ಬಳ್ಳಾರಿ : ಕಾರ್ಮಿಕ ಸಚಿವನಾದ ನಂತರ ಮೊದಲ ಬಾರಿ ಬಳ್ಳಾರಿಗೆ ಜಿಲ್ಲೆಗೆ ಭೇಟಿ ಕೊಟ್ಟ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, 2024ಕ್ಕೆ ಬಿಜೆಪಿ ಮುಕ್ತ ಭಾರತವಾಗುವುದು ಗ್ಯಾರೆಂಟಿ ಎಂದು ಘಂಟಾಘೋಷವಾಗಿ ಹೇಳಿದ್ದಾರೆ.
ವಿವಿಧ ಕಾರ್ಯಕ್ರಮಗಳ ನಿಮಿತ್ತ ಬಳ್ಳಾರಿಗೆ ಆಗಮಿಸಿದ್ದ ಸಚಿವ ಸಂತೋಷ್ ಲಾಡ್ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಬೈಕ್ ರ್ಯಾಲಿ ಮೂಲಕ ನಗರಕ್ಕೆ ಆಹ್ವಾನಿಸಿದರು. ಇದೇ ವೇಳೆ ನಗರದ ಎಸ್‍ಪಿ ವೃತ್ತದಲ್ಲಿ ಬೃಹತ್ ಗಾತ್ರದ ಹೂಮಾಲೆ ಹಾಕುವ ಮೂಲಕ ಸ್ವಾಗತ ಕೋರಿದರು.
ಇದೇ ವೇಳೆ ಸಿ.ಪಿ.ಯೋಗೀಶ್ವರ ಹೇಳಿಕೆ ವಿಚಾರವಾಗಿ ಮಾತನಾಡಿದ ಸಚಿವರು, ಸಂಕ್ರಾಂತಿ ವೇಳೆಗೆ ನಮ್ಮ ಸರ್ಕಾರ ಬೀಳುವುದಿಲ್ಲ..! ಯೋಗೀಶ್ ಹಗಲು ಗನಸು ಕಾಣುತ್ತಿದ್ದಾರೆ..! 5 ವರ್ಷಗಳ ಕಾಲ ಕರ್ನಾಟಕಕ್ಕೆ ಸುಭದ್ರ ಆಡಳಿತ ಕಾಂಗ್ರೇಸ್ ಸರ್ಕಾರ ನೀಡಲಿದೆ..! ಆದರೆ ಬಿಜೆಪಿಯವರು ಮುಂದಿನ ದಿನಗಳಲ್ಲಿ ಎಲ್ಲಿ ಅಧಿಕಾರದಲ್ಲಿ ಇರುವುದಿಲ್ಲ..! 2024ಕ್ಕೆ ಬಿಜೆಪಿ ಮುಕ್ತ ಭಾರತವಾಗುವುದು ಗ್ಯಾರಂಟಿ…! ಇಷ್ಟು ದಿನ ಬಿಜೆಪಿಯವರು ಕಾಂಗ್ರೆಸ್ ಮುಕ್ತ ಭಾರತ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುತ್ತೇವೆ ಎಂದು ಬೊಬ್ಬೆ ಹೊಡೆಯುತ್ತಿದ್ದರು. ಆದರೆ ಇದೀಗ ಕಾಲ ಬದಲಾಗಿದೆ. ಮುಂದಿನ ದಿನಗಳಲ್ಲಿ ನಡೆಯಲಿರುವ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಶ್ಚಿತ. ಹಾಗೆಯೇ ಕೇಂದ್ರದಲ್ಲಿಯೂ ಕಾಂಗ್ರೇಸ್ ಅಧಿಕಾರಕ್ಕೆ ಬರುವುದು ಗ್ಯಾರಂಟಿ..! ರಾಹುಲ್ ಗಾಂಧಿಯವರು ಪ್ರಧಾನ ಮಂತ್ರಿಯಾಗುವುದು ನಿಶ್ಚಿತ ಎಂದರು.
ಶಾಮನೂರು ಶಿವಶಂಕ್ರಪ್ಪ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಸಂತೋಷ್ ಲಾಡ್ , ನಮ್ಮ ಪಕ್ಷದ ಹಿರಿಯ ಶಾಸಕರಾದ ಶಾಮನೂರು ಶಿವಶಂಕ್ರಪ್ಪ ಅವರು ಯಾವ ಉದ್ದೇಶಕಾಗಿ ಆ ರೀತಿ ಹೇಳಿದ್ದಾರೆ ಗೊತ್ತಿಲ್ಲ…! ಅವರು ನೀಡಿರುವ ಹೇಳಿಕೆಯಂತೆ ಪ್ರಸ್ತುತ ನಮ್ಮಲ್ಲಿ ಇಲ್ಲ..! ಅವರು ಆ ಹೇಳಿಕೆಯನ್ನು ನೀಡಬಾರದಿತ್ತು…! ಸರ್ವರನ್ನು ಒಳಗೊಂಡ ಸಚಿವ ಸಂಪುಟ ನಮ್ಮ ಸರ್ಕಾರದ್ದಾಗಿದೆ. ವೀರಶೈವ ಲಿಂಗಾಯತ ಅಧಿಕಾರಿಗಳಿಗೆ ಯಾವುದೇ ರೀತಿಯ ತೊಂದರೆ ನಮ್ಮ ಸರ್ಕಾರದಿಂದ ಆಗಿಲ್ಲ.. ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಕಂಪ್ಲಿ ಶಾಸಕ ಜೆ.ಎನ್.ಗಣೇಶ್, ಕಾರ್ಪೋರೇಟರ್ ಪೇರಂ ವಿವೇಕ್, ಕುರುಬರ ಸಂಘದ ಅಧ್ಯಕ್ಷ ಬಿ.ಎಂ.ಪಾಟೀಲ್ ಸೇರಿದಂತೆ ಇನ್ನಿತರೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.