ಮದುವೆ ಋತುವಿಗಾಗಿ ಮೂರು ದಿನಗಳ ವರ್ಣರಂಜಿತ ‘ಏಷ್ಯಾ ವೆಡ್ಡಿಂಗ್‌ ಶೋ

ಏಷ್ಯಾ ವೆಡ್ಡಿಂಗ್ ಶೋ -2023 ’ ಆರಂಭ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಕಣ್ಣಿಗೆ ಹಬ್ಬ: ಮದುವೆ ಸಡಗರ ಹೆಚ್ಚಿಸಿರುವ ಮೇಳ

ಬೆಂಗಳೂರು: ಮದುವೆ ಋತು ಆರಂಭವಾಗಿರುವ ಸಂದರ್ಭದಲ್ಲೇ ವಧು – ವರರನ್ನು ಆಕರ್ಷಿಸಲು ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ‘ಏಷ್ಯಾ ವೆಡ್ಡಿಂಗ್‌ ಶೋ -2023’ ಆರಂಭವಾಗಿದೆ. ಇಂದಿನಿಂದ ಮೂರು ದಿನಗಳ ಕಾಲ ಮೈಮನಗಳನ್ನು ತಣಿಸುವ ಅತ್ಯಾಕರ್ಷಕ ವಡವೆ, ವಸ್ತ್ರ, ಬಣ್ಣ ಬಣ್ಣದ ಅಲಂಕಾರಿಕ ಸಮಸ್ತ ವಸ್ತುಗಳನ್ನೊಳಗೊಂಡ ಬಂಢಾರ ಅನಾವರಣಗೊಂಡಿದೆ.  ಮಾಜಿ ಶಾಸಕಿ ಸೌಮ್ಯ ರೆಡ್ಡಿ ಮೂರು ದಿನಗಳ ಏಷ್ಯಾ ವೆಡ್ಡಿಂಗ್ ಶೋಗೆ ಚಾಲನೆ ನೀಡಿದರು. ಶೀ ಫಾರ್ ಸೊಸೈಟಿಯ ಹರ್ಷಿಣಿ ವೆಂಕಟೇಶ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.  ನಂತರ ಮಾತನಾಡಿದ ಸೌಮ್ಯ ರೆಡ್ಡಿ, ಇದು ನಿಜಕ್ಕೂ ಕಣ್ಮನ ಸೆಳೆಯುವ ಮದುವೆ ಉತ್ಸವವಾಗಿದ್ದು, ಪ್ರತಿಯೊಂದು ವಸ್ತುಗಳು ಇಲ್ಲಿ ಲಭ್ಯವಿದೆ. ಜೀವನದಲ್ಲಿ ಮದುವೆ ಅತ್ಯಂತ ಸಂಭ್ರಮ ತರುತ್ತದೆ. ಇಂತಹ ಮಾರಾಟ ಮತ್ತು ಪ್ರದರ್ಶನ ಮೇಳ ಸಡಗರ – ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಆಚರಣೆಗಳನ್ನು ಅರ್ಥಪೂರ್ಣಗೊಳಿಸುತ್ತದೆ.   ಇಂತಹ ಅವಕಾಶವನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬಾರದು ಎಂದರು.  ಇಂದಿನಿಂದ ಇದೇ 10 ರ ವರೆಗೆ ಬೆಳಿಗ್ಗೆ 10.30 ರಿಂದ ರಾತ್ರಿ 8 ಗಂಟೆವರೆಗೆ ಪ್ರದರ್ಶನ ಇರಲಿದ್ದು, ಉಚಿತ ಪ್ರವೇಶ ಕಲ್ಪಿಸಲಾಗಿದೆ.

 ಈ ಬಾರಿ ಚಿನ್ನ ಲೇಪಿತ ಗೋಡೆ ಗಡಿಯಾರ, ಬೆಳ್ಳಿ ಒನಕೆ, ಸಾಂಪ್ರದಾಯಿಕ ವಸ್ತುಗಳು, ಟ್ರೆಂಡಿ ಆಭರಣಗಳು, ಬಗೆ ಬಗೆಯ ವಸ್ತ್ರಗಳು ಏಷ್ಯಾ ವೆಡ್ಡಿಂಗ್ ಶೋನ ಮೆರಗು ಹೆಚ್ಚಿಸಿವೆ.  ವಧುವಿಗೆ ಬೇಕಾಗಿರುವ ಕಾಂಚಿಪುರಂ, ಬನಾರಸ್‌ ಮತ್ತಿತರ ರೇಷ್ಮೇ ಸೀರೆಗಳು, ಅಮೂಲ್ಯ ಕಲ್ಲುಗಳು ಮತ್ತು ಹರಳುಗಳು, ಮದುವೆ ಆಯೋಜಕರ ನೆರವು,  ಮದುವೆ ಚಿತ್ರೀಕರಣಕ್ಕೆ ವ್ಯವಸ್ಥೆ, ಆಕರ್ಷಕ ಮದುವೆ ಉಡುಗೊರೆಗಳು ಹೀಗೆ ನಾನಾ ರೀತಿಯ ಸೇವೆ ಮತ್ತು ಸೌಕರ್ಯಗಳು  ಈ ಮೇಳದಲ್ಲಿ ದೊರೆಯುತ್ತಿವೆ.  ಮದುವೆಯನ್ನು ಅತ್ಯಂತ ಸುಗಮ ಮತ್ತು ಸುಲಲಿತಗೊಳಿಸುವ ವಿಶಿಷ್ಟವಾದ ಮೇಳ ಇದಾಗಿದೆ. ದೇಶದ ಪ್ರಮುಖ ಚಿನ್ನಾಭರಣ ಮಾರಾಟಗಾರರು ಮೇಳದಲ್ಲಿ ಭಾಗಿಯಾಗಿದ್ದು, ವಧುವಿಗೆ ಬೇಕಾಗಿರುವ ತಾಳಿ, ಕಾಲುಂಗರ, ನಕ್ಲೇಸ್, ವರನಿಗೆ ಅಗತ್ಯವಾಗಿರುವ ಚಿನ್ನಾಭರಣ ಖರೀದಿಗೆ ಇದು ಸೂಕ್ತ ವೇದಿಕೆಯಾಗಿದೆ. 

ಜೊತೆಗೆ ಐಶಾರಾಮಿ ಬ್ರ್ಯಾಂಡ್‌ ಗಳು ಸಹ ಇರಲಿದೆ. ರಾಜಾಜಿನಗರದ ‍ಶ್ರೀ ಗಣೇಶ್‌ ಡೈಮಂಡ್‌ ಅಂಡ್‌ ಜುವೆಲ್ಲರಿ, ಸಮ್ಯಕ್‌, ಪೋಥಿಸ್‌, ಕೀರ್ತಿಲಾಲ್‌, ಪಿಎಂಜೆ ಜುವೆಲ್ಲರ್ಸ್‌, ನವರತನ್‌ ಜುವೆಲ್ಲರ್ಸ್‌, ನಿಖಾಹಾರ್‌ ಜುವೆಲ್ಸ್‌, ಎಂ.ಪಿ. ಜುವೆಲ್ಲರ್ಸ್‌, ನಿರ್ಮಲ್ ಜುವೆಲ್ಲರ್ಸ್‌, ರಾಯಲ್‌ ಆರ್ಕಿಡ್ಸ್‌, ಲೌಕ್ಯಾ, ಬೆಂಗಳೂರಿನ ಗಿರಿರಾಜ್‌, ಸಿಂಹ ಜುವೆಲ್ಲರ್ಸ್‌, ಬೇಗಮ್ಸ್‌ ಬೈ ರಷ್ಮಿ, ಪನ್ನಾ ಜುವೆಲ್ಲರ್ಸ್‌, ಆಕಾರ್‌ ಕ್ರಿಯೇಷನ್ಸ್‌, ವಂಡರ್ ಡೈಮಂಡ್ಸ್‌, ಶೈನಿ ಜುವೆಲ್‌, ಸಪ್ತೋಶಿ ಜುವೆಲ್ಸ್‌, ರಾಜಾ ಟೈಮ್ಲೆಸ್‌ ಮತ್ತಿತರೆ ಆಭರಣ ಮಾರಾಟಗಾರರು ಮೇಳದಲ್ಲಿ ಭಾಗವಹಿಸಲಿದ್ದಾರೆ.

 

 ಹೆಚ್ಚಿನ ಮಾಹಿತಿಗೆ 9620461919 ಸಂಪರ್ಕಿಸಿ.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top