ಅಂಗೈಯಲ್ಲೇ ದೇವಾಲಯ ದರ್ಶನ; ಮುಜರಾಯಿ ಇಲಾಖೆ ದೇಗುಲಗಳಿಗೆ “ಡಿಜಿಟಲ್” ಸ್ಪರ್ಶ

ಮನೆಯಲ್ಲಿ ಕುಳಿತೇ ದೇಗುಲ ದರ್ಶನ..! ವರ್ಚುವಲ್‌ ಟೂರ್‌ ಗೆ ಮುಜರಾಯಿ ಇಲಾಖೆಯಿಂದ ಚಾಲನೆ

ಬೆರಳ ತುದಿಯಲ್ಲಿ ರಾಜ್ಯದ ದೇವಸ್ಥಾನಗಳ ಸಮಗ್ರ ಮಾಹಿತಿ ಸೇವೆಯನ್ನು ಒದಗಿಸುವ ಸಮಗ್ರ ದೇವಾಲಯ ನಿರ್ವಹಣಾ ವ್ಯವಸ್ಥೆ (ITMS)

• ಇನ್ನು ಮುಂದೆ ದೇವಸ್ಥಾನದ ಇತಿಹಾಸ, ವಿಶೇಷತೆ, ವಿಶೇಷ ಆಚರಣೆ, ಉತ್ಸವಗಳು, ಪ್ರತಿಮೆಗಳು ಹಾಗೂ ಮೂರ್ತಿಗಳು, ದೇವಸ್ಥಾನದ ಕೆರೆ, ಗೋಪುರ, ವಾಸ್ತುಶಿಲ್ಪ, ಉಬ್ಬುಶಿಲ್ಪಗಳೂ ಒಳಗೊಂಡಂತೆ ಸಮಗ್ರ ಮಾಹಿತಿಯನ್ನು ತಿಳಿಯಲು ವರ್ಚುವಲ್‌ ಟೂರ್‌ ಮಾಡಬಹುದು.
• ಮುಜರಾಯಿ ಇಲಾಖೆಯ ದೇವಸ್ಥಾನಗಳ ಸರ್ವತೋಮುಖ ನಿರ್ವಹಣೆಗೆ ಅನುಕೂಲವಾಗುವಂತಹ ಬೆಂಗಳೂರು ಹಾಗೂ ಚೆನ್ನೈನ ಎನ್‌ ಐ ಸಿ ತಂಡದಿಂದ ಈ ಮಹತ್ವಾಕಾಂಕ್ಷಿ ಐ ಟಿ ಎಂ ಎಸ್‌ ಗೆ (ಇಂಟಿಗ್ರೇಟೆಡ್‌ ಟೆಂಪಲ್‌ ಮ್ಯಾನೇಜ್‌ಮೆಂಟ್‌ ಸಿಸ್ಟಂ) ವೆಬ್‌ಸೈಟ್‌ ನಿರ್ಮಾಣ ಕಾರ್ಯ ಮಾಡಲಾಗಿದೆ. ಇದು ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಅಸೂಚಿತ ಸಂಸ್ಥೆಗಳಲ್ಲಿ ದೇವಾಲಯದ ಸೇವೆಗಳ ಬಗ್ಗೆ ವಿವರ, ದೇವಾಲಯವಿರುವ ಸ್ಥಳದ ಬಗ್ಗೆ ಮಾಹಿತಿ, ಸ್ಥಿರಾಸ್ತಿಗಳ ವಿವರ, ಆನ್‌ಲೈನ್‌ ಮತ್ತು ಇ-ಸೇವೆಗಳ ಸೌಲಭ್ಯಗಳನ್ನೂ ಹೊಂದಿದೆ.
• ರಾಜ್ಯದ ದೇವಾಲಯಗಳ ಮಾಹಿತಿ ಒಂದೆಡೆ ದೊರೆಯುವುದರಿಂದ ದೇಶ-ವಿದೇಶಗಳಿಂದ ಬರುವ ಭಕ್ತಾಧಿಗಳಿಗೆ ಅನುಕೂಲವಾಗಲಿದೆ. ದೇವಾಲಯಗಳ ಆದಾಯ ವೃದ್ಧಿಗೂ ಇದು ಪೂರಕ.
• ದೇಶದ ಧಾರ್ಮಿಕ ಕ್ಷೇತ್ರಗಳನ್ನು ಸಮಗ್ರ ವಾಗಿ ಅಭಿವೃದ್ಧಿಗೊಳಿಸುವ ಪ್ರಧಾನಿ ನರೇಂದ್ರ ಮೋದಿಯವರ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮುಜರಾಯಿ ಇಲಾಖೆಯು ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ.

ಕರ್ನಾಟಕ ಧಾರ್ಮಿಕವಾಗಿಯೂ ಪ್ರಸಿದ್ಧಿ ಪಡೆದಿರುವ ದಕ್ಷಿಣ ಭಾರತದ ರಾಜ್ಯವಾಗಿದೆ. ನಾಡಿನಾದ್ಯಂತ ಹಲವಾರು ಪುಣ್ಯ ಕ್ಷೇತ್ರಗಳು, ತೀರ್ಥ ಕ್ಷೇತ್ರಗಳು ನೆಲೆಸಿರುವುದನ್ನು ಕಾಣಬಹುದು. ದೇವಾಲಯಗಳು ಪ್ರತಿಯೊಬ್ಬ ಹಿಂದೂವಿಗೆ ಒಂದು ಪವಿತ್ರವಾದ ಸ್ಥಳವಾಗಿದೆ. ಪ್ರತಿನಿತ್ಯ ಭಕ್ತಾದಿಗಳು, ಪ್ರವಾಸಿಗರು ದೇಶದ ಮೂಲೆ ಮೂಲೆಗಳಿಂದ ತಮ್ಮ ಇಷ್ಟ ದೇವರ, ದೇವತೆಯರ ದರುಶನ ಬಯಸಿ ಈ ರಾಜ್ಯಕ್ಕೆ ಭೇಟಿ ನೀಡುತ್ತಲೆ ಇರುತ್ತಾರೆ.
ದೇವಸ್ಥಾನಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿದ್ದು ಪ್ರತಿವರ್ಷ ಜಾತ್ರೆ, ಪುರಾಣ ಪ್ರವಚನ ಮೂಲಕ ಸಮಾಜಕ್ಕೆ ಸಂಸ್ಕಾರ ಕೊಡುತ್ತಿದ್ದು ಆ ದಿಸೆಯಲ್ಲಿ ದೇವಸ್ಥಾನಗಳ ಧಾರ್ಮಿಕ ಕಾರ್ಯಗಳ ಚಟುವಟಿಕೆಗಳು ನಡೆಯುತ್ತಿವೆ. ಸಂಸ್ಕೃತಿ ಹಾಗೂ ಪರಂಪರೆಗಳು ಉಳಿಸಿಕೊಂಡು ಹೋಗುವ ದಿಸೆಯಲ್ಲಿ ದೇವಸ್ಥಾನಗಳನ್ನು ಉಳಿಸಿ ಬೆಳೆಸಿಕೊಳ್ಳುವಂತೆ ಕಾರ್ಯಕ್ಕೆ ರಾಜ್ಯ ಸರಕಾರ ಮುಂದಾಗಿದೆ. ಯಾತ್ರಾ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ರಾಜ್ಯ ಸರಕಾರ ದೈವ ಸಂಕಲ್ಪ ಯೋಜನೆ ಜಾರಿಗೆ ತಂದಿದೆ.


ಐಟಿಎಂಎಸ್ ಯೋಜನೆಯಿಂದ ಒಂದೇ ವೆಬ್‍ಸೈಟ್‍ನಲ್ಲಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಎಲ್ಲಾ ದೇವಾಲಯಗಳ ಸಮಗ್ರ ಮಾಹಿತಿಗಳು ಜನರ ಬೆರಳ ತುದಿಯಲ್ಲೇ ಲಭ್ಯವಿರಲಿವೆ. ಅಲ್ಲದೇ ದೇವಾಲಯಗಳಲ್ಲಿ ಲಭ್ಯವಿರುವ ಸೇವೆಗಳನ್ನು ಆನ್‍ಲೈನ್ ಮೂಲಕ ಬುಕ್ಕಿಂಗ್ ಮಾಡುವ ವ್ಯವಸ್ಥೆ ಇರಲಿದೆ. ದೇವಾಲಯಗಳಲ್ಲಿ ನಡೆಯುವ ಉತ್ಸವ, ಜಾತ್ರೆಗಳು, ಹಬ್ಬ ಹರಿದಿನಗಳ ವಿವರಗಳನ್ನು ಸಾರ್ವಜನಿಕರಿಗೆ/ಭಕ್ತಾಧಿಗಳಿಗೆ ಪಡೆಯಲು ಅನುಕೂಲವಾಗುವಂತೆ ಐಟಿಎಂಎಸ್ ತಂತ್ರಾಂಶದಲ್ಲಿ ಸದರಿ ಮಾಹಿತಿಗಳನ್ನು ಅಪ್ ಲೋಡ್ ಮಾಡುವ ವ್ಯವಸ್ಥೆಯಿದೆ. ದೇವಾಲಯಗಳ ಆಸ್ತಿಗಳ ವಿವರ ಮತ್ತು ಅವುಗಳ ವಹಿವಾಟಿನ ಮಾಹಿತಿಗಳೂ ಇರಲಿವೆ. ಜಗತ್ತಿನ ಯಾವುದೇ ಭಾಗದಿಂದ ಆನ್‍ಲೈನ್ ಮೂಲಕ ಕಾಣಿಕೆಯನ್ನು ಸಲ್ಲಿಸಬಹುದಾಗಿದೆ. ಸರ್ಕಾರದ ಭೂ ದಾಖಲೆಗಳ ದತ್ತಾಂಶದೊಂದಿಗೆ (Bhoomi etc) ಸಂಯೋಜನೆ ಮಾಡಬಹುದಾದ ತಾಂತ್ರಿಕತೆಯನ್ನು ಅಳವಡಿಸಲಾಗಿದೆ. ವಿವಿಧ ರೀತಿಯ MIS ವರದಿಗಳನ್ನು ಪಡೆಯಲು ಅವಕಾಶವಿರುತ್ತದೆ.
ರಾಜ್ಯದಲ್ಲಿ 207ಎ ದರ್ಜೆ, 139ಬಿ ದರ್ಜೆ ದೇಗುಲ ಗಳಿವೆ. ಆದಾಯ ಕಡಿಮೆ 34217ಸಿ ದರ್ಜೆ ದೇಗುಲಗಳಿವೆ. ಈ ದೇವಾಲಯಗಳಲ್ಲಿ ಕೋಟ್ಯಂತರ ರೂ. ಬೆಲೆ-ಬಾಳುವ ಚರ-ಸ್ಥಿರ ಆಸ್ತಿ, ಅತ್ಯಮೂಲ್ಯ ದಾಖಲೆಗಳ ರಕ್ಷಣೆ ಹಾಗೂ ಪಾರದರ್ಶಕ ನಿರ್ವಹಣೆ ದೃಷ್ಟಿಯಿಂದ ಧಾರ್ಮಿಕ ದತ್ತಿ ಇಲಾಖೆಯಲ್ಲಿ ಇ-ಆಫೀಸ್‌ ವ್ಯವಸ್ಥೆ ಅನುಷ್ಠಾನಗೊಳಿಸಲಾಗಿದೆ.

ವರ್ಚುಯಲ್ ಟೆಂಪಲ್ ಟೂರ್ :
ಮನೆಯಲ್ಲಿದ್ದುಕೊಂಡೇ ದೇವಾಲಯಕ್ಕೆ ಪ್ರವಾಸ ಬೇಕಾದರೂ ಹೋಗಬಹುದು..! ಆದರೆ, ಇದು ವರ್ಚುವಲ್‌ ಟೂರ್‌..!ಇನ್ನು ಮುಂದೆ ದೇವಸ್ಥಾನದ ಇತಿಹಾಸ, ವಿಶೇಷತೆ, ವಿಶೇಷ ಆಚರಣೆ, ಉತ್ಸವಗಳು, ಪ್ರತಿಮೆಗಳು ಹಾಗೂ ಮೂರ್ತಿಗಳು, ದೇವಸ್ಥಾನದ ಕೆರೆ, ಗೋಪುರ, ವಾಸ್ತುಶಿಲ್ಪ, ಉಬ್ಬುಶಿಲ್ಪಗಳೂ ಒಳಗೊಂಡಂತೆ ಸಮಗ್ರ ಮಾಹಿತಿಯನ್ನು ತಿಳಿಯಲು ವರ್ಚುವಲ್‌ ಟೂರ್‌ ಮಾಡಬಹುದು.. ಮುಜರಾಯಿ ಇಲಾಖೆಗೆ ಸೇರಿದ ದೇವಾಲಯಗಳಿಗೆ ಭೇಟಿ ನೀಡಲು ಸಾಧ್ಯವಾಗದವರು ತಾವು ಇರುವಲ್ಲಿಯೇ ವರ್ಚುಯಲ್ ಟೆಂಪಲ್ ಟೂರ್ ಮೂಲಕ ದೇವಾಲಯದ ದರ್ಶನ ಮಾಡಬಹುದಾಗಿದೆ. ಇದರಲ್ಲಿ 360 ಡಿಗ್ರಿ ಕೋನದಲ್ಲಿ ದೇವಾಲಯಗಳ ಚಿತ್ರಣ ವೀಕ್ಷಿಸಬಹುದಾಗಿದೆ. ಅಲ್ಲಿನ ವಾಸ್ತುಶಿಲ್ಪ, ವಿನ್ಯಾಸದ ಶೈಲಿ, ಒಳ ಮತ್ತು ಹೊರಾಂಗಣ ಚಿತ್ರಣವನ್ನೂ ನೋಡಬಹುದಾಗಿದೆ.
ಕೋವಿಡ್‌ ಹಿನ್ನೆಲೆಯಲ್ಲಿ ಜನ ಹೊರಗೆ ಹೋಗಲು ಹೆದರುವ ಈ ಸಂದರ್ಭದಲ್ಲಿ ಇಂಥದ್ದೊಂದು ವಿಶೇಷ ಯೋಜನೆಯನ್ನು ಆರಂಭಿಸಲಿದೆ.ದೇವರ ದರ್ಶನ, ಪೂಜಾ ಕೈಂಕರ್ಯ ಸೇರಿದಂತೆ ಧಾರ್ಮಿಕ ಸೇವೆಗಳಿಗೆ ಡಿಜಿಟಲ್‌ ಪ್ಲಾಟ್‌ ಫಾರಂ ಕಲ್ಪಿಸಲಾಗಿದೆ.


ಇಲಾಖೆಗೆ ಸೇರಿದ ಪ್ರತಿ ದೇವಾಲಯಕ್ಕೂ ವೆಬ್ಸೈಟ್ ರಚನೆಯಾಗಿದ್ದು, ಮೊಬೈಲ್ಫೋನ್ನಲ್ಲಿಯೇ ಐಟಿಎಂಎಸ್ನಲ್ಲಿ ಕ್ಲಿಕ್ ಮಾಡಿ ತಮ್ಮ ಆಯ್ಕೆಯ ದೇವಾಲಯಗಳ ಮಾಹಿತಿಯನ್ನು ಪಡೆಯಬಹುದು. ಆನ್ಲೈನ್ ಮೂಲಕ ಬುಕ್ಕಿಂಗ್ ಮಾಡಿ ಹಣ ಪಾವತಿಸಿ ದೇವಾಲಯಗಳಲ್ಲಿ ನಡೆಯುವ ಅರ್ಚನೆ, ವಿಶೇಷ ಪೂಜೆ, ಸೇವೆಗಳನ್ನು ಮಾಡಿಸಬಹುದು. ಹಣ ಪಾವತಿ ಮಾಡಿದ ಕೂಡಲೇ ಎಸ್ಎಂಎಸ್ ಹಾಗೂ ಇ-ಮೇಲ್ ಮೂಲಕ ನೀವು ಮಾಡಿಸುತ್ತಿರುವ ಪೂಜೆ, ಸಮಯ ಸೇರಿ ಸಂಪೂರ್ಣ ವಿವರದೊಂದಿಗೆ ಸಂದೇಶ ರವಾನೆಯಾಗಲಿದೆ. ಇದೇ ಅಲ್ಲದೆ ದೇವಾಲಯ ತಲುಪಲು ಅನುಕೂಲವಾಗುಂತೆ ಆನ್ಲೈನ್ನಲ್ಲಿ ನಕ್ಷೆಯನ್ನೂ ಒದಗಿಸಲಿದ್ದು, ಇದಕ್ಕಾಗಿ ಜಿಐಎಸ್ (ಜಿಯೋಗ್ರಾಫಿಕ್ ಇನ್ಫಾರ್ಮೇಷನ್ ಸಿಸ್ಟಮ್ ) ವ್ಯವಸ್ಥೆ ಜಾರಿಗೊಳಿಸಲಾಗಿದೆ.

ವರದಿ: ಡಾ. ವರ ಪ್ರಸಾದ್ ರಾವ್ ಪಿ ವಿ

Leave a Comment

Your email address will not be published. Required fields are marked *

Translate »
Scroll to Top