ಆಕಾಶವಾಣಿಯಲ್ಲಿ ಹಂಗಾಮಿ ಸಂಪಾದಕರು, ಸುದ್ದಿ ವಾಚಕರ ಹುದ್ದೆಗಾಗಿ ಅರ್ಜಿ ಆಹ್ವಾನ

ಬೆಂಗಳೂರು : ಬೆಂಗಳೂರು ಆಕಾಶವಾಣಿಯ ಪ್ರಾದೇಶಿಕ ಸುದ್ದಿ ವಿಭಾಗದಲ್ಲಿ ಖಾಲಿ ಇರುವ ಸಾಂದರ್ಭಿಕ ಸುದ್ದಿ ಸಂಪಾದಕರು ಹಾಗೂ ಸಾಂದರ್ಭಿಕ ವಾರ್ತಾ ವಾಚಕರು-ಅನುವಾದಕರ ಹುದ್ದೆಗಳಿಗೆ, 21 ರಿಂದ 50 ವರ್ಷಗಳ ಒಳಗಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಸಾಂದರ್ಭಿಕ ಸುದ್ದಿ ಸಂಪಾದಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನ್ನಡ ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು. ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು ಮತ್ತು ಪತ್ರಿಕೋದ್ಯಮದಲ್ಲಿ ಪದವಿ ಅಥವಾ ಕನಿಷ್ಠ ಒಂದು ವರ್ಷದ ಡಿಪ್ಲೊಮಾ ಪೂರ್ಣಗೊಳಿಸಿರಬೇಕು. ಪತ್ರಿಕೋದ್ಯಮ ಡಿಗ್ರಿ ಅಥವಾ ಡಿಪ್ಲೊಮಾ ಇಲ್ಲದಿದ್ದಲ್ಲಿ ಮುದ್ರಣ ಮಾಧ್ಯಮ ಅಥವಾ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರರಾಗಿ ಅಥವಾ ಸುದ್ದಿ ಸಂಪಾದಕರಾಗಿ 5 ವರ್ಷ ಅನುಭವ ಹೊಂದಿರಬೇಕು.

 

ಸಾಂದರ್ಭಿಕ ವಾರ್ತಾ ವಾಚಕರು-ಅನುವಾದಕರ ಹುದ್ದೆಗೆ ಅರ್ಜಿ ಸಲ್ಲಿಸಲು ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಕನ್ನಡ ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು. ಪ್ರಸಾರಕ್ಕೆ ಯೋಗ್ಯವಾದಂತಹ ಧ್ವನಿ ಹೊಂದಿರಬೇಕು.

 

ಸಾಂದರ್ಭಿಕ ಸುದ್ದಿ ಸಂಪಾದಕರು ಮತ್ತು ಸುದ್ದಿ ವಾಚಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಇಂಗ್ಲಿಷ್‍ನಿಂದ ಕನ್ನಡ ಭಾಷೆಗೆ ಅನುವಾದಿಸುವ ಸಾಮಥ್ರ್ಯವನ್ನು ಕಡ್ಡಾಯವಾಗಿ ಹೊಂದಿರಬೇಕು.

 

ಈ ಎರಡೂ ಹುದ್ದೆಗಳಿಗೆ ರೇಡಿಯೋ ಅಥವಾ ದೂರದರ್ಶನದಲ್ಲಿ ಕೆಲಸ ಮಾಡಿದ ಅನುಭವ, ಕಂಪ್ಯೂಟರ್ ಜ್ಞಾನ ಉಳ್ಳವರಿಗೆ ಹಾಗೂ ಬೆಂಗಳೂರಿನಲ್ಲಿ ನೆಲೆಸಿರುವವರಿಗೆ ಪ್ರಾಶಸ್ತ್ಯ ನೀಡಲಾಗುವುದು. ಅರ್ಹ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

 

ಸಾಮಾನ್ಯ ವರ್ಗದ ಅಭ್ಯರ್ಥಿಗಳು 354 ರೂಪಾಯಿ (18% ಜಿಎಸ್‍ಟಿ ಸೇರಿದಂತೆ) ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳು 266 ರೂಪಾಯಿ (18% ಜಿಎಸ್‍ಟಿ ಸೇರಿದಂತೆ) ಮೊತ್ತದ ಡಿಮ್ಯಾಂಡ್ ಡ್ರಾಫ್ಟ್ ಅನ್ನು Station Director, All India Radio, Bengaluru ಹೆಸರಿನಲ್ಲಿ ಪಡೆದು ಅರ್ಜಿಯೊಂದಿಗೆ ಲಗತ್ತಿಸಬೇಕು.

 

The Deputy Director General (E), (Attn. Regional News Unit,) All India Radio,

 

 

 Raj Bhavan Road, Bengaluru-560001 560001 ಇಲ್ಲಿಗೆ 31/01/2024ರ ಒಳಗೆ ಕಳುಹಿಸಬೇಕು.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top