ಕೊಟ್ಟೂರು: ಶುಕ್ರವಾರ ರಂದು ಬೆಳಿಗ್ಗೆ 9.25 ಶಾಲೆಗೆ ಹೊರಡುವ ತರಳುಬಾಳು ವಿದ್ಯಾ ಸಂಸ್ಥೆಗೆ ಸೇರಿರುವ ತರಳಬಾಳು ಹಿರಿಯ ಪ್ರಥಮಿಕ ಹಾಗೂ ಪ್ರೌಢಶಾಲೆ ಹುಣಸಿಕಟ್ಟಿ ಕ್ರಾಸ್, ಈ ಶಾಲೆಯ ಬಸ್ಸು ಸಮಯ ಬೆಳಗ್ಗೆ 9.40ಕ್ಕೆ ಕೆ.ಅಯ್ಯನಹಳ್ಳಿ ಮಾರ್ಗ ಮಧ್ಯದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡಕ್ಕೆ ತುತ್ತಾಗಿದೆ.
ಸದರಿ ಬಸ್ ನಲ್ಲಿ 45 ಮಕ್ಕಳು ಸೇರಿದಂತೆ 3 ಜನ ಶಿಕ್ಷಕರು ಹಾಗೂ ಬಸ್ ಸಹಾಯಕ ಡ್ರೈವರ್ ನೊಳಗೊಂಡಂತೆ 50 ಜನರಿದ್ದರು. ಬಿಇಓ ಅವರು ಅವಗಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿ ಎಲ್ಲಾ ಮಕ್ಕಳು ಸುರಕ್ಷಿತವಾಗಿದ್ದು, ಸಿಬ್ಬಂದಿ ಸೇರಿದಂತೆ ಯಾರಿಗೂ ಕೂಡ ಯಾವುದೇ ಅಪಾಯಗಳು ಸಂಭವಿಸಿಲ್ಲ.
ಚಾಲಕನ ಮುಂಜಾಗ್ರತೆ ಹಾಗೂ ಚಾಣಾಕ್ಷತನದಿಂದ ಶಾರ್ಟ್ ಸರ್ಕ್ಯೂಟ್ ಆರಂಭದಲ್ಲಿ ಎಲ್ಲಾ ಮಕ್ಕಳನ್ನು ಕೆಳಗಿಳಿಸಿ ಮರದ ಕೆಳಗೆ ಕೂಡಿಸಿರುವುದು ಕಂಡುಬಂದಿದೆ. ಹಾಗೂ ಮಧ್ಯಾಹ್ನದ ಸಮಯಕ್ಕೆ ವಿಜಯನಗರ ಎಸ್ಪಿ ಅವರು ಸ್ಥಳಕ್ಕೆ ಭೇಟಿ ನೀಡಿದರು
ಈ ಸಂದರ್ಭದಲ್ಲಿ ಸಿಪಿಐ,ಪಿಎಸ್ಐ ಹಾಗೂ ಅಗ್ನಿಶಾಮಕ ದಳದವರು ಸ್ಥಳದಲ್ಲಿ ಹಾಜರಿದ್ದರು. ಪೋಷಕರಿಗೆ ಆತಂಕ ಆಗಬಾರದೆಂಬ ದೃಷ್ಟಿಯಿಂದ ಮಕ್ಕಳಿಗೆ ಸಾಂತ್ವನ ಹೇಳಿ,ಸಿಬ್ಬಂದಿ ನೇಮಕ ಮಾಡಿ ಪುನಃ ಎಲ್ಲ ಮಕ್ಕಳನ್ನು ಸದರಿ ಸಂಸ್ಥೆಯ ಇನ್ನೊಂದು ಬಸ್ಸಿನಲ್ಲಿ ತಮ್ಮ ತಮ್ಮ ಊರುಗಳಿಗೆ ವಾಪಸ್ ಕಳುಹಿಸಲಾಯಿತು ಎಂದು ಕೂಡ್ಲಿಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಬಸವರಾಜ್ ತಿಳಿಸಿದರು.