ಪ್ರತೀ ಲೀಟರ್ ಹಾಲಿಗೆ 2 ರೂ ಹೆಚ್ಚಳ

ಬೆಂಗಳೂರು : ರಾಜ್ಯಾದ್ಯಂತ ನಾಳೆಯಿಂದ ಹಾಲಿನ ದರ ಪ್ರತಿ ಲೀಟರ್ ಗೆ 2 ರೂ ಹೆಚ್ಚಳ.  1 ಲೀಟರ್ ಹಾಲಿನ ಜತೆ 50 ಎಂಎಲ್ ಹೆಚ್ಚುವರಿ‌ಹಾಲು ನೀಡಲು ನಿರ್ಧಾರ. ಹೊಸ ದರ ನಾಳೆಯಿಂದಲೇ ಜಾರಿಯಾಗಲಿದೆ.

 

ಈ ಹಿಂದೆಯೂ ಹಾಲಿನ ದರ ಹೆಚ್ಚಳ ಮಾಡಲಾಗಿತ್ತು. ಅಂದು ಕೂಡ ಲೀಟರ್‍ ಹಾಲಿಗೆ 2 ರೂ ಹೆಚ್ಚಳ ಮಾಡಲಾಗಿತ್ತು. ಆದರೆ ಈ ದರ ಸಾರ್ವಜನಿಕರಿಗೆ ಅನ್ವಯಿಸುವುದಿಲ್ಲ. ಹಾಲು ಮಾರಾಟಗಾರರಿಗೆ ಮಾತ್ರ ಎಂದು ಹೇಳಲಾಗಿತ್ತು. ಆದರೆ ಹಾಲಿದ ದರ ಹೆಚ್ಚರ ಹೊರೆ ಸಾರ್ವಜನಿಕರ ಮೇಲೆಯೇ ಬಿದ್ದಿತ್ತು. 

ಅಂತೆಯೇ ಮತ್ತೊಮ್ಮೆ ಹಾಲಿನ ದರ ಹೆಚ್ಚಳ ಮಾಡಲಾಗಿದ್ದು, ಈಗಲೂ ಅರ್ಧ ಲೀಟರ್ ಹಾಲಿಗೂ ತೆಗೆದುಕೊಂಡರೂ 2 ರೂ. ಒಂದು ಲೀಟರ್ ಹಾಲಿನ ಪ್ಯಾಕೆಟ್ ತೆಗೆದುಕೊಂಡರೂ 2 ರೂ ದರ ಹೆಚ್ಚಳ ಮಾಡಲಾಗಿದೆ.  ವಿಶೇಷ ವೇನೆಂದರೆ ಒಂದು ಲೀಟರ್ ಹಾಲಿನ ಪ್ಯಾಕೆಟ್‍ನಲ್ಲಿ 50 ಎಂಎಲ್ ಹೆಚ್ಚುವರಿ ಹಾಲು ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top