ಶ್ರವಣದೋಷದ ಪರಿಹಾರ ಲೋಕ “ಬ್ರಿಲಿಯಂಟ್ ಸೌಂಡ್ ಗ್ಯಾಲೆಕ್ಸಿ” ಉದ್ಘಾಟಿಸಿದ ಚಿತ್ರನಟಿ ಸುಧಾರಾಣಿ:

: ಗ್ರಾಹಕರಿಗೆ ತಮಗೆ ಬೇಕಾದ ಪರಿಕರಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ

ಬೆಂಗಳೂರು: ಶ್ರವಣದೋಷದ ಬಗ್ಗೆ ತಕ್ಷಣವೇ ಪರಿಹಾರ ಪಡೆಯಲು ಸಂವಾದಾತ್ಮಕ ಪರಿಕಲ್ಪನೆಯ ವಿನೂತನ, ಅತ್ಯಾಧುನಿಕ “ಬ್ರಿಲಿಯಂಟ್ ಸೌಂಡ್ ಗ್ಯಾಲೆಕ್ಸಿ[ಬಿ.ಎಸ್.ಜಿ]” ಶ್ರವಣದೋಷ ಪರಿಕರಗಳ ಮಳಿಗೆ ನಗರದ ಹೆಣ್ಣೂರು – ಬಾಗಲೂರು ಮುಖ್ಯರಸ್ತೆಯ ಕೊತ್ತನೂರಿನಲ್ಲಿ ಆರಂಭವಾಗಿದೆ.

ಶ್ರವಣ ಸಾಧನ ಉದ್ಯಮದಲ್ಲಿ ಮುಂಚೂಣಿಯಲ್ಲಿರುವ ಸಿಗ್ನಿಯಾ ವೆಲ್ ನೆಸ್ ಕ್ಲಿನಿಕ್ ಸಹಯೋಗದೊಂದಿಗೆ ಆರಂಭಿಸಲಾಗಿರುವ ಬ್ರಿಲಿಯಂಟ್ ಸೌಂಡ್ ಗ್ಯಾಲೆಕ್ಸಿ ಲೋಕವನ್ನು ಚಿತ್ರನಟಿ ಸುಧಾರಾಣಿ ಉದ್ಘಾಟಿಸಿದರು. 1983 ರ ವಿಶ್ವಕಪ್ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ, ವಿಕೇಟ್ ಕೀಪರ್ ಸಯ್ಯದ್ ಕಿರ್ಮಾನಿ, ಸಿವಂತೋಸ್ ಇಂಡಿಯಾ ಪ್ರವೈಟ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅವಿನಾಶ್ ಪವಾರ್, ಹಿಯರಿಂಗ್ ವೆಲ್ ನೆಸ್ ಕ್ಲಿನಿಕ್ ನ ಮಾಲೀಕರು ಮತ್ತು ವ್ಯವಸ್ಥಾಪಕ ನಿರ್ದೇಶಕ ಕಮಲ್ಜೀತ್ ಸಿಂಗ್ ಉಪಸ್ಥಿತರಿದ್ದರು.

ಇಲ್ಲಿ ವೈದ್ಯರು ಸೂಚಿಸುವ ಶ್ರವಣ ಸಾಧನಗಳನ್ನು ಬಳಸುವ ಅನಿವಾರ್ಯತೆ ಇಲ್ಲ. ಗ್ರಾಹಕರು ಪರಿಕರಗಳ ಬಗ್ಗೆ ಸಂವಾದ ನಡೆಸುತ್ತಾ ತಮಗೆ ಬೇಕಾದ ಶ್ರವಣ ಸಾಧನವನ್ನು ಧರಿಸಿ ತಮಗೆ ಒಪ್ಪುವುದನ್ನು ಆಯ್ಕೆ ಮಾಡಿಕೊಳ್ಳುವ, ವಿವಿಧ ಪರಿಕರಗಳನ್ನು ನೋಡುವ, ಮಾಹಿತಿ ಪಡೆಯುವ, ಕೇಳುವ ಸಮಾರ್ಥ್ಯವನ್ನು ಹೆಚ್ಚಿಸಿಕೊಳ್ಳುವ ವಿನೂತನ ಪ್ರಪಂಚ ಇದಾಗಿದೆ. ಅತ್ಯಂತ ಗುಣಮಟ್ಟದ ಮತ್ತು ಅತ್ಯಾಧುನಿಕ ಶ್ರವಣ ಸಾಧನ ಪರಿಕರಗಳು ಬ್ರಿಲಿಯಂಟ್ ಸೌಂಡ್ ಗ್ಯಾಲೆಕ್ಸಿಯಲ್ಲಿವೆ. ಬಿ.ಎಸ್.ಜಿ. ಶ್ರವಣ ಅನುಭವಗಳು, ಸಾಂಪ್ರಾಯಿಕ ಆವಿಷ್ಕಾರಗಳು, ಉತ್ಪನ್ನಗಳು ಮತ್ತು ಸೇವೆಗಳು ಒಂದೇ ಸೂರಿನಡಿ ದೊರೆಯಲಿವೆ.

ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ ಭಾರತದಲ್ಲಿ ಸುಮಾರು 63 ದಶಲಕ್ಷ ಜನ ಶ‍್ರವಣದೋಷ ಸಮಸ್ಯೆ ಹೊಂದಿದ್ದು, ಈ ಪ್ರಮಾಣ ಶೇ 6.3 ರಷ್ಟಿದೆ. ಶ್ರವಣದೋಷ ಇಂದು ಸಾಮಾನ್ಯ ಸಂವೇದನಾ ಕೊರತೆಯಾಗಿದೆ. ಶ್ರವಣ ನಷ್ಟ ಸಾಮಾಜಿಕ, ದೈಹಿಕ ಮತ್ತು ಮಾನಸಿಕ ಪರಿಣಾಮಗಳನ್ನು ಬೀರುತ್ತದೆ.

ಇಂಡಿಯಾ ಪ್ರವೈಟ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅವಿನಾಶ್ ಪವಾರ್ ಮಾತನಾಡಿ, ಶ್ರವಣ ದೋಷ ಕುರಿತು ಇಂದಿನ ಕಾಲಘಟ್ಟದಲ್ಲಿ ಪರಿಕಲ್ಪನೆಗಳನ್ನು ಪುನರ್ ನಿರ್ಮಾಣ ಮಾಡುವ ಅಗತ್ಯವಿದೆ. ಗ್ರಾಹಕರು ತಮ್ಮದೇ ಆದ ನಿರ್ಧಾರ ತೆಗೆದುಕೊಳ್ಳಲು ಇಂತಹ ವಿನೂತನ ಉಪಕ್ರಮಗಳಿಂದ ಸಹಕಾರಿಯಾಗಲಿದೆ. ಶ್ರವಣದೋಷ ಪರಿಹರಿಸುವ ಈ ಯಾನದಲ್ಲಿ ಅತ್ಯುತ್ತಮ ವಿನ್ಯಾಸಗಳನ್ನು ಪಡೆಯಲು ಇದೀಗ ಸಾಧ್ಯವಾಗಿದೆ ಎಂದರು.

Leave a Comment

Your email address will not be published. Required fields are marked *

Translate »
Scroll to Top