ಅಂಜಲಿ ಹತ್ಯೆ ಪ್ರಕರಣ: ನಿತ್ಯ ನಡೆಯುವ ಕೆಲಸಗಳು ನಮಗೆ ಗೊತ್ತಾಗುವುದಿಲ್ಲ-ಸಂತೋಷ ಲಾಡ್​

ಹುಬ್ಬಳ್ಳಿ: ಅಂಜಲಿ ಅಂಬಿಗೇರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, “ನಿತ್ಯ ನಡೆಯುವ ಕೆಲಸಗಳು ನಮಗೆ ಗೊತ್ತಾಗುವುದಿಲ್ಲ ಎಂದು ಹೇಳುವ ಮೂಲಕ ಕರ‍್ಮಿಕ ಸಚಿವ ಸಂತೋಷ ಲಾಡ್ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಹುಬ್ಬಳ್ಳಿಯ ವಿರಾಪುರ ಓಣಿಯಲ್ಲಿರುವ ಕೊಲೆಯಾದ ಅಂಜಲಿ ಅಂಬಿಗೇರ (೨೧) ಮನೆಗೆ ಸಚಿವ ಸಂತೋಷ ಲಾಡ್ ಮತ್ತು ಶಾಸಕ ಪ್ರಸಾದ್ ಅಬ್ಬಯ್ಯ ಇಂದು (ಮೇ ೧೮) ನೀಡಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ, ಸಚಿವ ಸಂತೋಷ್ ಲಾಡ್, ಪ್ರಕರಣದ ತನಿಖೆಯನ್ನು ಸಿಐಡಿಗೆ ನೀಡಬೇಕು ಅಂತ ಮನವಿ ಮಾಡುತ್ತೇನೆ ಎಂದರು.

ನೇಹಾ ಹತ್ಯೆ ನಡೆದ ನಂತರ ಇನ್ನೊಂದು ಘಟನೆ ನಡೆದಿದೆ. ಸಮಾಜದಲ್ಲಿ ಇದು ಒಳ್ಳೆಯದಲ್ಲ. ಅದರಲ್ಲೂ ಹುಬ್ಬಳ್ಳಿ-ಧಾರವಾಡದಲ್ಲಂತೂ ಒಳ್ಳೆಯದಲ್ಲ. ಅಹಿತಕರ ಘಟನೆಗಳು ನಡೆದಾಗ ತಕ್ಷಣಕ್ಕೆ ಕಡಿವಾಣ ಹಾಕುವುದು ಪೋಲಿಸರ ರ‍್ತವ್ಯ. ಅಹಿತಕರ ಚಟುವಟಿಕೆಗಳಲ್ಲಿ ಯುವಕರು ಬಲಿಯಾಗ್ತಿದ್ದಾರೆ. ಇಂಥ ಯುವಕರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಪ್ರಕರಣವನ್ನು ಸಿಐಡಿಗೆ ನೀಡಬೇಕು ಅಂತ ರ‍್ಕಾರಕ್ಕೆ ನಾನು ಮನವಿ ಮಾಡುತ್ತೇನೆ ಎಂದು ಹೇಳಿದರು.

ಆರೋಪಿ ವಿಶ್ವನ ವಿರುದ್ಧ ಅಂಜಲಿ ಪೋಷಕರು ಮೊದಲೆ ದೂರು ಕೊಟ್ಟಿದ್ದಾಗಿ ಕುಟುಂಬಸ್ಥರು ಹೇಳಿದ್ದಾರೆ. ಹೀಗಾಗಿ ಈಗಾಗಲೆ ಕ್ರಮ ಆಗಿದೆ. ಈಗಾಗಲೆ ಅಂಜಲಿ ಹತ್ಯೆ ತನಿಖೆ ನಡೆಯುತ್ತದೆ. ಗೃಹ ಸಚಿವರು ಬಂದು ಈ ಕುರಿತು ಮಾತಾನಾಡುತ್ತಾರೆ. ಇನ್ಮುಂದೆ ಇಂತಹ ಅಹಿತಕರ ಘಟನೆ ನಡೆದರೆ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದು ಮಾತನಾಡಿದರು.

ಇತ್ತೀಚಿಗೆ ಡ್ರಗ್ಸ್ ಹಾವಳಿ ಎಲ್ಲ ಕಡೆ ಇದೆ. ಟ್ಯಾಬ್ಲೆಟ್ನಲ್ಲಿ ಕೂಡ ಬಂದಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರ ಪಾತ್ರ ಮುಖ್ಯ. ಅಹಿತಕರ ಘಟನೆಗಳು ನಡೆದಾಗ ತಕ್ಷಣಕ್ಕೆ ಕಡಿವಾಣ ಹಾಕುವುದು ಪೋಲಿಸರ ರ‍್ತವ್ಯ. ಅಕ್ರಮ ಸಾರಾಯಿ ವಿಚಾರವಾಗಿ ಜನರು ಕೂಡ ಎಚ್ಚೆತ್ತುಕೊಂಡು ಪ್ರತಿಭಟನೆ ಮಾಡಬೇಕು. ಎಲ್ಲವನ್ನೂ ನಾವೊಬ್ಬರೇ ನಿಯಂತ್ರಿಸಲು ಸಾಧ್ಯವಿಲ್ಲ. ಎಲ್ಲರೂ ಕೈ ಜೋಡಿಸಿದಾಗ ನಿಯಂತ್ರಿಸಬಹುದು ನಾನು ರ‍್ಕಾರ ಪರವಾಗಿ ಮಾತನಾಡುತ್ತಿಲ್ಲ. ಇಂಥದ್ದು ಕಂಡು ಬಂದರೆ ತಡೆಗಟ್ಟಲು ಸಹಾಯವಾಗುತ್ತೆ ಎಂದರು.

ಇನ್ನು ಘಟನೆ ನಡೆದು ಮೂರು ದಿನಗಳು ಕಳೆದರೂ ಸಂತೋಷ ಲಾಡ್ ಅಂಜಲಿ ಮನೆ ಭೇಟಿ ನೀಡಿಲ್ಲ ಎಂಬ ವಿಪಕ್ಷಗಳ ಟೀಕೆ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ ಅಂತ ಹೇಳುವುದಿಲ್ಲ. ನನಗೆ ಮೈಯಲ್ಲಿ ಹುಷಾರಿಲ್ಲದ ಕಾರಣ ಬರಲು ಆಗಿಲ್ಲ. ಅವರು ಕೇಳಿದ ಪ್ರಶ್ನೆ ಸರಿಯಾಗಿದೆ. ಅದಕ್ಕೆ ನಾನು ಅವರಿಗೆ ಉತ್ತರ ಕೂಡ ಕೊಟ್ಟಿದ್ದೇನೆ.

ಡ್ರಗ್ಸ್ ಹಾವಳಿ ನಿಯಂತ್ರಿಸಬೇಕು: ಅಬ್ಬಯ್ಯ

ನಾನು ಇಂತಹ ಘಟನೆಯನ್ನ ಖಂಡಿಸುತ್ತೇನೆ. ಈಗಾಗಲೇ ಎರಡು ಪ್ರಕರಣಗಳು ನಡೆದಿವೆ. ಡ್ರಗ್ಸ್ ಹಾವಳಿಯನ್ನು ಮೊದಲು ನಿಯಂತ್ರಿಸಬೇಕು. ಅದನ್ನು ನಾನು ಮೊದಲಿಂದ ಹೇಳಿಕೊಂಡು ಬಂದಿದ್ದೇನೆ. ಅದನ್ನ ತಡೆಗಟ್ಟಲು ಹಲವು ಬಾರಿ ಇಲಾಖೆ ಜೊತೆ ಮೀಟಿಂಗ್ ಮಾಡಿದ್ದೇನೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

ಕೊಲೆಯಾದ ಸಂರ‍್ಭದಲ್ಲಿ ನಾನು ಬಂದಿಲ್ಲ ಅಂತ ಟೀಕಿಸಲಾಗುತ್ತಿದೆ. ನಾನು ಫೋಟೊಗೆ ಫೋಸ್ ಬರುವ ಅವಶ್ಯಕತೆಯಿಲ್ಲ. ನಮ್ಮದು ಬೇರೆ ಅಫಿಶೀಯಲ್ ಕೆಲಸ ಇತ್ತು. ಹೀಗಾಗಿ ನನಗೆ ಬರಲು ಆಗಿಲ್ಲ ಎಂದು ತಿಳಿಸಿದರು. ಈ ಅಂಜಲಿ ಹತ್ಯೆ ಪ್ರಕರಣದಲ್ಲಿ ಯಾರ ಯಾರ ಹರಿಕಥೆ ಇದೆ ಗೊತ್ತಾಗುತ್ತದೆ. ಈಗಾಗಲೇ ತನಿಖೆ ನಡೆಯುತ್ತಿದೆ. ಶೀಘ್ರದಲ್ಲೇ ಎಲ್ಲವೂ ಹೊರ ಬರಲಿದೆ. ಸೋಮವಾರ ಗೃಹಸಚಿವರು ಹುಬ್ಬಳ್ಳಿಗೆ ಬರುವುದಾಗಿ ಹೇಳಿದ್ದಾರೆ ಎಂದು ಮಾಹಿತಿ ನೀಡಿದರು.

 

ಹತ್ಯೆಯಾದ ಅಂಜಲಿ ಕುಟುಂಬಕ್ಕೆ ತಮ್ಮ ಫೌಂಡೇಷನ್ನಿಂದ ಸಚಿವ ಸಂತೋಷ್ ಲಾಡ್ ಎರಡು ಲಕ್ಷ ರೂಪಾಯಿ ಚೆಕ್ ನೀಡಿದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top