ಬೆಂಗಳೂರು: ನವೋದಯ ಇನ್ ಬೆಂಗಳೂರು , ಸಂಕಲ್ಪ ಚೇಸ್ ಕ್ಯಾನ್ಸರ್ ಫೌಂಡೇಷನ್ ರೀಸರ್ಚ್ ಟ್ರಸ್ಟ್ ಮತ್ತು ಸರ್ಜಿಕಲ್ ಸೊಸೈಟಿ ಆಫ್ ಬೆಂಗಳೂರು ವತಿಯಿಂದ ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಫೆಬ್ರವರಿ 4ರಂದು ಕ್ಯಾನ್ಸರ್ ವಿರುದ್ದ ಕ್ಯಾನ್ಸರ್ ಜಾಗೃತಿ ಜಾಥ ಕಾರ್ಯಕ್ರಮ ಪ್ರಸ್ ಕ್ಲಬ್ ಸರ್ಜಿಕಲ್ ಸೊಸೈಟಿ ಆಫ್ ಇಂಡಿಯ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆ ಪ್ರಯುಕ್ತ ಕ್ಯಾನ್ಸರ್ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು 5ಕಿಲೋ ಮೀಟರ್ ಕ್ಯಾನ್ಸರ್ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಫೆಬ್ರವರಿ ದಿನಾಂಕ 4ರಂದು ಬೆಳ್ಳಗೆ 6ಗಂಟೆಗೆ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ಇದರ ಕುರಿತು ಪ್ರಸ್ ಸಭಾಂಗಣದಲ್ಲಿ ಮಾಧ್ಯಮಗೋಷ್ಟಿ ಏರ್ಪಡಿಸಲಾಗಿತ್ತು . ಸರ್ಜಿಕಲ್ ಸೊಸೈಟಿ ಅಫ್ ಬೆಂಗಳೂರು ಘಟಕದ ಅಧ್ಯಕ್ಷರಾದ ಡಾ.ರಾಜಶೇಖರ್ ಸಿ.ಜಾಕ, ಕಾರ್ಯದರ್ಶಿ ಡಾ||ಮುನಿರೆಡ್ಡಿ,ಎಂ.ವಿ., ಡಾ||ನಟರಾಜ್ ನಾಯ್ಡು ಮತ್ತು ನವೋದಯ ಇನ್ ಬೆಂಗಳೂರು ಸಂಸ್ಥೆಯ ಪ್ರಶಾಂತ್ ಹೆಚ್.ಎಸ್. ಶಂಕರ್ ಜಗ್ಗನಾಥಿ ಜ್ಯೋತಿ, ವೇಮ ನಾರಾಯಣ, ತ್ರಿಮಿಕ್ರಮರೆಡ್ಡಿ, ಕೇಶವಮೂರ್ತಿ,ಸುನೀಲ್ ಕಸರ್ , ಡಾ||ಜ್ಯೋತಿ ತೊಲನೂರುರವರು ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಿದ್ದರು
ಅಧ್ಯಕ್ಷರಾದ ಡಾ||ರಾಜಶೇಖರ್ ಸಿ.ಜಾಕ ರವರು ಮಾತನಾಡಿ ದೇಶದಲ್ಲಿ ಕ್ಯಾನ್ಸರ್ ರೋಗದಿಂದ ಲಕ್ಷಾಂತರ ಜನರು ಸಾವಿಗೀಡಾತ್ತಿದ್ದಾರೆ ಮುಂಜಾಗ್ರತೆಯಾಗಿ ಆರೋಗ್ಯದ ಮೇಲೆ ನಿಗಾವಹಿಸಿದ ಇರುವ ಕಾರಣ. ಸಾರ್ವಜನಿಕರಿಗೆ ಕ್ಯಾನ್ಸರ್ ಕುರಿತು ಮಾಹಿತಿ ಇಲ್ಲದೇ ಇರುವ ಕಾರಣ ಕ್ಯಾನ್ಸರ್ ರೋಗವನ್ನು ಮೊದಲೆ ಪತ್ತೆ ಮಾಡಿ, ವೈದ್ಯಕೀಯ ಚಿಕಿತ್ಯೆ ಪಡೆದರೆ ಎಲ್ಲರಂತೆ ಜೀವನ ಸಾಗಿಸಬಹುದು. 9ಜನರಲ್ಲಿ 1ಒಬ್ಬರಿಗೆ ಕ್ಯಾನ್ಸರ್ ರೋಗ ಇರುವುದು ಅಂಕಿ ಅಂಶ ತಿಳಿಸುತ್ತದೆ. ಮೊದಲನೇಯ,ಎರಡನೇಯ ಹಂತದಲ್ಲಿಯೆ ಕ್ಯಾನ್ಸರ್ ಪತ್ತೆ ಮಾಡಿದರೆ ಸುಲಭವಾಗಿ ರೋಗ ಗುಣಪಡಿಸುವ ಸಾಧ್ಯತೆ ಇದೆ. ಕ್ಯಾನ್ಸರ್ ರೋಗದಿಂದ ಮುಕ್ತರಾಗಲು ಆಹಾರ ಪದ್ದತಿ ಮತ್ತು ಜೀವನಶೈಲಿ ಬದಲಾವಣೆ ಮಾಡಿಕೊಳ್ಳಬೇಕು. ಪ್ರತಿದಿನ ಯೋಗ, ವ್ಯಾಯಾಮ ಮತ್ತು ವಾಕಿಂಗ್ ಹಾಗೂ ಉತ್ತಮ ಆಹಾರ ಸೇವನೆ ಮಾಡುವುದು. ದೇಶದಲ್ಲಿ ಪ್ರತಿವರ್ಷ 10ಲಕ್ಷ ಕ್ಯಾನ್ಸರ್ ಪೀಡಿತರಾಗುತ್ತಿದ್ದಾರೆ. ತೂಕ ಕಡಿಮೆ, ರಕ್ತ ಸ್ರಾವ, ಸತತವಾಗಿ ಜ್ವರ, ನೆಗಡಿ, ಕೆಮ್ಮು ಇದ್ದಲ್ಲಿ ವೈದ್ಯರಲ್ಲಿ ಬಂದು ತಪಾಸಣೆ ಮಾಡಿಸಿಕೊಳ್ಳಿ . ಪ್ರತಿ ಆರು ತಿಂಗಳಿಗೆ ಒಮ್ಮೆ ಸಂಪೂರ್ಣ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು. ಸಾರ್ವಜನಿಕರಿಗೆ ಕ್ಯಾನ್ಸರ್ ಕುರಿತು ಅರಿವು ಮೂಡಿಸಲು ಕ್ಯಾನ್ಸರ್ ಕುರಿತು ಜಾಗೃತಿ ಅಭಿಯಾನ ಫೆಬ್ರವರಿ 4ರಂದು 5ಕಿಲೋ ಮೀಟರ್ ವಾಕ್ ಥಾನ್ ಅಯೋಜಿಸಲಾಗಿದೆ. ಸಾರ್ವಜನಿಕರಿಗೆ ಉಚಿತ ಪ್ರವೇಶವಿರುತ್ತದೆ, ಹೆಸರುಗಳನ್ನು ನೋಂದಾವಣೆ ಮಾಡಿಕೊಳ್ಳಬೇಕು. ಉದ್ಘಾಟನೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವರಾದ ದಿನೇಶ್ ಗುಂಡೂರಾವ್ ರವರು ಮತ್ತು ಗಣ್ಯರುಗಳು ನೇರವೆರಿಸಲಿದ್ದಾರೆ. ಕರ್ನಾಟಕ ಸರ್ಕಾರ ಮತ್ತು ಯುವ ಸಬಲೀಕರಣ ಕ್ರೀಡಾ ಇಲಾಖೆ ಹಾಗೂ ಸಂಕಲ್ಪ ಚೇಸ್ ಕ್ಯಾನ್ಸರ್ ಫೌಂಡೇಷನ್ ರೀಸರ್ಚ್ ಟ್ರಸ್ಟ್ , ನವೋದಯ ಇನ್ ಬೆಂಗಳೂರು ಮತ್ತು ರಾಷ್ಟ್ರೀಯ ಸೇವಾ ಯೋಜನೆ ಸಹಕಾರ ನೀಡುತ್ತಿದ್ದಾರೆ.
ಈಗಾಗಲೇ ಆನ್ ಲೈನ್ ಮೂಲಕ 7500ಸಾವಿರ ಜನರು ವಾಕಥಾನ್ ನಲ್ಲಿ ಭಾಗವಹಿಸಲು ನೋಂದಾವಣೆ ಮಾಡಿಕೊಂಡಿದ್ದಾರೆ ಅಂದಾಜು 10ಸಾವಿರ ಜನರು ಭಾಗವಹಿಸುವ ಸಾಧ್ಯತೆ .