ವಿವಿಧ ಬೇಡಿಕೆಗಳ ಈಡೇರಿಸಲು ಸಚಿವರಿಗೆ ಮನವಿ

ಬಳ್ಳಾರಿ: ರಾಜ್ಯದಲ್ಲಿರುವ  ಕರ್ನಾಟಕ ಗ್ರಾಮೀಣ ಬ್ಯಾಂಕ್‌ಗಳಲ್ಲಿ ರೈತರು ಪಡೆದ ಸಾಲದ ಅಸಲಿನ ಮೇಲಿನ ಸಾಲದಲ್ಲಿ ಶೇಕಡ 50% ರಷ್ಟು ಪಾವತಿಸಿಕೊಂಡು ಮರು ಸಾಲವನ್ನು ನೀಡಬೇಕೆಂಬುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸಲು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸಚಿವರಿಗೆ ಮನವಿ ಮಾಡಲಾಯಿತು.

 

          ಸತತ 187 ದಿನಗಳಿಂದ ನಗರದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರದಾನ ಕಚೇರಿ ಎದುರು ಪ್ರತಿಭಟನೆ ಮಾಡುತ್ತಿರುವ ರೈತರು, ನೂತನವಾಗಿ ಆಯ್ಕಾಯಾದ ಶಾಸಕರು, ಸಚಿವರಿಗೆ ಸನ್ಮಾನ ಮಾಡಿ, ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಮಾತನಾಡಿದ ರೈತ ಮುಖಂಡರು, ಜಿಲ್ಲೆಯಲ್ಲಿ ಹರಿಯುವ ವೇದಾವತಿ ನದಿಗೆ ಆಣೆಕಟ್ಟು ನಿರ್ಮಾಣ ಮಾಡುವ ಬಗ್ಗೆ, ಸಂಡೂರು ಘಟಕದ ರೈತ ಸಂಘದಿಂದ ಯಶವಂತನಗರದಲ್ಲಿ ಹಾಕುತ್ತಿರುವ ಫೆಲೆಟ್ ಪ್ಲಾಂಟ್ ನಿರ್ಮಾಣದಿಂದಾಗುವ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿದರು.

 

          ಈ ಸಂದರ್ಭದಲ್ಲಿ ಮನವಿ ಸ್ವೀಕರಿಸಿ ಮಾತನಾಡಿದ ಕ್ರೀಡಾ ಮತ್ತು ಸಬಲೀಕರಣ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ, ಬ್ಯಾಂಕ್‌ನಲ್ಲಿನ ರೈತರ ಸಾಲದಲ್ಲಿ ರಿಯಾಯಿತಿ ಕೊಡಿಸಲು ಬಳ್ಳಾರಿ ಜಿಲ್ಲೆಯ ಶಾಸಕರು ಹಾಗೂ ಬ್ಯಾಂಕ್ ಅಧಿಕಾರಿಗಳೊಂದಿಗೆ ಸಭೆ ನಡೆಸುವಂತೆ ಸೂಚಿಸುತ್ತೇನೆ. ಅಂತೆಯೇ ರೈತರು, ಶಾಸಕರು ಹಾಗೂ ಬ್ಯಾಂಕ್ ಅಧಿಕಾರಿಗಳ ನಿಯೋಗದೊಂದಿಗೆ ಸಿಎಂ, ಡಿಸಿಎಂ ಅವರೊಂದಿಗೆ ಸಭೆ ನಡೆಸಿ ರೈತರ ಸಮಸ್ಯೆ ಇತ್ಯರ್ಥ ಪಡಿಸಲು ಶ್ರಮಿಸುತ್ತೇನೆ ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕರೂರು ಮಾಧವ ರೆಡ್ಡಿ, ಚಾಗನೂರು ಸಿರಿವಾರ ಭೂ ಹೋರಾಟ ಸಮಿತಿಯ ಸಂಚಾಲಕ ಚಾಗನೂರು ಮಲ್ಲಿಕಾರ್ಜುನ ರೆಡ್ಡಿ, ಕರ್ನಾಟಕ ರೈತ ಸಂಘದ ಪ್ರಮುಖರಾದ ಲೇಪಾಕ್ಷಿ ಅಸುಂಡಿ, ಸಿದ್ದನಗೌಡ ಸಿಂಧನೂರು, ರಾಮನಗೌಡ್ರು, ರಾಜಶೇಖರ ಗೌಡ, ಅಮೀನ್ ಪಾಶ, ಉಮಾಪತಿ, ಕ್ರಿಸ್ಟಪ್ಪ, ಬಸವನ ಗೌಡ, ಮೇಟಿ ನಾಗರಾಜ ಗೌಡ, ಬಸವರಾಜ ಸ್ವಾಮಿ, ತಿಮ್ಮಾರೆಡ್ಡಿ, ಮಲ್ಲಿಕಾರ್ಜುನ ರೆಡ್ಡಿ ಜಾಲಿಹಾಳ್, ಶ್ರೀಶೈಲ ಆಲದಹಳ್ಳಿ, ನಾಯ್ಕರ ನಾಗರಾಜ್, ಲಿಂಗರಾಜ, ಹುಲುಗಯ್ಯ, ಸಂಜೀವ ರೆಡ್ಡಿ ಸೇರಿದಂತೆ ಮಹಿಳಾ ರೈತ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು. 

ಇದೇ ವೇಳೆ ನಗರದ ಶಾಸಕ ನಾರಾ ಭರತ್ ರೆಡ್ಡಿ, ಕಂಪ್ಲಿ ಶಾಸಕ ಜಿ.ಎನ್ ಗಣೇಶ್, ಸಿಂಧನೂರು ಶಾಸಕ ಹಂಪನ ಗೌಡ ಬಾದರ್ಲಿ, ಸಂಡೂರು ಶಾಸಕ ಈ ತುಕಾರಾಂ ಇವರುಗಳಿಗೆ ಸಹ ಬೇಡಿಕೆಗಳ ಈಡೇರಿಕೆಯ ಮನವಿ ಪತ್ರ ಸಲ್ಲಿಸಿದರು.

Facebook
Twitter
LinkedIn
WhatsApp
Email
Telegram

Leave a Comment

Your email address will not be published. Required fields are marked *

Translate »
Scroll to Top