ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರ ಭಾಷಣ

ಗುಜರಾತ್ ನ ಮಾಉಮಿಯಾ ಧಾಮ್ ಅಭಿವೃದ್ಧಿ ಯೋಜನೆಯ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರ ಭಾಷಣ
“ಭಕ್ತರು ಆಧ್ಯಾತ್ಮಿಕ ಉದ್ದೇಶ ಮತ್ತು ಸಮಾಜ ಸೇವೆಯ ಸದುದ್ದೇಶವನ್ನು ಉತ್ತೇಜಿಸಲು ಕಾರ್ಯೋನ್ಮುಖರಾಗಬೇಕು”ಹೊಸ ಬೆಳೆ ಪದ್ಧತಿಯನ್ನು ಕೈಗೆತ್ತಿಕೊಳ್ಳಲು ಸಾವಯವ ಕೃಷಿ ಪ್ರೇರೇಪಿಸುತ್ತದೆ

ಗುಜರಾತ್ ನ ಉಮಿಯಾ ಮಾತಾ ಧಾಮ್ ದೇವಾಲಯ ಮತ್ತು ದೇವಾಲಯ ಆವರಣದಲ್ಲಿ ಮಾಉಮಿಯಾ ಧಾಮ್ ಅಭಿವೃದ್ಧಿ ಯೋಜನೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ವಿಡಿಯೋ ಕಾನ್ಪರೆನ್ಸ್ ಮೂಲಕ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.ಎಲ್ಲರ ಪ್ರಯತ್ನದಿಂದ ಈ ಮಂಗಳಕರ ಯೋಜನೆಯು ನೆರವೇರಲಿದ್ದು, ಈ ಯೋಜನೆ “ಎಲ್ಲರ ಪ್ರಯತ್ನ” ಎಂಬ ಪರಿಕಲ್ಪನೆಗೆ ಪರಿಪೂರ್ಣ ಉದಾಹರಣೆಯಾಗಿದೆ. ಜನ ಸೇವೆಯೇ ಅತಿದೊಡ್ಡ ಆರಾಧನೆಯಾಗಿರುವುದರಿಂದ ಭಕ್ತಾದಿಗಳು ಆದ್ಯಾತ್ಮಿಕ ಉದ್ದೇಶ ಮತ್ತು ಜನ ಸೇವೆಯ ಸದುದ್ದೇಶವನ್ನು ಉತ್ತೇಜಿಸಲು ಭಾಗಿಯಾಗಬೇಕು ಎಂದು ಹೇಳಿದರು.ಸಂಘಟನೆಯ ಎಲ್ಲಾ ಹಂತಗಳಲ್ಲೂ ಕೌಶಲ್ಯಾಭಿವೃದ್ಧಿ ಅಂಶವನ್ನು ಅಳವಡಿಸಿಕೊಳ್ಳುವಂತೆ ಸಭೆಯನ್ನು ಪ್ರಧಾನಮಂತ್ರಿಯವರು ಕೋರಿದರು. “ಕೌಶಲ್ಯವನ್ನು ಮುಂದಿನ ಪೀಳಿಗೆಗೆ ಪರಂಪರೆಯಾಗಿ ವರ್ಗಾಯಿಸುವ ಕುಟುಂಬ ರಚನೆಯನ್ನು ನಮ್ಮ ಹಳೆಯ ಕಾಲ ಹೊಂದಿತ್ತು. ಇದೀಗ ಸಾಮಾಜಿಕ ಸಂರಚನೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಆದ್ದರಿಂದ ನಾವು ಅದಕ್ಕೆ ಬೇಕಾದ ಕಾರ್ಯವಿಧಾನವನ್ನು ಹೊಂದುವ ಮೂಲಕ ಇದನ್ನು ಸಾಧಿಸಬೇಕಾಗಿದೆ” ಎಂದು ಹೇಳಿದರು. ಭೇಟಿ ಬಚಾವೋ – ಭೇಟಿ ಫಡಾವೋ ಅಭಿಯಾನದ ಸಂದರ್ಭದಲ್ಲಿ ಉಂಜಾ ಗೆ ಭೇಟಿ ನೀಡಿದ್ದನ್ನು ಹಾಗೂ ಆ ಭೇಟಿಯ ಸಂದರ್ಭದಲ್ಲಿ ಹೆಣ್ಣು ಮಕ್ಕಳ ಜನನ ದರದಲ್ಲಿ ಕಡಿದಾದ ಕುಸಿತವಾಗಿತ್ತು ಎಂದು ಹೇಳಿರುವುದನ್ನು ಶ್ರೀ ನರೇಂದ್ರ ಮೋದಿ ಅವರು ಸ್ಮರಿಸಿಕೊಂಡರು. ಜನತೆ ಇದನ್ನು ಸವಾಲಾಗಿ ಸ್ವೀಕರಿಸಿದರು ಮತ್ತು ಇದೀಗ ಗಂಡು ಮಕ್ಕಳಿಗೆ ಸರಿಸಮನಾಗಿ ಹೆಣ್ಣು ಮಕ್ಕಳು ಇದ್ದು, ಪರಿಸ್ಥಿತಿಯಲ್ಲಿ ಗಣನೀಯವಾಗಿ ಸುಧಾರಣೆಯಾಗಿರುವುದಕ್ಕೆ ಜನರಿಗೆ ಧನ್ಯವಾದ ಹೇಳಿದರು. ಇದೇ ಸಂದರ್ಭದಲ್ಲಿ ಮಾಉಮಿಯಾ ಮತ್ತು ಭಕ್ತಾದಿಗಳು ಈ ವಲಯದಲ್ಲಿ ನೀರಿನ ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಪಾಲ್ಗೊಂಡಿರುವುದು ಉತ್ತಮ ಬೆಳವಣಿಗೆಯಾಗಿದೆ. ಅತಿ ದೊಡ್ಡ ಮಟ್ಟದಲ್ಲಿ ಹನಿ ನೀರಾವರಿ ಅಳವಡಿಕೆ ಮಾಡುತ್ತಿರುವುದಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.ಮಾಉಮಿಯಾ ಧಾರ್ಮಿಕ ಮಾರ್ಗದರ್ಶಕನ ಸ್ಥಾನದಲ್ಲಿದ್ದು, ನಮ್ಮ ಭೂಮಿ ನಮ್ಮ ಜೀವನವಾಗಿದೆ. ಮಣ್ಣಿನ ಫಲವತ್ತತೆ ಪರೀಕ್ಷೆ ಮಾಡುವುದನ್ನು ಅಳವಡಿಸಿಕೊಂಡಿರುವುದಕ್ಕೆ ಪ್ರಧಾನಮಂತ್ರಿಯವರು ತೃಪ್ತಿ ವ್ಯಕ್ತಪಡಿಸಿದರು. ಉತ್ತರ ಗುಜರಾತ್ ವಲಯದಲ್ಲಿ ಸಾವಯವ ಕೃಷಿಗೆ ಪರಿವರ್ತನೆ ಹೊಂದುವಂತೆ ರೈತರಿಗೆ ಸಲಹೆ ಮಾಡಿದರು. ಸಾವಯವ ಕೃಷಿ ಶೂನ್ಯ ಬಜೆಟ್ ಕೃಷಿಯಾಗಿದೆ. “ ಆಗಲಿ, ನಿಮಗೆ ನನ್ನ ಮನವಿ ಸೂಕ್ತವಾಗಿಲ್ಲದಿದ್ದರೆ ಪರ್ಯಾಯವನ್ನೂ ಸಹ ಸಲಹೆ ಮಾಡುತ್ತೇನೆ. ನಿಮ್ಮಲ್ಲಿ ಎರಡು ಎಕರೆ ಕೃಷಿ ಭೂಮಿ ಇದ್ದರೆ ಅದರಲ್ಲಿ ಒಂದು ಎಕರೆಯಲ್ಲಿ ಸಾವಯವ ಕೃಷಿ ಮಾಡಿ. ಉಳಿದ ಒಂದು ಎಕರೆಯಲ್ಲಿ ಎಂದಿನಂತೆ ಕೃ಼ಷಿ ಚಟುವಟಿಕೆ ನಡೆಸಿ. ಇದನ್ನು ಮತ್ತೊಂದು ವರ್ಷದವರೆಗೆ ವಿಸ್ತರಿಸಿ. ನಿಮಗೆ ಇದರಿಂದ ಲಾಭವಾಗುವಂತಿದ್ದರೆ ಎರಡೂ ಎಕರೆಯಲ್ಲಿ ಸಾವಯವ ಕೃಷಿ ಚಟುವಟಿಕೆಗೆ ವರ್ಗಾವಣೆಯಾಗುವಂತೆ ಪ್ರಧಾನಮಂತ್ರಿಯವರು ಸಲಹೆ ಮಾಡಿದರು. ಇದರಿಂದ ವೆಚ್ಚ ತಗ್ಗುತ್ತದೆಯಲ್ಲದೇ ನಮ್ಮ ಭೂಮಿಯನ್ನು ಪುನರುಜ್ಜೀವನಗೊಳಿಸಲು ಸಹಕಾರಿಯಾಗಲಿದೆ” ಎಂದು ಮನವಿ ಮಾಡಿದರು. ಡಿಸೆಂಬರ್ 16 ರಂದು ಸಾವಯವ ಕೃಷಿ ಕುರಿತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಕೃಷಿಕರಿಗೆ ಆಹ್ವಾನ ನೀಡಿದರು. ಹೊಸ ಬೆಳೆ ಮತ್ತು ಬೆಳೆ ಪದ್ಧತಿಯನ್ನು ಅಳವಡಿಸಿಕೊಳ್ಳುವಂತೆ ಅವರು ಮನವಿ ಮಾಡಿದರು.

Leave a Comment

Your email address will not be published. Required fields are marked *

Translate »
Scroll to Top