ಜಿಲ್ಲಾ ಮಟ್ಟದ 57 ನೇ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ

ಬಳ್ಳಾರಿ: ಜಿಲ್ಲಾ ಲೋಕ ಶಿಕ್ಷಣ ಸಮಿತಿ ವತಿಯಿಂದ ನಗರದ ಕರ್ನಾಟಕ ಪಬ್ಲಿಕ್ ಶಾಲೆ (ಬಾಲಕಿಯರ ಪ್ರೌಢಶಾಲೆ)ಯಲ್ಲಿ 57 ನೇ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಹಾಗೂ ಸಾಕ್ಷರತಾ ಸಪ್ತಾಹ ಕಾರ್ಯಕ್ರಮ ಶುಕ್ರವಾರ ಆಚರಿಸಲಾಯಿತು.

          ಡಯಟ್‍ನ ಪ್ರಾಂಶುಪಾಲರು ಹಾಗೂ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ (ಪ್ರಭಾರಿ) ಹನುಮಕ್ಕ ಅವರು ಸಾಕ್ಷರತಾ ಧ್ವಜಾರೋಹಣಾ ನೆರವೇರಿಸಿದರು.

 

          ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಗ್ರಂಥಾಲಯಾಧಿಕಾರಿ ಲಕ್ಷ್ಮಿಕಿರಣ್ ಅವರು ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮ ಮನೆಯ ಹಾಗೂ ನೆರೆಹೊರೆಯ ಅನಕ್ಷರಸ್ಥರಿಗೆ ಪ್ರತಿದಿನ ಬಿಡುವಿನ ವೇಳೆಯಲ್ಲಿ ಅಕ್ಷರ ಕಲಿಸುವುದರ ಮೂಲಕ ದೇಶದ ಅನಕ್ಷರತೆಯನ್ನು ಹೋಗಲಾಡಿಸಲು ಶ್ರಮಿಸಬೇಕು ಎಂದು ಕರೆ ನೀಡಿದರು.

ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಶಿವಪ್ರಕಾಶ ಚಿಗಟೇರಿ ಅವರು ಮಾತನಾಡಿ, ಪ್ರಸ್ತಕದಲ್ಲಿ ದೇಶ ಎದುರಿಸಿರುತ್ತಿರುವ ಅನೇಕ ಸಮಸ್ಯೆಗಳಿಗೆ ಅನಕ್ಷರತೆ ಮೂಲ ಕಾರಣವಾಗಿದ್ದು, ಶಿಕ್ಷಣ ಹೊರತಾದ ಜೀವನ ಇಂದಿನ ದಿನಗಳಲ್ಲಿ ಅತ್ಯಂತ ದಯನೀಯವಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರ ಹಾಗೂ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಸೇರಿ ವಯಸ್ಕ ಅನಕ್ಷಸ್ಥರಿಗೆ ಅಕ್ಷರದ ಬೆಳಕನ್ನು ನೀಡುವ ಸಾರ್ಥಕ ಕಾರ್ಯ ಮಾಡುತ್ತಿದೆ. 2030 ರ ವೇಳೆಗೆ ಕರ್ನಾಟಕ ರಾಜ್ಯವನ್ನು ಸಂಪೂರ್ಣ ಸಾಕ್ಷರತಾ ರಾಜ್ಯವನ್ನಾಗಿಸುವ ಗುರಿಯನ್ನು ಹೊಂದಲಾಗಿದೆ ಹಾಗೂ ಸರ್ವರಿಗೂ ಶಿಕ್ಷಣ-ಸರ್ವರಿಗೂ ಸಮಾನ ಜೀವನ ನಮ್ಮ ಮಂತ್ರವಾಗಬೇಕಾಗಿದೆ ಎಂದು ತಿಳಿಸಿದರು.

 

          ಡಯಟ್‍ನ ಉಪನ್ಯಾಸಕ ಹೆಚ್.ಕೆ.ಪಾಂಡು ಅವರು, 2022-23 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಅನುಷ್ಠಾನಗೊಂಡಿರುವ ವಿವಿಧ ಸಾಕ್ಷರತಾ ಕಾರ್ಯಕ್ರಮಗಳ ಮಾಹಿತಿ ನೀಡಿದರು.

ಶಿಕ್ಷಕರಾದ ಹರಿಪ್ರಸಾದ್ ಅವರು ಸಾಕ್ಷರತಾ ಪ್ರಮಾಣ ವಚನ ಬೋಧಿಸಿದರು.

 

ಈ ಸಂದರ್ಭದಲ್ಲಿ ಕಾರ್ಯಕ್ರಮ ಸಹಾಯಕ ಜಿ.ಭಾಸ್ಕರ ರೆಡ್ಡಿ, ಡಯಟ್‍ನ ಉಪನ್ಯಾಸಕ ಗಂಗಾಧರ, ಮುಖ್ಯ ಗುರುಗಳಾದ ಜಾಯಿ ಡೆಬೋರ ಸೇರಿದಂತೆ ಶಾಲೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಚಿಗುರು ಕಲಾ ತಂಡದಿಂದ ಸಾಕ್ಷರತಾ ಗೀತೆಗಳನ್ನು ಪ್ರಸ್ತುತ ಪಡಿಸಿದರು.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top