ರಾಜ್ಯ ಮಟ್ಟದ ಪತ್ರಕರ್ತರ ರೋಹನ್ ಕಪ್  ಕ್ರಿಕೆಟ್ ಟೂರ್ನಿ

ಮತ್ತೊಮ್ಮ ಚಾಂಪಿಯನ್ ಆಗಿ ಹೊರಹೊಮ್ಮಿದ ಬೆಂಗಳೂರು ನಗರ ಜಿಲ್ಲಾ ತಂಡ

ಮಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಮಂಗಳೂರಿನಲ್ಲಿ ನಡೆದ ರೋಹನ್ ಕಪ್ ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಿಯಲ್ಲಿ ಬೆಂಗಳೂರು ನಗರ ಜಿಲ್ಲಾ ತಂಡ ಮತ್ತೊಮ್ಮೆ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.

ಮಂಗಳೂರಿನ ‌ಸಹ್ಯಾದ್ರಿ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯಲ್ಲಿ ಬೆಂಗಳೂರು ತಂಡ ಗೆದ್ದು ಬೀಗಿತು.

 

ಬೆಂಗಳೂರು ನಗರ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ತಂಡದ ಮುಖ್ಯಸ್ಥ ವೈ.ಎಸ್.ಎಲ್. ಸ್ವಾಮಿ, ಹಿರಿಯ ಪತ್ರಕರ್ತರಾದ ನಂಜುಂಡಪ್ಪ. ವಿ, ಧ್ಯಾನ್ ಪೂಣಚ್ಚ ನೇತೃತ್ವದ ತಂಡ ಎರಡನೇ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ‌. ರಾಜ್ಯಕಾರ್ಯಕಾರಿ ಸಮಿತಿ ಸದಸ್ಯ ಎಸ್.ಸೋಮಶೇಖರ ಗಾಂಧಿ, ನಗರ ಜಿಲ್ಲಾ ಖಜಾಂಚಿ ಶಿವರಾಜ್ ಅವರು ಇಡೀ ತಂಡದ ಜವಾಬ್ದಾರಿ ನಿಭಾಯಿಸಿದರು.

. ಕಳೆದ ಬಾರಿ ಮಂಡ್ಯದಲ್ಲಿ ನಡೆದ ಕ್ರೀಡಾಕೂಟದಲ್ಲಿ ಬೆಂಗಳೂರು ತಂಡ ಗೆಲುವು ಸಾಧಿಸಿತ್ತು.

ಮುಂಬಯಿ ಸೇರಿದಂತೆ ಒಟ್ಟು 24 ತಂಡಗಳು ಭಾಗವಹಿಸಿದ್ದ ಪಂದ್ಯಾವಳಿಯ

 

 ಕೊನೆಯ ದಿನದಂದು ಫೈನಲ್ ನಲ್ಲಿ ಹಾಸನ ತಂಡದ ವಿರುದ್ಧ  25 ರನ್ ಗಳ ಅಂತರದಲ್ಲಿ ಗೆಲುವು ದಾಖಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಭರತ್ ಪಂದ್ಯ ಶ್ರೇಷ್ಠ ಮತ್ತು ಟೂರ್ನಿಯಲ್ಲಿ ಅತ್ಯುತ್ತಮ ಬ್ಯಾಟ್ಸ್ ಮನ್  ಪ್ರಶಸ್ತಿ ಗಳಿಸಿದರು. ಟೂರ್ನಿಯಲ್ಲಿ ಅತ್ಯುತ್ತಮ ಬೌಲರ್ ಪ್ರಶಸ್ತಿ ಗಳಿಸಿದರು. ಮಂಡ್ಯ ತೃತೀಯ ಪ್ರಶಸ್ತಿ ಪಡೆಯಿತು.

ಲೀಗ್ ಹಂತದಲ್ಲಿ ತುಮಕೂರು, ವಿಜಯನಗರ ಹಾಗೂ ಗದಗ ತಂಡಗಳ ವಿರುದ್ದ ಜಯ ದಾಖಲಿಸಿತು.  ನಂತರ ಕ್ವಾರ್ಟರ್ ಫೈನಲ್ಸ್ ನಲ್ಲಿ ಉಡುಪಿ ತಂಡವನ್ನು 35 ರನ್ ಗಳ ಅಂತರದಲ್ಲಿ ಗೆಲುವು ಸಾಧಿಸಿ ರನ್ ರೇಟ್ ಆಧಾರದಲ್ಲಿ ನೇರವಾಗಿ ಫೈನಲ್ ಪ್ರವೇಶಿತು. ಇಡೀ ಟೂರ್ನಿಯಲ್ಲಿ ಬೆಂಗಳೂರು ಜಿಲ್ಲಾ ತಂಡದ ಆರಂಭಿಕ ಆಟಗಾರ ಭರತ್, ದೀಪು ಉತ್ತಮ ಪ್ರದರ್ಶನ ನೀಡಿದರು. ರಾಮಾಂಜಿ, ಪ್ರಲಾಪ್, ಭಾರತಿ, ವಿಕಾಸ್ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ಮಾಡಿದರು.

 

ಇದಕ್ಕೂ ಮುನ್ನ ಲೀಗ್ ಹಂತದಲ್ಲಿ  ವಿಜಯನಗರ  ತಂಡದ ವಿರುದ್ಧ  ಬೆಂಗಳೂರು ಜಿಲ್ಲಾ ತಂಡ 10 ವಿಕೆಟ್ ಗಳ ಅಂತರದ ಭರ್ಜರಿ ಗೆಲುವು ದಾಖಲಿಸಿತು. 

ಕೇವಲ ಮೂರು ಎಸೆತಗಳಲ್ಲಿ ಪಂದ್ಯಗೆದ್ದು ಬೀಗಿತು.

 ವಿಜಯನಗರ ತಂಡ ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತು. ನಿಗದಿತ 5 ಓವರ್ ಗಳಲ್ಲಿ ಆರು ವಿಕೆಟ್ ಕೆಳೆದುಕೊಂಡು 16 ರನ್ ಗಳಿಸಿತು. ಪ್ರಲಾಪ್ ಮೂರು, ರಾಮಾಂಜಿ, ಭಾರತಿ, ವಿಕಾಸ್ ತಲಾ ಒಂದೊಂದು ವಿಕೆಟ್ ಉರುಳಿಸಿದರು.

  ಭರತ್ ಮೊದಲ ಮೂರು ಎಸೆತಗಳಲ್ಲಿ  ಹ್ಯಾಟ್ರಿಕ್ ಸಿಕ್ಸರ್ ಭಾರಿಸಿ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು. ಇನ್ನೂ 4.3 ಓವರ್ ಗಳು ಬಾಕಿ ಇರುವಂತೆ ಬೆಂಗಳೂರು ತಂಡ ಗೆಲುವಿನ ನಗೆ ಬೀರಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ವಿಜಯನಗರ ತಂಡ 5 _ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ  16 ರನ್ ಗಳಿಸಿತು.

ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾದ್ಯಕ್ಷ ಶಿವಾನಂದ ತಗಡೂರು ಬೆಂಗಳೂರು ತಂಡಕ್ಕೆ ಶುಭಹಾರೈಸಿದರು.

 

ಸಂಘದ ಸಂಚಾಲಕರಾದ ರವಿಕುಮಾರ್ ಟೆಲೆಕ್ಸ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top