ಹೇಮ-ವೇಮ ಸದ್ಬೋಧನ ವಿದ್ಯಾಪೀಠದ ಕಾರ್ಯ ಶ್ಲಾಘನೀಯ

ದಾವಣಗೆರೆ : ಹೇಮ-ವೇಮ ಸದ್ಬೋಧನ ವಿದ್ಯಾಪೀಠಕ್ಕೆ ಒಂದು ದಶಕದ ಸಂಭ್ರಮ. 2012-13ರಲ್ಲಿ ಪ್ರಾರಂಭವಾದ ಉಚಿತ ವಿದ್ಯಾರ್ಥಿನಿಲಯವು 40 ಮಕ್ಕಳೊಂದಿಗೆ ಪುಟ್ಟ ಹೆಜ್ಜೆಯನಿಟ್ಟು ಪ್ರಸ್ತುತ ಸರಿಸುಮಾರು 2,000 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ವಸತಿಯುತ ಶಿಕ್ಷಣ ಪಡೆಯುತ್ತಿದ್ದಾರೆ ಈ ವಿದ್ಯಾಪೀಠದ ಕಾರ್ಯ ಶ್ಲಾಘನೀಯ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನರೆಡ್ಡಿಯವರು ತಿಳಿಸಿದರು.

ದಾವಣಗೆರೆಯಲ್ಲಿ ಹೇಮ-ವೇಮ ಸದ್ಬೋಧನ ವಿದ್ಯಾಪೀಠದ ಹತ್ತನೇ ವರ್ಷದ “ದಶಮಾನೋತ್ಸವ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉದ್ಘಾಟಿಸಿ ಮಾತನಾಡಿದ ಅವರು,

 

ವಿದ್ಯಾರ್ಥಿಗಳಿಗೆ ಪ್ರಾಥಮಿಕಶಾಲೆ, ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಪದವಿ ಕಾಲೇಜು, ಸ್ನಾತಕೋತ್ತರ ಕೇಂದ್ರಗಳನ್ನು ತೆರೆಯಲಾಗಿ ಜೊತೆಗೆ ಶಿಕ್ಷಣ, ಸಂಸ್ಕಾರ, ಉತ್ತಮ ನಡವಳಿಕೆ, ಆರೋಗ್ಯ, ಶಿಸ್ತು-ಸಂಯಮ ಕಲಿಸಬೇಕೆಂಬ ಆಶಯ ವಿದ್ಯಾಪೀಠದ್ದಾಗಿದೆ. ಸಾಧ್ವಿ ಹೇಮರೆಡ್ಡಿ ಮಲ್ಲಮ್ಮರ ಭಕ್ತಿಯೇ ಶ್ರೀ ಮಠದ ಕತೃತ್ವ ಶಕ್ತಿಯಾಗಿದೆ. ಮಾನವೀಯ ತುಡಿತಗಳೊಂದಿಗೆ ರೆಡ್ಡಿ ಸಮುದಾಯದ ಸಂಘಟನೆಯೊಂದಿಗೆ ಸಾಮಾಜಿಕ, ಶೈಕ್ಷಣಿಕ, ಆದ್ಯಾತ್ಮಿಕವಾಗಿ ಶ್ರೀಮಠವು ಎಲ್ಲಾ ಸ್ತರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಶ್ರೀ ವೇಮನಾನಂದ ಮಹಾಸ್ವಾಮೀಜಿಯವರ ಪರಿಚಯ 15 ವರ್ಷಕ್ಕೂ ಹೆಚ್ಚಿನದ್ದು ಶ್ರೀಗಳು ರಾಜ್ಯಾದ್ಯಂತ ತೆರಳಿ ಸಮುದಾಯದ ಪ್ರಮುಖರು, ಹಿರಿಯರು, ಮುಖಂಡರನ್ನು ಗುರುತಿಸಿ ಕಾರ್ಯಕ್ರಮಕ್ಕೆ ಕರೆಸಿ ಎಲ್ಲರಿಗೂ ಸನ್ಮಾನಿಸಿರುವ ಪ್ರತಿಫಲವೇ ಈ ವಿದ್ಯಾಸಂಸ್ಥೆ. ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳಿಗಾಗಿ ಉತ್ತಮವಾದ ಆಡಿಟೋರಿಯಂ ಹಾಗೂ ಹೆಚ್ಚಿನ ರೀತಿಯಲ್ಲಿ ಸೌಕರ್ಯಗಳನ್ನು ಕಲ್ಪಿಸುವ ಮೂಲಕ ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸುತ್ತೇನೆಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಶ್ರೀ ವೇಮನಾನಂದ ಮಹಾಸ್ವಾಮೀಜಿಗಳು, ವೇಮನ ಮಠ ಎರೇಹೊಸಳ್ಳಿ, ಬಸವಕುಮಾರ ಮಹಾಸ್ವಾಮಿಗಳು, ಮಾಜಿ ಸಚಿವರಾದ ಶಿವನಗೌಡ ರುದ್ರಗೌಡ ಪಾಟೀಲ್, ನವಲಗುಂದ ಶಾಸಕ ಎಂ.ಎಚ್ ಕೋನರೆಡ್ಡಿ, ವಿಧಾನಪರಿಷತ್ ಸದಸ್ಯರಾದ ಗೋಪಿನಾಥ್ ರೆಡ್ಡಿ, ಪಿ.ಎಚ್ ಪೂಜಾರ್, ಮಾಜಿ ಸಚಿವ ಹಾಲಪ್ಪ ಆಚಾರ್, ಮುದ್ದೇಬಿಹಾಳ ಶಾಸಕ ಸಿ.ಎಸ್ ನಾಡಗೌಡ, ಮಾಜಿ ಸಚಿವರಾದ ವೆಂಕಟರಾವ್ ನಾಡಗೌಡ, ಅಜಯ್ ಕುಮಾರ್ ನಾಯಕ್, ಮಾಜಿ ಶಾಸಕರಾದ ದೊಡ್ಡನಗೌಡ ಪಾಟೀಲ್, ಸೋಮನಗೌಡ ಪಾಟೀಲ್, ಜಿ.ವೀರಪ್ಪ, ವಿಧಾನಸಭಾ ಸದಸ್ಯರಾದ ಶರಣೆಗೌಡ ಬ್ಯಾರಪುರ, ಡಾ.ರವಿಕುಮಾರ್ ಹಾಗೂ ಅನೇಕ ಹಿರಿಯರು, ಮುಖಂಡರು, ಸಂಸ್ಥೆಯ ಸಿಬ್ಬಂದಿಗಳು, ಸಹಸ್ರಾರು ಮಕ್ಕಳು ಉಪಸ್ಥಿತರಿದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top