ಶ್ರವಣದೋಷ ವುಳ್ಳವರು ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳುವುದು ಅಗತ್ಯ – ರೀತಾ ಅಬ್ರಹಾಂ

ಬೆಂಗಳೂರು, ಡಿ, 13; ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಆರ್.ಟಿ.ನಗರದಲ್ಲಿ ಹಿಯರಿಂಗ್ ವೆಲ್ ನೆಸ್ ಕ್ಲಿನಿಕ್ ನಲ್ಲಿ ಶ್ರವಣದೋಷವುಳ್ಳ ಮಕ್ಕಳಿಗೆ ಉಚಿತವಾಗಿ ಶ್ರವಣ ಸಾಧನ ವಿತರಣಾ ಕಾರ್ಯಕ್ರಮವನ್ನು ಅಂತರಾಷ್ಟೀಯ ಕ್ರೀಡಾಪಟು ,ಅರ್ಜುನ ಪ್ರಶಸ್ತಿ ಪುರಸ್ಕೃತರಾದ ರೀತಾ ಅಬ್ರಹಾಂ ಉದ್ಘಾಟಿಸಿದರು.

ವೆಲ್ ನೆಸ್ ಕ್ಲಿನಿಕ್ ಉದ್ಘಾಟಿಸಿ ಮಾತನಾಡಿದ ರೀತಾ ಅಬ್ರಹಾಂ, ಮನುಷ್ಯರಿಗೆ ಕಣ್ಣಿನ ಜೊತೆಯಲ್ಲಿ ಕಿವಿಯೂ ಸಹ ಮುಖ್ಯ. ಎಲ್ಲರು ಮಾತನಾಡುವುದನ್ನು ಕೇಳಬೇಕು ಎಂಬ ಆಸೆ ಎಲ್ಲರಲ್ಲೂ ಇರುತ್ತದೆ .ವಿಜ್ಞಾನ ,ತಂತ್ರಜ್ಞಾನ ಅಭಿವೃದ್ದಿ ಹೊಂದಿದೆ . ಶ್ರವಣ ದೋಷ ಇರುವವರು ಶ್ರವಣ ಸಾಧನ ಬಳಸಿ ಜೀವನದಲ್ಲಿ ಖುಷಿಯಾಗಿರಿ ಎಂದು ಕಿವಿ ಮಾತು ಹೇಳಿದರು.

ವೆಲ್ ನೆಸ್ ಕ್ಲಿನಿಕ್ ನಿರ್ದೇಶಕರಾದ ಕಮಲ್ ಜಿತ್ ಸಿಂಗ್ ಮಾತನಾಡಿ, ಹಿಯರಿಂಗ್ ವೆಲ್ ನೆಸ್ ಕ್ಲಿನಿಕ್ ಯಲಹಂಕ ಮತ್ತು ಆರ್.ಟಿ.ನಗರದಲ್ಲಿ ಶಾಖೆ ಹೊಂದಿದೆ ರಾಜ್ಯದಲ್ಲಿ 17ಕ್ಲಿನಿಕ್ ಹೊಂದಿದೆ. 100ಜನರಿಗೆ ಶ್ರವಣದೋಷವಿದ್ದರೆ ಇಬ್ಬರು ಮಾತ್ರ ಶ್ರವಣ ಸಾಧನ ಬಳಸುತ್ತಾರೆ ಎಂದರು.

ಕಿವಿ ಶಾಶ್ವತವಾಗಿ ಕೇಳಿಸದೇ ಇರುವವರು ನಮ್ಮ ಕ್ಲಿನಿಕ್ ಬಂದರೆ ಶ್ರವಣ ತಜ್ಞರಿಂದ ಪರೀಕ್ಷೆ ಮಾಡಿ ,ಶ್ರವಣ ಸಾಧನ ಕೊಡಲಾಗುತ್ತದೆ. ತಂತ್ರಜ್ಞಾನದಲ್ಲಿ ಮುಂದುವರೆದಿದ್ದು ಎಲ್ಲರಿಗೂ ಮಾತಗಳನ್ನು ಹೇಳುವ ಅವಕಾಶ ಆಧುನಿಕ ತಂತ್ರಜ್ಞಾನದಿಂದ ಲಭಿಸಿದೆ ಎಂದರು.

Leave a Comment

Your email address will not be published. Required fields are marked *

Translate »
Scroll to Top