“ಅಸ್ಮಿತೆ” – ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟಿಸಿದ ಡಾ. ಶಾಲಿನಿ ರಜನೀಶ್

ಬೆಂಗಳೂರು : ಕರ್ನಾಟಕ ರಾಜ್ಯ ರಾಷ್ಟ್ರೀಯ ಜೀವನೋಪಾಯ ಅಭಿಯಾನ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾದ ಮಹಿಳಾ ಸ್ವ-ಸಹಾಯ ಗುಂಪುಗಳ ಕರಕುಶಲ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ – ಅಸ್ಮಿತೆಯನ್ನು ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತರಾದ ಡಾ. ಶಾಲಿನಿ ರಜನೀಶ್ ಅವರು ಉದ್ಘಾಟಿಸಿದರು.

 

ರಾಜ್ಯಾದ್ಯಂತ ಇರುವ ಮಹಿಳಾ ಸ್ವ – ಸಹಾಯ ಗುಂಪುಗಳು ತಯರಿಸಿರುವ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಜನವರಿ 22 ರಿಂದ 24ರ ವರೆಗೆ (3 ದಿನಗಳು) ಬೆಳಿಗ್ಗೆ 10.30 ರಿಂದ ರಾತ್ರಿ 9.30 ಗಂಟೆಯ ವರೆಗೆ ಬೆಂಗಳೂರಿನ ಐ.ಎ.ಎಸ್ ಅಧಿಕಾರಿಗಳ ಅಸೋಸಿಯನ್‍ನಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಪ್ರದರ್ಶನ ಮೇಳದಲ್ಲಿ ಮಹಿಳಾ ಸ್ವ-ಸಹಾಯ ಗುಂಪುಗಳು ತಮ್ಮ ಆರ್ಥಿಕ ಸದೃಡತೆಗಾಗಿ ತಯಾರಿಸಲಾದ ಉತ್ಪನ್ನಗಳ ಪ್ರದರ್ಶನದೊಂದಿಗೆ ಮಾರಾಟವನ್ನು ಸಹ ಮಾಡಲಾಗುವುದು.

ಈ ಮೇಳದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 58 ಮಹಿಳಾ ಸ್ವ ಸಹಾಯ ಗುಂಪುಗಳು ಭಾಗವಹಿಸಿವೆ. ಬೀದರ್‍ನ ರಾಜ್ ಬಿದ್ರಿ ಸ್ವ ಸಹಾಯ ಸಂಘದ ಬಿದ್ರಿ ಉತ್ಪನ್ನಗಳು, ಸಮೃದ್ಧಿ ಸಂಜೀವಿನಿ   ಸ್ವ-ಸಹಾಯ ಸಂಘದ ಟೆರಕೋಟ ಪ್ಲ್ಯಾಂಟ್, ಚನ್ನಪಟ್ಟಣದ ಶಾರದಾದೇವಿ ಸ್ವ-ಸಹಾಯ ಸಂಘದ ಚನ್ನಪಟ್ಟಣ ಗೊಂಬೆಗಳು, ಮಹಾಲಕ್ಷ್ಮಿ ಸ್ವ-ಸಹಾಯ ಸಂಘದ ಟೆರಕೋಟ ವಸ್ತುಗಳು, ಪಾರ್ವತಿ ಪರಮೇಶ್ವರ ಸ್ವ-ಸಹಾಯ ಸಂಘದ ಇಳಕಲ್ ಸೀರೆಗಳು, ಬನಶಂಕರಿ ಸ್ವ-ಸಹಾಯ ಸಂಘದ ತಿಪಟೂರು ಸೀರಿಗಳು, ಶಾರದಾಂಭ ಸ್ವ-ಸಹಾಯ ಸಂಘದ ಕೊಡೊಯಾಲ ಸೀರೆ, ಲಕ್ಷ್ಮೀ ಸ್ವ-ಸಹಾಯ ಸಂಘದ ಮೊಳಕಾಲ್ಮೂರು ರೇಷ್ಮೆ ಸೀರೆ, ಮುತ್ಯಾಲಮ್ಮ ಸ್ವ-ಸಹಾಯ ಸಂಘದ ದೊಡ್ಡಬಳ್ಳಾಪುರ ಸೀರೆ, ಚೇತನ    ಸ್ವ-ಸಹಾಯ ಸಂಘದ ಪರವಲೂಮ್ ಸೀರೆ (ಹ್ಯಾಂಡ್‍ಮೇಡ್ ಕಾಟನ್ ಮತ್ತು ಎಂಬ್ರೆಡರಿ), ಯುನಿವರ್ಸ್ ಸ್ವ-ಸಹಾಯ ಸಂಘದ ಗದ್ವಾಲ ಸೀರೆ, ಶ್ರೀ ಸೌಮ್ಯ ಕೇಶವ ಸ್ತ್ರೀ ಶಕ್ತಿ ಸ್ವ-ಸಹಾಯ ಸಂಘದ ಕಲ್ಲೂರು ಸೀರೆ, ಶ್ರೀ ಕೋಟೇಶ್ವರ ಸ್ವ ಸಹಾಯ ಸಂಘದ ಶಿಗ್ಲಿ ಸೀರೆ, ರಾಘವೇಂದ್ರಸ್ವಾಮಿ ಸಂಜೀವಿನಿ ಸ್ವ-ಸಹಾಯ ಸಂಘದ ಕುದೂರ್ ಸೀರೆ, ರಾಮಾಬಾಯಿ ಅಂಬೇಡ್ಕರ್ ಸ್ವ-ಸಹಾಯ ಸಂಗದ ಮಕ್ಕಳ ಉಡುಪು, ಮಹಾದೇವಿ ಸಂಜೀವಿನಿ ಸ್ವ-ಸಹಾಯ ಸಂಘದ ಲಂಬಾಣಿ ಉತ್ಪನ್ನಗಳು, ಬಿಸ್ಮಿಲ್ಲಾ ಸ್ವ-ಸಹಾಯ ಸಂಘದ ಕೌದಿ, ಅನ್ನಪೂರ್ಣೇಶ್ವರಿ ಸ್ವ-ಸಹಾಯ ಸಂಘದ ಅರೆಕಾ ತಟ್ಟೆ (ಪ್ಲೇಟ್), ಚಿನ್ನಯಿ ಸ್ತ್ರೀ ಶಕ್ತಿ ಸ್ವ-ಸಹಾಯ ಸಂಘದ ಬ್ಯಾಗ್ಸ್, ದಾನೇಶ್ವರಿ ಸ್ವ-ಸಹಾಯ ಸಂಘದ ಖಾದಿ ಸೀರೆಗಳು, ಚಾಮುಂಡೇಶ್ವರಿ ಸ್ವ-ಸಹಾಯ ಸಂಘದ ಕಾಟನ್ ಕ್ಲಾತ್ ಉತ್ಪನ್ನಗಳು, ದುರ್ಗ ಸ್ತ್ರೀ ಶಕ್ತಿ ಸ್ವ-ಸಹಾಯ ಸಂಘದ ಚರಕ, ಶ್ರೀ ಶಾರದ ಮಹಿಳಾ      ಸ್ವ ಸಹಾಯ ಸಂಘದ ಜ್ಯೂಟ್ ಬ್ಯಾಗ್ ವಿವಿಧ ಮಹಿಳಾ ಸ್ವ-ಸಹಾಯ ಗುಂಪುಗಳು ಉತ್ಪಾದಿಸಿರುವ ವಿವಿಧ ಉತ್ಪನ್ನಗಳ ಪ್ರದರ್ಶನದ ಜೊತೆಗೆ ಮಾರಾಟವನ್ನು ಸಹ ಮಾಡಲಾಗುವುದು.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top