About Us
ಕನ್ನಡನಾಡು ಹೆಸರಿನಲ್ಲಿಯೇ ಇರುವಂತೆ ಕನ್ನಡ ನಾಡು-ನುಡಿ, ನೆಲ-ಜಲ ಸಂರಕ್ಷಣೆಯ ಜೊತೆಗೆ ಜನರ ನಾಡಿಮಿಡಿತವಾಗಿರುವ ದೈನಂದಿನ ಪ್ರಾದೇಶಿಕ ಕನ್ನಡ ಪತ್ರಿಕೆ.
1994ರಲ್ಲಿ ಪ್ರಾರಂಭಗೊಂಡು ನಿರಂತರವಾಗಿ ಜನಪರ ಸುದ್ದಿಗಳನ್ನು ನೀಡುತ್ತಾ, ಜನಮಾನಸದಲ್ಲಿ ಮನ್ನಣೆ ಗಳಿಸಿದೆ. ಅಂದಿನಿಂದ ಇಂದಿನವರೆಗೂ ಯಾವುದೇ ರಾಜಕೀಯ ಒತ್ತಡಗಳಿಗೆ ಮಣಿಯದೆ, ಜನಪರ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರುತ್ತಾ, ಜನರ ಸಮಸ್ಯೆಗಳು ಪರಿಹಾರಗೊಳಿಸುವ ನಿಟ್ಟಿನಲ್ಲಿ ಮುನ್ನಡೆಯುತ್ತಾ ಬಂದಿದೆ. ಆರಂಭದಲ್ಲಿ ಕಪ್ಪು ಬಿಳುಪು ಬಣ್ಣದಲ್ಲಿ ಮುದ್ರಣಗೊಳ್ಳುತ್ತಾ, ನಂತರದಲ್ಲಿ ವರ್ಣರಂಜಿತವಾಗಿ ಮುದ್ರಣಗೊಂಡು ಜನರ ಮನಸೂರೆಗೊಳ್ಳುತ್ತಿದೆ.
ಬಳ್ಳಾರಿ ಜಿಲ್ಲೆಯಿಂದಲೇ ಮುದ್ರಣಗೊಂಡು ಪ್ರಕಟಗೊಳ್ಳುತ್ತಿರುವ ಈನಮ್ಮ ಕನ್ನಡನಾಡು ದಿನಪತ್ರಿಕೆ ಬಳ್ಳಾರಿ ಸೇರಿದಂತೆ ಕೊಪ್ಪಳ, ರಾಯಚೂರು, ತುಮಕೂರು, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ವಿಜಯನಗರ, ಬೆಂಗಳೂರು ಹಾಗೂ ಗದಗ ಜಿಲ್ಲೆಯಲ್ಲಿ ಪ್ರಸರಣೆ ಹೊಂದಿದ್ದು ಜನಮನ್ನಣೆಗಳಿಸಿದೆ.
ಇದೀಗ ಕಾಲ ಬದಲಾದಂತೆ ಅದಕ್ಕೆ ಹೊಂದಿಕೊಂಡು ನಾವು ಬದಲಾಗಬೇಕಿದೆ. ಅಂತೆಯೇ ಇದೀಗ ಜನರಿಗೆ ಕ್ಷಣಾರ್ಧದಲ್ಲೇ ಸುದ್ದಿಗಳನ್ನು ಓದುವ ತವಕ ಇದ್ದರೆ, ಕೆಲವರಿಗೆ ನೋಡುವ ತವಕ ಇರುತ್ತದೆ. ಈ ನಿಟ್ಟಿನಲ್ಲಿ ನೂತನ ಮೈಲುಗಲ್ಲಾಗಿ ಕನ್ನಡನಾಡು ಹೆಸರಿನಲ್ಲಿ ವೆಬ್ಸೈಟ್ನ್ನು ಪ್ರಾರಂಭಿಸಲಾಗಿದ್ದು, ಒಮ್ಮೆ ನೀವು ಸಬ್ಸ್ಕ್ರೈಬ್ ಆದಲ್ಲಿ ಸುದ್ದಿಗಳು ಕ್ಷಣಾರ್ಧದಲ್ಲೇ ನಿಮ್ಮ ಮೊಬೈಲ್ನಲ್ಲಿ ನೋಡಬಹುದಾಗಿದೆ.
ಅದೇ ರೀತಿ ಈಗಾಗಲೇ ಕನ್ನಡನಾಡು ಹೆಸರಿನಲ್ಲಿ ಯೂಟ್ಯೂಬ್ ವಾಹಿನಿಯೊಂದು ಚಾಲನೆಯಲ್ಲಿದ್ದು, ಪ್ರತಿನಿತ್ಯ ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದ ಸುದ್ದಿಗಳೊಂದಿಗೆ, ಪ್ರತಿ ವಾರ ಸಿನಿಮಾ ಸ್ಟೋರಿಗಳು ಸೇರಿದಂತೆ ಮತ್ತಿತರೆ ವಿಶೇಷ ಕಾರ್ಯಕ್ರಮಗಳನ್ನು ನೀಡುತ್ತಿದ್ದು, ಒಮ್ಮೆ ಚಾನೆಲ್ಗೆ ಭೇಟಿ ಕೊಟ್ಟು, ಸಬ್ಸ್ಕ್ರೈಬ್ ಮಾಡಿಕೊಂಡಲ್ಲಿ ವಿನೂತನ ಕಾರ್ಯಕ್ರಮಗಳ ಅಪ್ಡೇಟ್ಗಳು ಸಿಗಲಿವೆ.