಸೋಮೇಶ್ವರ ಸ್ವಾಮಿ, ಮಾಜಿ ತಾ. ಪ. ಅಧ್ಯಕ್ಷರು ಡಿ. ಆರ್ ಮಂಜುನಾಥ್,ಪ ಪ ಸದಸ್ಯರು ಟಿ ಟಿ ರವಿಕುಮಾರ್ ವಿನಯ್ ಕುಮಾರ್ ಮಾಜಿ ತಾ. ಪ. ಸದಸ್ಯರು ರೇವಣ್ಣ, ಜಿಂಕಲು ಬಸವರಾಜ್ ರಾಂಪುರ ಗಂಗಾಧರ್ ಹಾಗೂ ಮುಖಂಡರು ಭಾಗವಹಿಸಿದ್ದರು.