ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಮಹಿಳಾ ಸಮಾವೇಶ,ಕಾನೂನು ಅರಿವು ಕಾರ್ಯಕ್ರಮ,ಸ್ವ-ಸಹಾಯ ಗುಂಪುಗಳು ಉತ್ಪಾದಿಸಿ ಉತ್ಪನ್ನಗಳ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳ


ಮಹಿಳಾ ಸಬಲೀಕರಣ,ಮಹಿಳಾ ಶಕ್ತಿ ಉತ್ತೇಜನಕ್ಕೆ ವಿಶೇಷ ಒತ್ತು: ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು
ಬಳ್ಳಾರಿ: ಮಹಿಳೆಯ ಸಬಲೀಕರಣಕ್ಕೆ ಮತ್ತು ಮಹಿಳಾ ಶಕ್ತಿಯ ಉತ್ತೇಜನಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿಶೇಷ ಒತ್ತು ನೀಡುತ್ತಿವೆ ಎಂದು ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಹೇಳಿದರು.
ಜಿಲ್ಲಾಡಳಿತ,ಜಿಪಂ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ,ಕರ್ನಾಟಕ ರಾಜ್ಯ ಮಹಿಳಾ ಆಯೋಗ,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಂಯುಕ್ತ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸಮಾವೇಶ ನಿಮಿತ್ತ ನಗರದ ವಾಲ್ಮೀಕಿ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಮಹಿಳಾ ಸಮಾವೇಶ,ಕಾನೂನು ಅರಿವು ಕಾರ್ಯಕ್ರಮ,ಸ್ವ-ಸಹಾಯ ಗುಂಪುಗಳು ಉತ್ಪಾದಿಸಿ ಉತ್ಪನ್ನಗಳ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರ ಸುರಕ್ಷತೆ ಮತ್ತು ಆರ್ಥಿಕತೆ ಹಾಗೂ ಅವರ ಸಬಲೀಕರಣವೇ ನಮ್ಮ ಸರ್ಕಾರದ ಪ್ರಮುಖ ಅದ್ಯತೆಗಳಲ್ಲಿ ಒಂದಾಗಿದ್ದು, ಇದಕ್ಕಾಗಿ ವಿವಿಧ ಯೋಜನೆಗಳಿಗೆ ರೂ.43,188 ಕೋಟಿಯನ್ನ ಬಜೆಟ್‍ನಲ್ಲಿ ಕಾಯ್ದಿರಿಸಲಾಗಿದೆ ಎಂದರು.


ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಹಿಳಾಪರ ಮತ್ತು ಮಹಿಳೆಯ ಸಬಲೀಕರಣ ಬಜೆಟ್ ಅನ್ನು ಮಂಡಿಸಿದ್ದಾರೆ. ನಮ್ಮ ಹೆಣ್ಣು ಮಕ್ಕಳಿಗೆ ಸಮಾನತೆಯ ಉತ್ತಮ ನಾಳೆಯನ್ನು ಕಟ್ಟುವ ಕೆಲಸ ನಮ್ಮ ಸರ್ಕಾರ ಇಂದು ಬಜೆಟ್ ಮೂಲಕ ಮಾಡಿದೆ. ಒಂದು ಮಹಿಳಾಪರ, ಮಹಿಳಾ ಸಬಲೀಕರಣ ಹಾಗೂ ಸಮಾನತೆಯ ಬಜೆಟ್ ಆಗಿದೆ ಎಂದರು.
ಈ ವರ್ಷದಿಂದ ಮಹಿಳೆಯರಿಗೆ ಪ್ರತ್ಯೇಕ ಕೃಷಿ ಪ್ರಶಸ್ತಿ ಮತ್ತು ಕೃಷಿ ಪಂಡಿತ ಪ್ರಶಸ್ತಿ ಆರಂಭಿಸಲಾಗಿದೆ. ಮಹಿಳಾ ಶಕ್ತಿ ಸಾವಿತ್ರಿ ಭಾಯಿ ಪುಲೆಯವರ ಹೆಸರಿನಲ್ಲಿ ಆದರ್ಶ ಶಿಕ್ಷಕಿ ಪ್ರಶಸ್ತಿ ಆರಂಭಿಸಲಾಗಿದೆ. 300 ಮಹಿಳಾ ಸ್ವಾಸ್ಥ್ಯ ಕೇಂದ್ರಗಳನ್ನ ಸ್ಥಾಪಿಸಲಾಗಿದೆ. ಮಹಿಳಾ ಉದ್ಯಮಿಗಳನ್ನು ಉತ್ತೇಜಿಸಲು (ಧೈರ್ಯ ನೀಡಲು) ಮಹಿಳೆಯರು ಆರಂಭಿಸಿರುವ ಸ್ಟಾರ್ಟ್‍ಅಪ್‍ಗಳಿಗೆ 10 ಲಕ್ಷ ನೇರ ಸಾಲ ಕೊಡೋ ಯೋಜನೆ ತರಲಾಗಿದೆ. 18 ವರ್ಷ ಪೂರೈಸಿದ ಮಹಿಳೆಯರಿಗೆ ಶಿಕ್ಷಣ ಮತ್ತು ಕೌಶಲ್ಯ ತರಬೇತಿ ನೀಡಲು 8 ಕೇಂದ್ರಗಳನ್ನ ಪ್ರಾಯೋಗಿಕವಾಗಿ ಸ್ಥಾಪಿಸಲಾಗಿದೆ ಎಂದು ಅವರು ತಿಳಿಸಿದರು.


ಸಮಾಜಕಲ್ಯಾಣ ಇಲಾಖೆ ಯೋಜನೆಗಳಲ್ಲಿ ಮೊದಲ ಬಾರಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮಹಿಳೆಯರಿಗೆ ಶೇ.25ರಷ್ಟು ಮೀಸಲಾತಿಯನ್ನು ಸರಕಾರ ತಂದಿದೆ ಎಂದು ಹೇಳಿದ ಸಚಿವ ಶ್ರೀರಾಮುಲು ಅವರು ಪರಿಶಿಷ್ಟರ 300 ಮಹಿಳಾ ಪಧವಿದರರಿಗೆ ಪ್ರತಿಷ್ಠಿತ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್‍ನಲ್ಲಿ ತರಬೇತಿ ಒದಗಿಸುವ ಯೋಜನೆ ಕೂಡ ಘೋಷಣೆ ಆಗಿದೆ ಎಂದು ಅವರು ಹೇಳಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಅಲ್ಪ ಸಂಖ್ಯಾತರ ಕಾರ್ಯನಿರತ ಮಹಿಳೆಯರಿಗೆ ಬೆಂಗಳೂರು,ಮೈಸೂರು, ಹುಬ್ಬಳ್ಳಿ ಕಲಬುರ್ಗಿ, ನಗರಗಳಲ್ಲಿ ಹಾಸ್ಟೆಲ್ ಗಳ ನಿರ್ಮಾಣ ಮತ್ತು 3 ಲಕ್ಷ ಹೆಣ್ಣುಮಕ್ಕಳಿಗೆ ಆತ್ಮರಕ್ಷಣೆ ತರಬೇತಿ ನೀಡಲಾಗುವುದು ಎಂದರು. ಆಸಿಡ್ ದಾಳಿಗೆ ಒಳಗಾದವರಿಗೆ ಮಾಶಾಸನ 3 ಸಾವಿರದಿಂದ 10 ಸಾವಿರಕ್ಕೆ ಏರಿಸುವ ನಿರ್ಧಾರ ಕೈಗೊಳ್ಳಲಾಗಿದೆ ಹಾಗೂ ಮಹಿಳಾ ಸ್ವಸಹಾಯ ಸಂಘಗಳಿಗೆ ಹಲವು ಯೋಜನೆಗಳನ್ನ ರೂಪಿಸಲಾಗಿದೆ ಎಂದರು.
ಮನೆ ಕಟ್ಟುವ ಮಹಿಳೆಯರು ಇಂದು ದೇಶ ಕಟ್ಟುತ್ತಿದ್ದಾರೆ, ಏಕೆಂದರೆ ಇವತ್ತು ದೇಶಕ್ಕೆ ಬಜೆಟ್ ಕೊಟ್ಟಿದ್ದು ಒಬ್ಬ ಮಹಿಳೆ, ಇನ್ಫೋಸಿಸ್ ನ ಸುಧಾಮೂರ್ತಿ, ಬಯೋಕಾನ್‍ನ ಕಿರಣ್ μÁ ಅವರು ಸೇರಿದಂತೆ ಅನೇಕ ಮಹಿಳೆಯರು ಸಾಧನೆಯ ಮೂಲಕ ಮಾದರಿಯಾಗಿದ್ದಾರೆ ಎಂದರು.
ಭಾರತದಲ್ಲಿ ಹೆಣ್ಣಿಗೆ ಪೂಜ್ಯನೀಯ ಸ್ಥಾನ: ಹೆಣ್ಣೆಂದರೆ ಸಹನೆ, ಹೆಣ್ಣೆಂದರೆ ಸಮಾಧಾನ, ಹೆಣ್ಣೆಂದರೆ ನ್ಯಾಯ-ನೀತಿ, ಧರ್ಮ-ಸಮ್ಮಾನ, ತ್ಯಾಗ-ಬಲಿದಾನ, ಧೈರ್ಯ-ಸಾಹಸಗಳ ಪ್ರತೀಕ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಅವರು ಬಣ್ಣಿಸಿದರು.
ಭವ್ಯ ಭಾರತವನ್ನು ನಾವು “ಭಾರತಾಂಬೆ” ಎನ್ನುತ್ತೇವೆ, ಕೋರ್ಟಿನಲ್ಲಿ ನ್ಯಾಯ ಕೊಡೋ ದೇವರಿಗೆ “ನ್ಯಾಯದೇವತೆ” ಎನ್ನುತ್ತೇವೆ, ಜಗತ್ತಿಗೆ ಅನ್ನ ನೀಡೋ ಭೂಮಿಗೆ “ಭೂತಾಯಿ” ಎನ್ನುತ್ತೇವೆ. ಅಂಬೆ, ದೇವತೆ, ತಾಯಿ ಹೀಗೆ ನಮ್ಮ ಸಮಾಜದಲ್ಲಿ ಅತ್ಯುನ್ನತ ಸ್ಥಾನ ಯಾರಿಗಾದರೂ ಇದೆ ಎಂದರೆ ಅದು ಹೆಣ್ಣಿಗೆ ಮಾತ್ರ.
ನಾವು ನ್ಯಾಯ ದೇವ, ಭೂಮಿ ದೇವ, ಅನ್ನೋಲ್ಲ, ಭಾರತಾಂಬೆ, ಭೂತಾಯಿ, ನ್ಯಾಯದೇವತೆ ಎನ್ನುತ್ತೇವೆ ಕಾರಣ ತಾಯಿಯ ಅಥವಾ ಹೆಣ್ಣಿನ ಶ್ರೇಷ್ಠ ಗುಣಗಳಾಗಿವೆ ಎಂದರು.


ಮಹಿಳೆ ಇಂದು ಎಲ್ಲ ಕ್ಷೇತ್ರಗಳಲ್ಲೂ ತನ್ನ ಛಾಪೂ ಮೂಡಿಸಿದ್ದಾಳೆ ಎಂದರು.
ಮಹಿಳೆಯರ ಸಬಲೀಕರಣಕ್ಕೆ ನಮ್ಮ ಸರ್ಕಾರ ಸದಾ ಬದ್ಧ ಎಂದು ಹೇಳಿದ ಸಚಿವ ಶ್ರೀರಾಮುಲು ಅವರು “ನೀವಿದ್ದರೇನೆ ನಾವು, ನೀವಿದ್ದರೇನೆ ಊರು, ನೀವಿದ್ದರೇನೆ ದೇಶ..ನೀವಿಲ್ಲದೆ ಏನು ಇಲ್ಲ” ಎಂದರು.
ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಗರ್ಭೀಣಿ ಸ್ತ್ರೀಯರಿಗೆ ಉಡಿ ತುಂಬಿ ಗೌರವಿಸಲಾಯಿತು. ಕೆಳದಿ ಚನ್ನಮ್ಮ ಪ್ರಶಸ್ತಿ ಮತ್ತು ಹೋಯ್ಸಳ ಪ್ರಶಸ್ತಿ ಪುರಸ್ಕøತರಾದ ಅಸಾಧಾರಣಾ ಬಾಲಪ್ರತಿಭೆಗಳಿಗೆ,ಐಸಿಡಿಎಸ್ ಯೋಜನೆಯನ್ನು ಸಮರ್ಪಕವಾಗಿ ಫಲಾನುಭವಿಗಳಿಗೆ ತಲುಪಿಸಿದ ಅಂಗನವಾಡಿ ಕಾರ್ಯಕರ್ತೆಯರಿಗೆ “ಉತ್ತಮ ಅಂಗನವಾಡಿ’’ಕಾರ್ಯಕರ್ತೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಭಾಗ್ಯಲಕ್ಷ್ಮೀ ಬಾಂಡ್‍ಗಳನ್ನು, ಉದ್ಯೋಗಿನಿ ಯೋಜನೆ ಅಡಿ ಸೌಲಭ್ಯ ಪಡೆದ ಫಲಾನುಭವಿಗಳಿಗೆ ಸಹಾಯಧನದ ಚೆಕ್‍ಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು. ವಿಶೇಷ ಸಾಧನೆಗೈದ ಮಹಿಳೆಯರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ವಾಲ್ಮೀಕಿ ಭವನದ ಆವರಣದಲ್ಲಿ ವಿಕಲಚೇತನರ ಸಬಲೀಕರಣ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ವತಿಯಿಂದ ವಿಕಲಚೇತನರಿಗೆ ತ್ರಿಚಕ್ರ ವಾಹನಗಳನ್ನು ಸಚಿವ ಶ್ರೀರಾಮುಲು ಅವರು ವಿತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ,ಜಿಪಂ ಸಿಇಒ ಕೆ.ಆರ್.ನಂದಿನಿ,ಎಸ್ಪಿ ಸೈದುಲು ಅಡಾವತ್, ಬುಡಾ ಅಧ್ಯಕ್ಷ ಪಾಲನ್ನ, ಎಪಿಎಂಸಿ ಅಧ್ಯಕ್ಷ ಉಮೇಶ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾಗರಾಜ ಸೇರಿದಂತೆ ಇತರರರು ಇದ್ದರು.

Leave a Comment

Your email address will not be published. Required fields are marked *

Translate »
Scroll to Top